Asianet Suvarna News Asianet Suvarna News

ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ಸೆಕ್ರೆಟರಿ ಎಸ್ಕೇಪ್!

ಬಡ್ಡಿ ಆಸೆಗಾಗಿ ಫೈನಾನ್ಸ್ ಕಂಪನಿ, ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಮುನ್ನ ಗ್ರಾಹಕರೇ ಎಚ್ಚರವಾಗಿರಬೇಕಾಗಿದೆ. ಯಾಮಾರಿದರೆ ಕೋಟ್ಯಂತರ ರೂಪಾಯಿ ಪಂಗನಾಮ ಪಕ್ಕಾ. ಯಾದಗಿರಿಯಲ್ಲಿ ಇಂಥದ್ದೊಂದು ವಂಚನೆ ಪ್ರಕರಣ ನಡೆದಿದೆ ಇಲ್ಲಿದೆ ವರದಿ

Fraud of crores of rupees to depositors secraery escaped yadagiri shahapur
Author
First Published Aug 19, 2022, 3:08 PM IST

ವರದಿ: ಪರಶುರಾಮ ಐಕೂರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.19): ಬಡ್ಡಿ ಆಸೆಗಾಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಮುನ್ನ ಗ್ರಾಹಕರೇ ಎಚ್ಚರವಾಗಿರಬೇಕಾಗಿದೆ. ಯಾಕಂದ್ರೆ ಗ್ರಾಮೀಣ ಭಾಗದಲ್ಲಿರುವ ಒಂದು ಸಹಕಾರಿ ಬ್ಯಾಂಕ್ ಹೀಗೆ ಬಡ್ಡಿ ಆಸೆ ತೊರಿಸಿ ನೂರಾರು ಜನರಿಂದ ಸಂಗ್ರಹವಾಗಿದ್ದ ಕೋಟ್ಯಾಂತರ ರೂಪಾಯಿ ಲಪಟಾಯಿಸಿ ನಾಪತ್ತೆಯಾಗಿದ್ದಾನೆ. ಈ ಘಟನೆ ನಡೆದಿದ್ದು ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ರೇವಣಸಿದ್ದೇಶ್ವರ ಸಹಕಾರಿ ಪತ್ತಿನ ಸಂಘದಲ್ಲಿ, ಇದರಿಂದಾಗಿ ಹಲವಾರು ಠೇವಣಿದಾರರು ಹಾಗೂ ಷೇರುದಾರರು ಆತಂಕದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಬಯಲಿಗೆ

ಠೇವಣಿದಾದರಿಗೆ ಕೋಟ್ಯಂತರ ರೂಪಾಯಿ ಫಂಗನಾಮ ಹಾಕಿ ಸೆಕ್ರೆಟರಿ ಎಸ್ಕೇಪ್: ಒಬ್ಬೊಬ್ಬ ಠೇವಣಿದಾರರು ಲಕ್ಷಾಂತರ ರೂ. ಠೇವಣಿಯನ್ನು ರೇವಸಿದ್ದೇಶ್ವರ ಸಹಕಾರಿ ಪತ್ತಿನ ಸಹಕಾರಿ ಸಂಘ(Revasiddeshwar Co-operative Society)ದಲ್ಲಿ ಇಟ್ಟಿದ್ದಾರೆ, ಆದ್ರೆ ಈಗ ದಿಕ್ಕು ತೋಚದ ರೀತಿಯಲ್ಲಿ  ಒಂದು ಕಡೆ ಕೈಯಲ್ಲಿ ಬ್ಯಾಂಕ್ ಪಾಸ್ ಬುಕ್(Bank Pass Book) ಹಿಡಿದು ದಿಕ್ಕು ತೋಚದೆ ಪರದಾಡುವಂತಾಗಿದೆ. ಮತ್ತೊಂದು ಕಡೆ ತನಿಖೆಗೆ ಹಾಜರಾಗುವಂತೆ ಬ್ಯಾಂಕ್ ನ ಗೊಡೆಗೆ ನೋಟಿಸ್ ಅಂಟಿಸಿದ್ದಾರೆ. ಯಾದಗಿರಿ(Yadagiri) ಜಿಲ್ಲೆ ಶಹಾಪುರ(Shahapur) ಸಹಕಾರ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿರುವ ರೇವಣಸಿದ್ದೇಶ್ವರ ಸಂಘಕ್ಕೆ ಬೀಗ ಹಾಕಿ ಸಂಘದ ಸಿಇಓ ಸೋಮನಾಥ ಹಿರೇಗೌಡ ಹಣ ಟೋಪಿ ಹಾಕಿ ಸಂಘದ ಕಚೇರಿ ಬಂದ್ ಮಾಡಿ ಎಸ್ಕೆಪ್ ಅಗಿದ್ದಾನೆ‌. ಸಹಕಾರ ಇಲಾಖೆಯಿಂದ ನೊಂದಾಯಿತ ಸಹಕಾರ ಸಂಘದ ಬ್ಯಾಂಕ್ ಕಳೆದ 13 ವರ್ಷದಿಂದ ಕಾರ್ಯನರ್ವಹಿಸುತ್ತಿದೆ. 150 ಕ್ಕು ಹೆಚ್ಚು ಫಿಕ್ಸ್ ಡಿಪಾಸಿಟ್ ಹಾಗೂ ಪಿಗ್ನಿ ಹಣ ರೂಪದಲ್ಲಿ ಸುಮಾರು 3 ಕೋಟಿ ಅಧಿಕ ಹಣ ಜಮಾವಣೆ ಮಾಡಿದ್ದರು, ಹೆಚ್ಚಿನ ಹಣ ಕಂಡಿದ್ದ ಸಂಘದ ಸಿಇಓ ಸೋಮನಾಥ ಹಿರೇಗೌಡ ಹಣ ಲಪಟಾಯಿಸಿ ಬೀಗ ಹಾಕಿಕೊಂಡು ಎಸ್ಕೆಪ್ ಆಗಿದ್ದಾನೆ.

ಹಣ ಕಳೆದುಕೊಂಡ ಠೇವಣಿದಾರರು ಗೋಳಾಟ: ಕೆಲವರು ಜಮೀನು ಮಾರಾಟ ಮಾಡಿ ಬಂದ ಹಣವನ್ನು ಫಿಕ್ಸ್ ಡಿಪಾಸಿಟ್ ಮಾಡಿದ್ದರು. ಇನ್ನು ಕೆಲವರು ನಿತ್ಯವು ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಜನರು ಸಂಘದ ಖಾತೆಯಲ್ಲಿ ಹಣ ಜಮಾ ಮಾಡಿದ್ದರು. ಕೂಡಿಟ್ಟ ಹಣ ಎಲ್ಲಿಗೆ ಹೋಗುತ್ತೆ ನಮ್ಮ ಹಣಕ್ಕೆ ಬಡ್ಡಿ ಬರುತ್ತೆ ಎನ್ನುವ ಆಸೆಗಾಗಿ ರೇಣಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಸಂದಾಯ ಮಾಡಿದ್ದರು. ಈದಿಗ ಎಲ್ಲವನ್ನು ಕಳೆದುಕೊಂಡ ಠೆಣಿದಾರರು ತೀರಾ ಸಂಕಷ್ಟಪಡುವಂತಾಗಿದೆ. ಮೋಸ ಹೋದವರು ನ್ಯಾಯಕ್ಕಾಗಿ  ಅಲೆದಾಡುತ್ತಿದ್ದಾರೆ. 

Bank Fraud Cases: ವಂಚಕ ಬ್ಯಾಂಕಿಂದ ಸಾಲ ಮರುಪಾವತಿಗೆ ನೆರವು: ಸಚಿವ STS

ಪ್ರತಿ ತಿಂಗಳು 50-60 ಸಾವಿರ ರೂ. ಪಿಗ್ನಿ ಸಂಗ್ರಹ 13 ವರ್ಷದ ಹಿಂದೆ ಸಹಕಾರಿ ಸಂಘ ಸ್ಥಾಪನೆಯಾಗಿದ್ದ ಈ ಸಹಕಾರಿ ಸಂಘದಲ್ಲಿ ಷೇರುದಾರರು, ಠೇವಣಿದಾರರು ಸೇರಿದಂತೆ 550 ಜನರಿದ್ದಾರೆ ಪ್ರತಿ ತಿಂಗಳು 50-60 ಸಾವಿರ ಪಿಗ್ಮಿ ಸಂಗ್ರಹಿಸಲಾಗುತ್ತಿತ್ತು, 29 ಜನ 40 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ ಎನ್ನಲಾಗಿದೆ.ನ್ನು ಈ ಬಗ್ಗೆ ಸಹಕಾರ ಸಂಘದ ಸಹಾಯಕ ನಿಬಂಧಕರಾದ ಸೀಮಾ ಅವರನ್ನು ವಿಚಾರಿಸಿದರರೆ ಈ ಬಗ್ಗೆ ದೂರು ನೀಡಿದ್ದು ತನೀಖೆ ನಡೆಸಲಾಗುತ್ತಿದೆ. ಕಾರ್ಯದರ್ಶಿ ಸೋಮನಾಥ ಓಡಿ ಹೋಗಿದ್ದು ಯಾರೆ ಇದ್ದರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ನೋಂದಾಯಿತ ಸಹಕಾರ ಸಂಘ ಹೀಗೆ ಕೋಟ್ಯಾಂತರ ರೂಪಾಯಿ ಹಣ ಲಪಟಾಯಸಿದ್ದು ಒಂದು ದುರಂತವೆ, ಹಣದ ಆಸೆಗೆ ಬಿದ್ದು ಹಣ ವನ್ನು ಕದ್ದು ಪರಾರಿಯಾಗಿರುವ ಸಿಈಓ ಸೋಮನಾಥ್ ವಿರುದ್ದ ಪ್ರಕಣ ದಾಖಲಿಸಿಕೊಂಡು ಆತನ ವಿರುದ್ದ ಕಠಿಣ ಕ್ರಮ ಕೈಗೊಂಡು ಬಡವರ ಹಣ ವಾಪಾಸ್ ಕೊಡಿಸುವ ಸಂಬಂಧಪಟ್ಟ ಇಲಾಖೆ ಮಾಡಬೇಕಿದೆ.

Follow Us:
Download App:
  • android
  • ios