ಜನಸಾಮಾನ್ಯರಿಗೆ ತಿರುಚಿದ ಫೋಟೋ ಕಳುಹಿಸಿ ಅವರಿಂದ ಹಣ ಸುಲಿಗೆ ಮಾಡುವುದು ಗೊತ್ತು. ಆದರೆ ರಾಜಸ್ಥಾನದ ವ್ಯಕ್ತಿಯೊಬ್ಬ ಮಹಿಳಾ ನ್ಯಾಯಾಧೀಶರಿಗೇ ಅವರ ತಿರುಚಿದ ಚಿತ್ರಗಳನ್ನು ರವಾನಿಸಿ 20 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ನಡೆದಿದೆ.
ಜೈಪುರ: ಜನಸಾಮಾನ್ಯರಿಗೆ ತಿರುಚಿದ ಫೋಟೋ ಕಳುಹಿಸಿ ಅವರಿಂದ ಹಣ ಸುಲಿಗೆ ಮಾಡುವುದು ಗೊತ್ತು. ಆದರೆ ರಾಜಸ್ಥಾನದ ವ್ಯಕ್ತಿಯೊಬ್ಬ ಮಹಿಳಾ ನ್ಯಾಯಾಧೀಶರಿಗೇ ಅವರ ತಿರುಚಿದ ಚಿತ್ರಗಳನ್ನು ರವಾನಿಸಿ 20 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿದ್ದ ಮಹಿಳಾ ನ್ಯಾಯಾಧೀಶರ ಫೋಟೋ ಪಡೆದು, ಅದನ್ನು ತನಗೆ ಬೇಕಾದಂತೆ ಎಡಿಟ್ ಮಾಡಿ ಬಳಿಕ ಅನ್ನು ನ್ಯಾಯಾಧೀಶರ ಕಚೇರಿಗೆ ಕಳುಹಿಸಿದ್ದಾನೆ. ಫೋಟೋ ಜೊತೆಗೆ ಪಾರ್ಸೆಲ್‌ನಲ್ಲಿ ಒಂದು ಸ್ವೀಟ್ ಬಾಕ್ಸ್ ಹಾಗೂ ಒಂದು ಪತ್ರದಲ್ಲಿ 20 ಲಕ್ಷ ರು. ನೊಂದಿಗೆ ತಯಾರಾಗಿರಿ ಇಲ್ಲವಾದರೆ ಚಿತ್ರವನ್ನು ಹರಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
20 ದಿನಗಳ ನಂತರ ಮತ್ತೊಂದು ಪಾರ್ಸೆಲ್ ಅನ್ನು ಅವರ ಮನೆಗೆ ಕಳುಹಿಸಿದ್ದಾನೆ. ಈ ಘಟನೆ ಬೆನ್ನಲ್ಲೇ ನ್ಯಾಯಾಧೀಶರು ದೂರು ದಾಖಲಿಸಿದ್ದು, ಆತನನ್ನು ಇನ್ನು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರುಬನ ರಾಣಿಯ ಖಾತೆಗೆ ಸೈಬರ್ ಕಳ್ಳರ ಕನ್ನ, 1 ಲಕ್ಷ ಕಳೆದುಕೊಂಡ ನಟಿ ನಗ್ಮಾ!
