Gadag: ವ್ಯವಸ್ಥೆ ಸರಿ ಹೋಗ್ತಿಲ್ಲ, ರಾಜೀನಾಮೆ ಕೊಡುತ್ತೇನೆ: ಕನ್ನಡ ಪ್ರಭಗೆ ಪತ್ರ ಬರೆದ ಗ್ರಾಮ ಪಂಚಾಯ್ತಿ ಸದಸ್ಯ
ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯ್ತಿ ಸದಸ್ಯನಾಗಿರೋ ಮೊಹಮ್ಮದ್ ರಫೀಕ್ ಕರ್ನಾಚಿ ಅವರು ಕನ್ನಡ ಪ್ರಭ ಪತ್ರಿಕೆಗೆ ಪತ್ರ ಬರೆದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಗದಗ (ಸೆ.21): ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯ್ತಿ ಸದಸ್ಯನಾಗಿರೋ ಮೊಹಮ್ಮದ್ ರಫೀಕ್ ಕರ್ನಾಚಿ ಅವರು ಕನ್ನಡ ಪ್ರಭ ಪತ್ರಿಕೆಗೆ ಪತ್ರ ಬರೆದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 2020ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸವಡಿ ಗ್ರಾಮದ 4 ನೇ ವಾರ್ಡ್ ನಂಬರ್‌ನಿಂದ ಆಯ್ಕೆಯಾಗಿದ್ದ ರಫೀಕ್, ಆಡಳಿತ ಸುಧಾರಣೆ ಆಗ್ತಿಲ್ಲ. ಜನ ವಿರೋಧಿ ಚಟುವಟಿಕೆಯಿಂದ ಬೇಸತ್ತು ರಾಜೀನಾಮೆ ನೀಡ್ತಿದಿನಿ ಎಂದು ಪತ್ರದಲ್ಲಿ ಬರೆದುಕೊಂಡಿದಾರೆ.
ಗ್ರಾಮ ಪಂಚಾಯ್ತಿಯ ಆಡಳಿತ ವರ್ಗದಿಂದ ದೀನ ದಲಿತರ ಪರವಾಗಿ ಸವಲತ್ತು ಕೊಡಿಸೋದಕ್ಕೆ ಆಗ್ತಿಲ್ಲ. ಬಡವರಿಗೆ, ರೈತರಿಗೆ ಯೋಜನೆಗಳನ್ನ ತಲುಪಿಸಲು ಆಗ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರಫೀಕ್, ಗ್ರಾಮದ ಶಾಲೆ, ಅಂಗನವಾಡಿ ಕಟ್ಟಡ ದುರಸ್ಥಿ ಮಾಡಿಸೋದಕ್ಕೆ ಸಾಧ್ಯವಾಗ್ತಿಲ್ಲ ಅಂತಾ ಹೇಳಿಕೊಂಡಿದಾರೆ. ಎರಡು ವರ್ಷದಿಂದ ಕಟ್ಟಡ ದುರಸ್ಥಿ ಮಾಡಿಸಬೇಕೆಂದು ಅಧಿಕಾರಿಗಳಿಗೆ ಹೇಳಿಕೊಳ್ಳಲಾಗ್ತಿದೆ. ಆದರೆ ಈವರೆಗೂ ದುರಸ್ಥಿ ಆಗ್ತಿಲ್ಲ. ಮಳೆ ಬಂದರೆ ಶಿಥಿಲವಾಗಿರೋ ಛಾವಣಿಯಿಂದ ಜಿನುಗುತ್ತೆ, ದುರಸ್ಥಿ ಮಾಡಿಸುವ ಮನಸ್ಸಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅಂತಾ ರಫಿಕ್ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ಬಳಿ ಹೇಳಿಕೊಂಡಿದ್ದಾರೆ.
ಗದಗ-ಬೆಟಗೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಕೋಲಾಹಲ, ರಂಪಾಟ
ಇನ್ನು ದನದ ಕೊಟ್ಟಿಗೆ ನಿರ್ಮಿಸಿಕೊಂಡ ಎಸ್‌ಸಿ ಎಸ್‌ಟಿ ಸಮುದಾಯದ ಜನರಿಗೆ 2ರಿಂದ 3 ವರ್ಷದಿಂದ ಪೇಮೆಂಟ್ ಆಗ್ತಿಲ್ಲ. ಮಾತ್ರವಲ್ಲದೇ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಸಿಸಿ ರಸ್ತೆ, ಗಟಾರು ಕೆಲಸ ಮಾಡಿದ ಗುತ್ತಿಗೆದಾರರಿಗೂ ಸರಿಯಾಗಿ ಪೇಮೆಂಟ್ ಆಗುತ್ತಿಲ್ಲ. ಇಷ್ಟೆಲ್ಲಾ ವ್ಯವಸ್ಥೆ ನೋಡ್ಕೊಂಡು ಇರೋದಕ್ಕೆ ನನ್ನಿಂದ ಆಗ್ತಿಲ್ಲ. ಹೀಗಾಗಿ ರಾಜೀನಾಮೆ ಕೊಡ್ತಿದಿನಿ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ತಿಳಿಸಬೇಕಿದೆ. ಸದ್ಯ ಗ್ರಾಮದ ನಾಲ್ಕನೇ ವಾರ್ಡ್‌ನ ನಾಗರಿಕರು ಕ್ಷಮಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.