ಮೆಟ್ರೋ ಎಂಜಿನಿಯರ್‌ವೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಬ್ಯಾಂಕ್‌ನಲ್ಲಿ ಕಿಡಿಗೇಡಿಗಳು ಸಾಲ ಪಡೆದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಜೂ.7) : ಮೆಟ್ರೋ ಎಂಜಿನಿಯರ್‌ವೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಬ್ಯಾಂಕ್‌ನಲ್ಲಿ ಕಿಡಿಗೇಡಿಗಳು ಸಾಲ ಪಡೆದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ವಿಧಾನಸೌಧ(Vidhanasoudha) ಮುಂದಿನ ಮೆಟ್ರೋ ನಿಲ್ದಾಣದ ಎಂಜಿನಿಯರ್‌ ಬಿ.ಆರ್‌.ನವೀನ್‌ಕುಮಾರ್‌(BR Naveen kumar) ವಂಚನೆಗೊಳಗಾಗಿದ್ದು, ಇತ್ತೀಚೆಗೆ ನವೀನ್‌ ಅವರ ಮನೆಗೆ ಬ್ಯಾಂಕ್‌ನಿಂದ ಬಂದ ಪತ್ರ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ನವೀನ್‌ಕುಮಾರ್‌ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಎಂ ಕಚೇರಿ ಹೆಸರಿನಲ್ಲಿ ವಂಚನೆ ಪ್ರಕರಣ: ವ್ಯಕ್ತಿಗೆ ಜಾಮೀನು

ಮೆಟ್ರೋ ನಿಲ್ದಾಣದ ಎಂಜಿನಿಯರ್‌ ಆಗಿರುವ ನವೀನ್‌ಕುಮಾರ್‌ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ .51,839 ಸಾವಿರವನ್ನು ಕಿಡಿಗೇಡಿಗಳು ಸಾಲ ಪಡೆದಿದ್ದರು. ಬಳಿಕ ಅವರ ವಿಳಾಸಕ್ಕೆ ಬ್ಯಾಂಕ್‌ನಿಂದ ಪತ್ರ ನೋಡಿ ಗಾಬರಿಗೊಂಡ ನವೀನ್‌ ಗಾಬರಿಯಾಗಿದೆ. ತಾವು ಯಾವುದೇ ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರಾಗಿದೆ ಎಂದು ಬ್ಯಾಂಕ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ನವೀನ್‌ ಹೆಸರಿನಲ್ಲಿ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಎಫ್‌ಬಿ ಖಾತೆ ಮೂಲಕ ವಂಚನೆ

ಮಂಗಳೂರು: ನಕಲಿ ಫೇಸ್‌ಬುಕ್‌ ಖಾತೆಯ ಮೂಲಕ 80 ಸಾವಿರ ರು. ವಂಚಿಸಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್‌ಬಿಐ ಪೊಲೀಸರ ಸೋಗು! ವೈದ್ಯೆಯಿಂದ ಕೋಟಿ ಕೋಟಿ ಪೀಕಿದ ಖದೀಮರು

ದೂರುದಾರರಿಗೆ ಅವರ ಪರಿಚಿತರೊಬ್ಬರ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಮಾಡಿದ ಅಪರಿಚಿತ ವ್ಯಕ್ತಿ, ಮೆಸೆಂಜರ್‌ ಮೂಲಕ ‘ಸ್ನೇಹಿತನ ಮಗ ತೀವ್ರನಿಗಾ ಘಟಕದಲ್ಲಿದ್ದು ತುರ್ತಾಗಿ ಒಂದು ಲಕ್ಷ ರು. ಹಣದ ಅಗತ್ಯವಿದೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ದೂರುದಾರರು, ಅಪರಿಚಿತ ವ್ಯಕ್ತಿ ಕಳುಹಿಸಿದ್ದ ಗೂಗಲ್‌ ಪೇ ಸಂಖ್ಯೆಗೆ ಹಂತ ಹಂತವಾಗಿ ಒಟ್ಟು 80 ಸಾವಿರ ರು. ವರ್ಗಾಯಿಸಿದ್ದಾರೆ. ಅನಂತರ ಇದೊಂದು ನಕಲಿ ಫೇಸ್‌ಬುಕ್‌ ಖಾತೆ ಮೂಲಕ ನಡೆದಿರುವ ವಂಚನೆ ಎಂಬುದಾಗಿ ಅವರಿಗೆ ಗೊತ್ತಾಗಿದ್ದು ಪ್ರಕರಣ ದಾಖಲಿಸಿದ್ದಾರೆ.