Asianet Suvarna News Asianet Suvarna News

Gadag: ಡೋಣಿ ಭಾಗದಲ್ಲಿ ಆತಂಕ ಮೂಡಿಸಿದ ಕೀಟ: ಇದನ್ನ ಸ್ಪರ್ಶಿಸಿದರೆ ವಾಂತಿ, ದೇಹದಲ್ಲಿ ತುರಿಕೆ

ಹೋಬಳಿಯ ಡೋಣಿ ಗ್ರಾಮದ ಭಾಗದಲ್ಲಿ ಅತಿಯಾದ ಮಳೆಯಾದ ಬಳಿಕ ಕೊಳೆಯುತ್ತಿರುವ ಬೆಳೆಗಳ ಮಧ್ಯೆ ಹಲವು ಬಗೆಯ ಕೀಟಗಳು ಸಮಸ್ಯೆ ಉಂಟು ಮಾಡುತ್ತಿವೆ. ಹಲವು ಅಡ್ಡಿ-ಆತಂಕಗಳ ನಡುವೆ ಅಳಿದುಳಿದ ಬೆಳೆ ಕೊಯ್ಲಿಗೆ ಹೊರಟ ರೈತರಿಗೆ ಈ ಕೀಟಗಳು ತಲೆನೋವು ತರುತ್ತಿವೆ.

Dangerous insects found in gadag villages farmers scared lot gvd
Author
First Published Sep 21, 2022, 11:08 PM IST

ಡಂಬಳ (ಸೆ.21): ಹೋಬಳಿಯ ಡೋಣಿ ಗ್ರಾಮದ ಭಾಗದಲ್ಲಿ ಅತಿಯಾದ ಮಳೆಯಾದ ಬಳಿಕ ಕೊಳೆಯುತ್ತಿರುವ ಬೆಳೆಗಳ ಮಧ್ಯೆ ಹಲವು ಬಗೆಯ ಕೀಟಗಳು ಸಮಸ್ಯೆ ಉಂಟು ಮಾಡುತ್ತಿವೆ. ಹಲವು ಅಡ್ಡಿ-ಆತಂಕಗಳ ನಡುವೆ ಅಳಿದುಳಿದ ಬೆಳೆ ಕೊಯ್ಲಿಗೆ ಹೊರಟ ರೈತರಿಗೆ ಈ ಕೀಟಗಳು ತಲೆನೋವು ತರುತ್ತಿವೆ. ಡೋಣಿ ಭಾಗದ ಹೊಲಗಳಲ್ಲಿ ಸೈನಿ ಓಕ್‌ ಸ್ಲಗ್‌ ಎಂಬ ಕೀಟ ಕಂಡುಬಂದಿದೆ. ಸಿದ್ದಪ್ಪ ಕುರ್ತಕೋಟಿ ಎಂಬ ರೈತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಕೀಟ ತಗುಲಿ ಅಸ್ವಸ್ಥರಾಗಿದ್ದರು. ವಾಂತಿ, ದೇಹದಲ್ಲಿ ತುರಿಕೆ, ಬಾವು ಮತ್ತಿತರ ಸಮಸ್ಯೆಗಳು ಅವರಲ್ಲಿ ಕಂಡುಬಂದಿತ್ತು. 

ಇದು ಡೋಣಿ ಸುತ್ತಮುತ್ತಲಿನ ರೈತರಲ್ಲಿ ಆತಂಕ ಮೂಡಿಸಿದೆ. ಡೋಣಿ ಗ್ರಾಮದ ರೈತ ಶಂಕರಗೌಡ ಜಾಯನಗೌಡರ ಅವರ ಈ ಕೀಟವನ್ನು ಡಬ್ಬಿಯಲ್ಲಿ ಸೆರೆಹಿಡಿದು ಜಂಟಿ ಕೃಷಿ ನಿರ್ದೇಶಕ ಜಿಲಾಉಲ್ಲಾ ಅವರಿಗೆ ನೀಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಇಂತಹ ಕೀಟಬಾಧೆಯಿಂದ ರಕ್ಷಣೆ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಡೋಣಿ ಭಾಗದ ರೈತರು ಆಗ್ರಹಿಸಿದ್ದಾರೆ.

Gadag: ವ್ಯವಸ್ಥೆ ಸರಿ ಹೋಗ್ತಿಲ್ಲ, ರಾಜೀನಾಮೆ ಕೊಡುತ್ತೇನೆ: ಕನ್ನಡ ಪ್ರಭಗೆ ಪತ್ರ ಬರೆದ ಗ್ರಾಮ ಪಂಚಾಯ್ತಿ ಸದಸ್ಯ

ಇದು ಭಯಾನಕ ಹುಳು. ಇದ​ನ್ನು ಧಾರವಾಡ ಕೃಷಿ ವಿಜ್ಞಾನ ಕೇಂದ್ರಕ್ಕೆ ಪರಿಶೀಲನೆಗೆ ಕಳುಹಿಸಲಾಗುತ್ತದೆ. ರೈತರು ಎಚ್ಚರಿಕೆಯಿಂದ ಇರಬೇಕು.
-ಜಿಯಾವುಲ್ಲಾ ಕೆ., ಕೃಷಿ ಜಂಟಿ ನಿರ್ದೇಶಕ ಗದಗ

ಈಗಾಗಲೆ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸರ್ಕಾರ ನಮಗೆ ಶೀಘ್ರ ಪರಿಹಾರ ಒದಗಿಸಬೇಕು ಮತ್ತು ಇಂತಹ ಕೀಟಬಾಧೆ ತಡೆಯಲು ಮತ್ತು ಬೆಳೆ ಸಂರಕ್ಷಣೆ ವಿಷಯವಾಗಿ ರೈತರಿಗೆ ಕೃಷಿ ಇಲಾಖೆ ಸೂಕ್ತ ಸಲಹೆ ಕೊಡಬೇಕು.
-ಶಂಕರಗೌಡ ಜಾಯನಗೌಡರ ಡೋಣಿ ಗ್ರಾಮದ ರೈತ

ಗಜೇಂದ್ರಗಡದಲ್ಲಿ ಅಪರೂಪದ ಇರುವೆ ರೀತಿಯ ಕೀಟ ಪತ್ತೆ: ದಕ್ಷಿಣ ಭಾರತದ ಹುಲ್ಲುಗಾವಲು ಮತ್ತು ತೆರೆದ ಪೊದೆಗಳಲ್ಲಿ ಕ್ಯಾಲಿಸ್ಸೆಡೆ ಕುಟುಂಬಕ್ಕೆ ಸೇರಿದ ಇರುವೆಯನ್ನು ಅನುಕರಣೆ ಮಾಡುವ ವಿರಳ ಪ್ಲ್ಯಾಂಟ್‌ಹಾಪರ್‌ ಕೀಟವು ಗಜೇಂದ್ರಗಡದಲ್ಲಿ ಕಂಡುಬಂದಿದ್ದು, ವೈಜ್ಞಾನಿಕವಾಗಿ ಇದನ್ನು ಫಾರ್ಮಿಸ್ಕುರಾ ಇಂಡಿಕಸ್‌ ಎಂದು ಕರೆಯುತ್ತಾರೆ. ಈ ಅಪರೂಪದ ಕೀಟವು ನೋಡಲು ಇರುವೆಯಂತೆಯೇ ಇರುತ್ತದೆ. ಆದರೆ ಅದರ ಬೆನ್ನಮೇಲೆ 2 ಹೊಳೆಯುವ ತಿಳಿನೀಲಿ ಚುಕ್ಕೆಗಳು ತುಂಬಾ ಆಕರ್ಷವಾಗಿ ಕಾಣುತ್ತವೆ. ಇದರ ದೇಹವು ಸುಮಾರು 5 ಮಿಮೀ ಗಾತ್ರದಾಗಿದೆ. ಇದರ ಎರಡು ತುದಿಗಳು ಒಂದೇ ರೀತಿ ಗೋಚರಿಸುವುದರಿಂದ ಇದನ್ನು ಅಂಡಮುಖ ಎಂದು ಕರೆಯಬಹುದು.

Chikkamagaluru: ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ಪ್ಲಾಂಟ್‌ಹಾಪರ್‌ ಪ್ರಭೇದವು ಹಂಚಿಕೆಯಾಗಿದ್ದು, ಪ್ರಥಮಬಾರಿಗೆ ಇದು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಕೃಷಿ ವಿಜ್ಞಾನಿಗಳಾದ ಸಿ.ಎ. ವಿರಕ್ತಮಠ ಅವರು 2011ರಲ್ಲಿ ಪತ್ತೆ ಹಚ್ಚಿದ್ದರು. ಆನಂತರ ಚಿನ್ಮಯ್‌ ಸಿ. ಮಳಿಯೆ 2020ರಲ್ಲಿ ಬೆಂಗಳೂರಿನ ತಮ್ಮ ನಿವಾಸದ ಹತ್ತಿರವಿರುವ ಕೆರೆದಡದ ಹುಲ್ಲುಗಾವಲಿನಲ್ಲಿ ಕಂಡಿದ್ದರು. ಜೀವ ವೈವಿಧ್ಯ ಸಂಶೋಧಕ ಮಂಜುನಾಥ ಎಸ್‌. ನಾಯಕ, ಸಂಗಮೇಶ ಎಸ್‌. ಕಡಗದ, ಶರಣು ಗೌಡರ ಅವರ ತಂಡ ಉತ್ತರ ಕರ್ನಾಟಕದ ಶುಷ್ಕ ಹುಲ್ಲುಗಾವಲಿನಲ್ಲಿ ಈ ಪ್ರಭೇದವನ್ನು ಪ್ರಥಮ ಬಾರಿ ಕಂಡು, ದಾಖಲಿಸಿದ್ದಾರೆ. ಕೆಲವೇ ಕೆಲವು ಗಂಡುಕೀಟಗಳು ಮಾತ್ರ ತಮ್ಮ ಸಂಗಾತಿಯನ್ನು ಆಕರ್ಷಿಸಲು ಮತ್ತು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಮೈರ್ಮೆಕೊಮಾರ್ಫಿ ಪ್ರದರ್ಶಿಸುವ ಸಾಮರ್ಥ್ಯ ಹೊಂದಿವೆ.

Follow Us:
Download App:
  • android
  • ios