Asianet Suvarna News Asianet Suvarna News

ಟೆರೆಸ್‌ ಗಿಡಗಳಿಗೆ ನೀರಾಕುತ್ತಿದ್ದ ಯುವತಿ ಶೂಟ್ ಮಾಡಿ ಪಾಗಲ್ ಪ್ರೇಮಿ ಎಸ್ಕೇಪ್!

ಯುವತಿ ಮೇಲೆ ಗುಂಡಿನ ದಾಳಿ ಮಾಡಿದ ಪಾಗಲ್ ಪ್ರೇಮಿ/   ಸ್ಥಳದಲ್ಲೇ ಸಾವಿಗೀಡಾದ ಯುವತಿ/ ಪಕ್ಕದ ಬಿಲ್ಡಿಂಗ್ ನಿಂದ ಹಾರಿ ಬಂದ ಯುವಕ/ ಹಿಂದೆ ಮುಂದೆ  ನೋಡದೆ ಆಕೆ ಮೇಲೆ ಗುಂಡಿನ ಮಳೆಗರೆದ

Rajasthan Teenager shot dead by neighbour over one-sided love affair mah
Author
Bengaluru, First Published Jan 26, 2021, 5:53 PM IST
  • Facebook
  • Twitter
  • Whatsapp

ಜೈಪುರ(ಜ 26)  ಒಮ್ಮೊಮ್ಮೆ ಪಾಗಲ್ ಪ್ರೇಮಿಗಳು ಎಂತೆಂಥಾ ಕೆಲಸ  ಮಾಡಿಬಿಡುತ್ತಾರೆ.   ಮಂಗಳೂರಿನಲ್ಲಿ ಹಿಂದೊಮ್ಮೆ ಯುವಕ ತಾನು ಪ್ರೀತಿಸಿದೆ ಹುಡುಗಿ ಹೇಳಿದ್ದನ್ನು ಕೇಳಲಿಲ್ಲ ಎಂದು ಮನಸಿಗೆ ಬಂದಂತೆ ಇರಿದಿದ್ದ. ಈಗ ಜೈಪುರದಿಂದ ಅದೇ ರೀತಿಯ ಘಟನೆ ವರದಿಯಾಗಿದೆ.

ರಾಜಸ್ಥಾನದ ಭರತ್ ಪುರ ನಿವಾಸಿ ಯುವತಿ ಅಂಕಿತಾ ಮನೆಯ ಮೇಲೆ ಟೆರೆಸ್ ನಲ್ಲಿ ಇರುವ ಗಿಡಗಳಿಗೆ ನೀರು ಹಾಕಲೆಂದು ತೆರಳಿದ್ದಾಳೆ.  ಆಕೆ  ನೀರು ಹಾಕುತ್ತಿದ್ದ ವೇಳೆ ಪಕ್ಕದ  ಬಿಲ್ಡಿಂಗ್ ನಿಂದ ಯುವಕನೊಬ್ಬ ಹಾರಿ ಬಂದಿದ್ದಾನೆ.  ಹಿಂದೆ ಮುಂದೆ  ನೋಡದೆ ಆಕೆ ಮೇಲೆ ಗುಂಡಿನ ಮಳೆಗರೆದು ಕಾಲು ಕಿತ್ತಿದ್ದಾನೆ.

ಆಸ್ತಿಗಾಗಿ ತಾಯಿಯ ಕುತ್ತಿಗೆ ಸೀಳಿದ ಪಾಪಿ ಮಗ

ಯುವತಿ ಮೇಲೆ ದಾಳಿ ಮಾಡಿದ ಸುನೀಲ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಯುವತಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಾಳೆ.

ಯುವಕ ಅಂಕಿತಾಳನ್ನು ಬಹಳ ಕಾಲದಿಂದ ಪ್ರೀತಿ ಮಾಡುತ್ತಿದ್ದು ಆಕೆ ಒಪ್ಪಿಗೊಂಡಿರಲಿಲ್ಲ. ಇದೇ ಕಾರಣಕ್ಕೆ  ಗುಂಡಿನ ದಾಳಿ ಮಾಡಿದ್ದಾನೆ ಎನ್ನಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
 

 

Follow Us:
Download App:
  • android
  • ios