ಚಿಕ್ಕಬಳ್ಳಾಪುರ: ಕಾರಿನಲ್ಲಿ ಬಂದು ಬೈಕ್ ಕಸಿದು ಪರಾರಿಯಾದ ಖದೀಮರು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಟಹಳ್ಳಿ-ಚಿನ್ನಸಂದ್ರ ಬಳಿ ನಡೆದ ಘಟನೆ
ಚಿಕ್ಕಬಳ್ಳಾಪುರ(ಸೆ.10): ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರ ಮೂಲದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಆತನ ಮೇಲೆ ಹಲ್ಲೆ ನಡೆಸಿ ಬೈಕ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಟಹಳ್ಳಿ-ಚಿನ್ನಸಂದ್ರ ಬಳಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಲಕಲಚೇರವು ಮಂಡಲಂ. ಪಿ.ಸಂತೋಷ್ ಬಿನ್ ಪಂದ್ಯಾಲ ಸುರೇಶ್ ಕುಮಾರ್ ಎಂಬುವರು ಗಣೇಶ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದು ಪುನಃ ಕೆಲಸಕ್ಕೆ ಬೆಂಗಳೂರಿಗೆ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಸಂತೋಷ್ ರಾತ್ರಿ 12.30 ಗಂಟೆ ಸಮಯದಲ್ಲಿ ಕುರುಟಹಳ್ಳಿ ಚಿನ್ನಸಂದ್ರ ಗ್ರಾಮಗಳ ಮದ್ಯೆ ಅಂದರೆ ಮುನಗನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಯಾರೋ ಇಬ್ಬರು ಕಿಡಿಗೇಡಿಗಳು ಕಾರಿನಲ್ಲಿ ವೇಗವಾಗಿ ಬಂದು ನನ್ನ ದ್ವಿಚಕ್ರ ವಾಹನವನ್ನು ತಡೆದು, ಇಬ್ಬರು ವ್ಯೆಕ್ತಿಗಳು ಕಾರಿನಿಂದ ಬಂದು ನನ್ನನ್ನು ಹೊಡೆದು ನನ್ನ ಹತ್ತಿರ ಇದ್ದ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಅಲ್ಲಿಂದ ವಾಹನವನ್ನು ಕಳವು ಮಾಡಿಕೊಂಡು ಬೆಂಗಳೂರಿನ ಮಾರ್ಗದಲ್ಲಿ ಹೊರಟು ಹೋದರು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Bengaluru Crime: ಐಷಾರಾಮಿ ಕಾರು ಕದ್ದು ತಂದು ಬೆಂಗ್ಳೂರಲ್ಲಿ ಮಾರಾಟ, ಇಬ್ಬರ ಬಂಧನ
ಮಹಿಳೆಯ ಸರ ಕಸಿದು ಪರಾರಿ
ತನ್ನ ಮುಖ ಗುರುತು ಸಿಗದಂತೆ ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸಿ ಮಹಿಳೆ ಇದ್ದ ಮನೆಗೆ ನುಗ್ಗಿ ಲಕ್ಷಾಂತರ ರು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.
ವಿನೋದಮ್ಮ ಕೋಂ ರಾಜಣ್ಣ (35) ಈ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಬೆಳಿಗ್ಗೆ ಮಕ್ಕಳು ಕಾಲೇಜಿಗೆ ಹೋಗಿದ್ದು ನನ್ನ ಗಂಡ ಸ್ವಂತ ಕೆಲಸದ ಮೇಲೆ ಚಿಂತಾಮಣಿ ನಗರಕ್ಕೆ ಹೋಗಿದ್ದರು. ಮಧ್ಯಾಹ್ನ ಸುಮಾರು 12.00 ಗಂಟೆಯಲ್ಲಿ ಕೆಳಗಿನ ರೇಷ್ಮೆ ಗೂಡು ಸಾಗಾಣಿಕೆ ಮನೆಯ ಬಾಗಿಲು ಹಾಕಿಕೊಂಡು ಮೇಲ್ಭಾಗದಲ್ಲಿರುವ ಮನೆಯ ಹಾಲ್ ನಲ್ಲಿ ನಾನು ಒಬ್ಬಳೇ ಮನೆಯ ಬಾಗಿಲು ಮುಚ್ಚದೆ ದಿವಾನದ ಮೇಲೆ ಕುಳಿತು ಟಿ.ವಿ ನೋಡುತ್ತಿದ್ದಾಗ 30 ರಿಂದ 35 ರ್ವದ ಯಾರೋ ಒಬ್ಬ ಆಸಾಮಿ ಕಪ್ಪು ಬಣ್ಣದ ಹೆಲ್ಮೆಟ್ ಅನ್ನು ತಲೆಗೆ ಮುಖ ಕಾಣದಂತೆ ಧರಿಸಿ ನಮ್ಮ ಮನೆಯ ಒಳಗಡೆ ಬಂದಿದ್ದಾನೆ.
ಆಗ ವಿನೋದಮ್ಮ ಯಾರು ನೀನು ಎಂದು ಜೋರಾಗಿ ಕಿರುಚಿದ್ದಾರೆ. ಆತ ಕೂಡಲೇ ಆಕೆಯನ್ನು ಪಕ್ಕದಲ್ಲಿಯೇ ಇದ್ದ ರೂಮಿಗೆ ಎಳೆದುಕೊಂಡು ಹೋಗಿ, ಆಕೆಯ ಕತ್ತಿನಲ್ಲಿದ್ದ ಸುಮಾರು 2,50,000 ರು, ಬೆಲೆ ಬಾಳುವ ಮಾಂಗಲ್ಯ ಸರ ಕಿತ್ತುಕೊಂಡು, ರೂಮಿನ ಬಾಗಿಲ ಚಿಲಕ ಹಾಕಿ ಓಡಿ ಹೋಗಿದ್ದಾನೆ. ಪ್ರಕಣ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.