Asianet Suvarna News Asianet Suvarna News

Love failure : ಪ್ರೀತಿ ಒಪ್ಪದವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ!

* ಪ್ರೀತಿ ಒಪ್ಪದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ
* ಯುವತಿಗೆ ಬೆಂಕಿ ಇಟ್ಟು ತಾನು ಸುಟ್ಟುಕೊಂಡ
* ಗಂಭೀರ ಗಾಯಗೊಂಡಿರುವ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ
* ಪಾಗಲ್ ಪ್ರೇಮಿಯ ಘೋರ ಕೃತ್ಯ

Fuming over proposal rejection youth sets girl, self on fire Andhra Pradesh Crime News mah
Author
Bengaluru, First Published Nov 15, 2021, 7:55 PM IST
  • Facebook
  • Twitter
  • Whatsapp

ವಿಶಾಖಪಟ್ಟಣಂ (ನ. 15)  ಆಂಧ್ರಪ್ರದೇಶದ (Andhra Pradesh) ವೈಜಾಗ್‌ನ ಖಾಸಗಿ ಲಾಡ್ಜ್‌ನಲ್ಲಿ ಯುವಕನೊಬ್ಬ  ತನ್ನ ಪ್ರಿಯತಮೆಗೆ (Lover) ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಇಟ್ಟು ತಾನು  ಸುಟ್ಟುಕೊಂಡಿದ್ದಾನೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿ ಇಟ್ಟ ಯುವಕನನ್ನು  (Telangana) ಭೂಪಾಲಪಲ್ಲೆ ಮೂಲದ ಹರ್ಷವರ್ಧನ್ ಪಿ ಎಂದು ಗುರುತಿಸಲಾಗಿದೆ. ಯುವತಿ ವಿಶಾಖಪಟ್ಟಣ ಮೂಲದವರು. ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು.  ಕೊರೋನಾ (Coronavirus) ನಂತರ ಇಬ್ಬರು ಮನೆ ಸೇರಿಕೊಂಡಿದ್ದರು.

ಗಿಡಗಳಿಗೆ ನೀರು ಹಾಕುತ್ತಿದ್ದ ಯುವತಿ ಶೂಟ್ ಮಾಡಿ ಎಸ್ಕೇಪ್

ಗಾಯಗೊಂಡಿರುವ ಯುವತಿ ಸಹ ಹೇಳಿಕೆ ನೀಡಿದ್ದಾರೆ. ಹರ್ಷವರ್ಧನ್ ಹುಡುಗಿ ಮುಂದೆ ಪ್ರಪೋಸಲ್  ಇಟ್ಟಿದ್ದು ಈಕೆ ತಿರಸ್ಕರಿಸಿದ್ದಳು.  ಇದೇ ಕಾರಣಕ್ಕೆ  ಕೋಪಗೊಂಡ ಯುವಕ ವೈಜಾಗ್ ಗೆ ಬಂದಿದ್ದಾನೆ.  ಇಬ್ಬರು ಭೇಟಿಯಾದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನು ಸುಟ್ಟುಕೊಂಡಿದ್ದಾನೆ. ಇವರ ಅರಚಾಟ ಕೇಳಿದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ಆತನ ಪ್ರಪೋಸಲ್ ರಿಜೆಕ್ಟ್  ಮಾಡಿದ್ದಳು. ಇದೇ ಕಾರಣಕ್ಕೆ ನವೆಂಬರ್  12  ರಂದು ಆಗಮಿಸಿ ತಮ್ಮ ರಿಲೇಶನ್ ಶಿಪ್ ಬಗ್ಗೆ ಮಾತನಾಡಬೇಕು ಎಂದು ಯುವತಿಯನ್ನು ಖಾಸಗಿ ವಸತಿಗೃಹಕ್ಕೆ ಕರೆಸಿಕೊಂಡಿದ್ದಾನೆ.  ಪೊಲೀಸರು ಹೇಳುವಂತೆ ಯುವಕ ಯುವತಿ ಸೆ.  8 ರಂದು ಘಟನೆ ನಡೆದಿದ್ದ ಲಾಡ್ಜ್ ಗೆ ಚೆಕ್ ಇನ್ ಆಗಿದ್ದರು.

ಯುವತಿ ಕಂಡಿಶನ್ ಗಂಭೀರವಾಗಿದ್ದು ಆಕೆಗೆ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಆರೋಪಿ ಯುವಕ ಸಹ ಸುಟ್ಟ ಗಾಯಗಳಿಂದ  ತೊಂದರೆ ಅನುಭವಿಸುತ್ತಿದ್ದು ಜನರಲ್ ವಾರ್ಡ್ ನಲ್ಲಿ ಇದ್ದಾನೆ.

ಪಾಗಲ್ ಪ್ರೇಮಿಗಳ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ  ಯುವತಿಯ ಕತ್ತನ್ನೇ ಸೀಳಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಶಿವಮೊಗ್ಗ ಆಸ್ಪತ್ರೆಯಲ್ಲಿ ಸಾವು ಕಂಡಿದ್ದ. 

ಪಾಗಲ್ ಪ್ರೇಮಿ ಬೆಂಗಳೂರಿನ ಟೆಕ್ಕಿ ಪ್ರೀತ್ಸೆ ಪ್ರೀತ್ಸೆ ಅಂತ ನಟಿ ಹಿಂದೆ ಬಿದ್ದಿದ್ದ ಪ್ರಕರಣವೂ ವರದಿಯಾಗಿತ್ತು.  ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದರು.  ಶಿವಮೊಗ್ಗದ ಹುಡುಗನೊಬ್ಬ ಪ್ರಿಯತಮೆಯ ಕತ್ತು ಕತ್ತರಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ರೀತಿಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. 

ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದವ ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದು ಅಲ್ಲದೇ  ಆಕೆಯ ಶವವನ್ನೇ ತಬ್ಬಿ ಮಲಗಿದ್ದ ಪ್ರಕರಣ ಜೈಪುರದಿಂದ ವರದಿಯಾಗಿತ್ತು. ಈ ದೃಶವ್ಯವನ್ಜು ಕಂಡ ಜನ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ರಾಜಸ್ಥಾನ ಅಹೋರ್ ಪ್ರದೇಶದಲ್ಲಿ ಘಟನೆ ನಡೆದಿದ್ದು.  ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆಗೆ ಇಬ್ಬರು  ಗಂಡು ಮಕ್ಕಳು ಇದ್ದಾರೆ. ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು.    ಶಾಂತಿ ಗಂಡ ಮನೆಯಲ್ಲಿ ಇಲ್ಲದೆ ವೇಳೆ ಅಲ್ಲಿಗೆ ಬಂದ 21 ವರ್ಷದ  ಗಣೇಶ್ ಮೀನಾ ಎಂಬಾತ ನಿನ್ನನ್ನು ಪ್ರೀತಿ ಮಾಡುತ್ತೇನೆ  ಎಂದು ಹೇಳಿದ್ದ. ಇದಕ್ಕೆ ಒಪ್ಪದ ಮಹಿಳೆ ಕೊಲೆ  ಹತ್ಯೆ ಮಾಡಿ ಶವ ತಬ್ಬಿ ಮಲಗಿದ್ದ. 

Follow Us:
Download App:
  • android
  • ios