Gadag: ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಪೊಲೀಸರಿಂದ ಅಮಾಯಕ ಯುವಕರ ಮೇಲೆ ಹಲ್ಲೆ!

ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿಗಳು ವಿಚಾರಣೆ ಹೆಸರಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

Gadag Police beat up 3 youths allegedly for cheating case gvd

ಗದಗ (ಸೆ.22): ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿಗಳು ವಿಚಾರಣೆ ಹೆಸರಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚೀಟಿಂಗ್ ಕೇಸ್‌ಗೆ ಸಂಬಂಧಿಸಿದಂತೆ ತಿಮ್ಮಾಪುರ ಗ್ರಾಮದ ಕಳಕಪ್ಪ ಹಡಪದ, ಮಂಜುನಾಥ್ ಗುಡಿಗೇರಿ, ನಾಗರಾಜ್ ಬೂದುಗುಂಪ ಎಂಬುವವರನ್ನ ಬುಧವಾರ ಮಧ್ಯಾಹ್ನ 1 ಗಂಟೆಗೆ ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿವರೆಗೆ ವಿವಿಧೆಡೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸ್ತಿದ್ದಾರೆ. ಮಫ್ತಿಯಲ್ಲಿದ್ದ ನಾಲ್ವರು ಪೊಲೀಸರು ಮೂವರಿಗೆ ಚಿತ್ರಹಿಂಸೆ ನೀಡಿ ಅಮಾನುಷವಾಗಿ ಹೊಡೆದಿದ್ದಾರೆ. 

ಯುವಕರಿಂದ ಹಣ ಪಡೆದು ಕುಡಿದು ಹಲ್ಲೆ ಮಾಡಿದ ಪೊಲೀಸರು: ಮಧ್ಯಾಹ್ನ ತಿಮ್ಮಾಪುರಕ್ಕೆ ಹೋಗಿದ್ದ ನಾಲ್ವರು ಸಿಬ್ಬಂದಿ, ಕಳಕಪ್ಪ ಹಡಪದ್, ಮಂಜುನಾಥ್ ಗುಡಿಗೇರಿ, ನಾಗರಾಜ್ ಅವರನ್ನ ಕಾರು ಹತ್ತಿಸಿಕೊಂಡಿದ್ರು. ಅಲ್ಲಿಂದ ಸೀದಾ ನೆರೇಗಲ್ ಪಟ್ಟಣಕ್ಕೆ ಬಂದು, ಕಳಕಪ್ಪ ಬಳಿ 2 ಸಾವಿರ ರೂಪಾಯಿ ಕಿತ್ಕೊಂಡು ಅದೇ ಹಣದಲ್ಲಿ ಬೀರ್ ತಗೊಂಡು ಕುಡಿದಿದಾರೆ. ಅಲ್ಲಿಂದ ಬಿಂಕದಕಟ್ಟಿ ಹೆದ್ದಾರಿ ಬಳಿ ಬಂದು ಮೂವರ ಮೇಲೆ ಹಲ್ಲೆ ಮಾಡ್ಲಾಗಿದ್ಯಂತೆ. ಮತ್ತೆ ಅಲ್ಲಿಂದ ವಿಚಾರಣೆ ನೆಪ ಮಾಡ್ಕೊಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದಿದಾರೆ. ಗ್ರಾಮಾಂತರ ಠಾಣೆಯ ಕ್ರೈಮ್ ಪಿಎಸ್‌ಐ ಶರಣಮ್ಮ ಕವಲೂರು ಅವರು ವಿಚಾರಣೆ ನಡೆಸಿದ್ರು. ಅಲ್ಲಿಂದ ಬಿಂಕದಕಟ್ಟಿ ಹೊರಠಾಣೆ ಕರೆದೊಯ್ದು ಹಗ್ಗಕ್ಕೆ ತೂಗಿಹಾಕಿ ಹಲ್ಲೆ ಮಾಡಿದಾರೆ. ಕಳಕಪ್ಪ, ಮಂಜುನಾಥ್ ಎದೆ, ಬೆನ್ನು, ಬೆನ್ನಿನ ಕೆಳಭಾಗಕ್ಕೆ ಬಲವಾಗಿ ಹೊಡೆದಿದಾರೆ. ದೇಹದ ಮೇಲೆ ಬಾಸುಂಡೆ ಬೀಳುವಂತೆ ಅಮಾನುಷವಾಗಿ ಹಲ್ಲೆ ಮಾಡಿದಾರೆ.

Gadag: ಡೋಣಿ ಭಾಗದಲ್ಲಿ ಆತಂಕ ಮೂಡಿಸಿದ ಕೀಟ: ಇದನ್ನ ಸ್ಪರ್ಶಿಸಿದರೆ ವಾಂತಿ, ದೇಹದಲ್ಲಿ ತುರಿಕೆ

ಪರೀಕ್ಷೆಗೆ ಹೋಗಿ ಬರ್ತೇನೆ ಅಂದ್ರೂ ಬಿಡ್ಲಿಲ್ಲ: ಬುಲೆರೊ ವಾಹನ ಹೊಂದಿರೋ ಕಳಕಪ್ಪ ಸಣ್ಣಪುಟ್ಟ ಬಾಡಿಗೆ ಓಡ್ಕೊಂಡು ಜೀವನ ನಡೆಸ್ತಾನೆ. ಗ್ರಾಮದಲ್ಲೇ ಟ್ರ್ಯಾಕ್ಟರ್ ಬಾಡಿಗೆ ಓಡಸ್ಕೊಂಡು ಮಂಜುನಾಥ್ ಜೀವನ ನಡೆಸ್ತಾನೆ. ನಾಗರಾಜ್ ಬೂದುಗುಂಪ ಅನ್ನೋರು ಗದಗನ ಖಾಸಗಿ ಕಾಲೇಜೊಂದ್ರಲ್ಲಿ ವಿದ್ಯಾಭ್ಯಾಸ ಮಾಡ್ತಿದಾರೆ. ನಿನ್ನೆ ಕಾಲೇಜಿನಲ್ಲಿ ಟೆಸ್ಟ್ ಇತ್ತಂತೆ. ಟೆಸ್ಟ್ ಗಲಗೆ ಹಾಜರಾಗಲು ಬಿಡದಂತೆ ಪೊಲೀಸರು, ನಾಗರಾಜ್‌ನನ್ನ ಕರ್ಕೊಂಡು ಹೋಗಿದ್ರು. ಅಲ್ಲಿ ನಾಗರಾಜನಿಗೂ ತೊಡೆಯ ಮೇಲೆ ಲಾಠಿ ಉರುಳಿಸಿ ಚಿತ್ರಹಿಂಸೆ ನೀಡಿದ್ರಂತೆ. 

ಯಾವ ಕೇಸ್‌ನ ವಿಚಾರವಾಗಿ ಅಮಾಯಕರ ಮೇಲೆ ಹಲ್ಲೆ?: ಬಾಗಲಕೋಟೆ ಮೂಲಕ ಮಹಿಳೆಯೊಬ್ರು ಚೀಟಿಂಗ್ ಕೇಸ್‌ಗೆ ಸಂಬಂಧಿಸಿಂತೆ ಮೌಖಿಕ ದೂರು ನೀಡಿದ್ರಂತೆ. ಮೂಲಗಳ ಪ್ರಕಾರ ಪ್ರಕರಣ ದಾಖಲಿಸದೇ ಪೊಲೀಸರು ತನಿಖೆ ನಡೆಸಿದ್ರು. ಚಿನ್ನ ಡಬ್ಲಿಂಗ್ ವಿಷಯಕ್ಕೆ ಬಾಗಲಕೋಟೆ ಮೂಲದ ಮಹಿಳೆ ಮೋಸ ಹೋಗಿದ್ರು. ಮಹಿಳೆ ನೀಡಿದ ಮಾಹಿತಿ ಪಡೆದು ಪೊಲೀಸರು ಹಿಂದೆ ಮುಂದೆ ಯೋಚ್ನೆ ಮಾಡ್ದೆ, ಮೂವರನ್ನ ಎತ್ತಾಕ್ಕೊಂಡು ಬಂದಿದ್ರು ಎನ್ನಲಾಗ್ತಿದೆ‌‌. ಟವರ್ ಲೊಕೇಷನ್ ಮಾಹಿತಿ ಪಡೆದಾಗ ಕೇಸ್‌ಗೆ ಹಾಗೂ ಇವರಿಗೆ ಸಂಬಂಧ ಇಲ್ಲ ಅನ್ನೋದು ಗೊತ್ತಾಗಿದೆ. ನಂತರ ಪೊಲೀಸರು ಬಿಟ್ಟು ಕಳ್ಸಿದಾರೆ ಅಂತಾ ಹೇಳಲಾಗ್ತಿದೆ. 

Gadag: ವ್ಯವಸ್ಥೆ ಸರಿ ಹೋಗ್ತಿಲ್ಲ, ರಾಜೀನಾಮೆ ಕೊಡುತ್ತೇನೆ: ಕನ್ನಡ ಪ್ರಭಗೆ ಪತ್ರ ಬರೆದ ಗ್ರಾಮ ಪಂಚಾಯ್ತಿ ಸದಸ್ಯ

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ತಿಮ್ಮಾಪುರ ಗ್ರಾಮಸ್ಥರು: ಮೂವರಿಗೂ ಯಾವುದೇ ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲ. ತಾವಾಯ್ತು ತಮ್ಮ ಕುಟುಂಬವಾಯ್ತು ಅಂತಾ ಇದ್ದವರು. ಮೂವರು ಅಮಾಕರ ಮೇಲೆ ಹಲ್ಲೆ ಮಾಡಿರೋ ಪೊಲೀಸರನ್ನ ಅಮಾನತು ಮಾಡ್ಬೇಕು. ಕೇಸ್‌ನ ಸರಿಯಾದ ತನಿಖೆಯನ್ನ ಮಾಡ್ಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.

Latest Videos
Follow Us:
Download App:
  • android
  • ios