ಛತ್ರಪತಿ ಶಿವಾಜಿ ಮಹಾರಾಜ, ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ, ಶ್ರೀ ಹನುಮಾನ ದೇವತೆಗಳ ಫೋಟೋಗಳನ್ನು ಅಶ್ಲೀಲವಾಗಿ ವಿರೂಪಗೊಳಿಸಿ ಹಿಂದೂ ದೇವತೆಗಳ ಆರಾಧಕರಿಗೆ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಬಂಧಿತ ಆರೋಪಿ. 

ಬೆಳಗಾವಿ(ಜ.31): ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವ ರೀತಿಯಲ್ಲಿ ದೇವತೆಗಳ ಫೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವ್ಯಕ್ತಿಯನ್ನು ಬೆಳಗಾವಿ ನಗರದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಚೌರಡ್ಡಿಪಾಳ್ಯ ಗ್ರಾಮದ ಇಮ್ರಾನ್‌ ಪಾಷಾ ಅಮಿರ್‌ಜಾನ್‌ (19) ಎಂದು ಗುರುತಿಸಲಾಗಿದೆ.

Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ

ಆರೋಪಿ ಜ.25ರಂದು ಛತ್ರಪತಿ ಶಿವಾಜಿ ಮಹಾರಾಜ, ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ, ಶ್ರೀ ಹನುಮಾನ ದೇವತೆಗಳ ಫೋಟೋಗಳನ್ನು ಅಶ್ಲೀಲವಾಗಿ ವಿರೂಪಗೊಳಿಸಿ ಹಿಂದೂ ದೇವತೆಗಳ ಆರಾಧಕರಿಗೆ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು. ಇದರಿಂದ ಹಿಂದೂಪರ ಸಂಘಟನೆ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದರ ಹಿನ್ನೆಲೆಯಲ್ಲಿ ವಿಕೃತ ಮನಸಿನ ದುಷ್ಕರ್ಮಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಗರದ ಸಿಇಎನ್‌ ಹಾಗೂ ಶಹಪೂರ ಠಾಣೆ ಪೊಲೀಸರು ದುಷ್ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ನಗರದ ಶಹಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.