ಬೆಂಗಳೂರು(ಜ. 07)  ವಂಚಕ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ  ನೋಟಿಸ್ ನೀಡಿದೆ.  ರಾಧಿಕಾ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

ನೋಟಿಸ್ ಕೊಟ್ಟಿರುವುದನ್ನು ರಾಧಿಕಾ ಅಣ್ಣ ರವಿರಾಜ್ ಖಚಿತ ಮಾಡಿದ್ದಾರೆ. ನೋಟಿಸ್ ಬಂದಿರೋದು ನಿಜ.. ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯಕ್ಷವಾದ ರಾಧಿಕಾ ಹೇಳದೆ ಉಳಿಸಿದ ವಿಚಾರ

 ದೊಡ್ಡ ದೊಡ್ಡ ರಾಜಕೀಯ ನಾಯಕರು ಗೊತ್ತು ಎಂದು ಹೇಳಿ ಹಲವಾರು ಜನರಿಗೆ ವಂಚನೆ ಮಾಡಿರುವ ಸ್ವಾಮಿ ಅಲಿಯಾಸ್ ಯುವರಾಜ್ ಸಿಸಿಬಿ ವಶದಲ್ಲೇ ಇದ್ದಾನೆ.  ರಾಧಿಕಾ ಖಾತೆಗೆ  ಯುವರಾಜ್ ಖಾತೆಯಿಂದ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂಬ ಆರೋಪ ಇದ್ದು ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ  ನೀಡುವ ಪ್ರಯತ್ನ ಮಾಡಿದ್ದರು.