ಬೆಂಕಿ ಹಚ್ಚುವ ವೇಳೆ ಸ್ಯಾನಿಟೈಸರ್‌ ಬಾಟಲಿಗೆ ಬೆಂಕಿ ತಗುಲಿ ಅದು ಸ್ಫೋಟಗೊಂಡ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಆಸ್ಪತ್ರೆ ಸೇರಿದ ಘಟನೆ ಹೆಬ್ರಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಕ​ಳ (ನ.12): ಬೆಂಕಿ ಹಚ್ಚುವ ವೇಳೆ ಸ್ಯಾನಿಟೈಸರ್‌ ಬಾಟಲಿಗೆ ಬೆಂಕಿ ತಗುಲಿ ಅದು ಸ್ಫೋಟಗೊಂಡ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಆಸ್ಪತ್ರೆ ಸೇರಿದ ಘಟನೆ ಹೆಬ್ರಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೆಬ್ರಿಯ ಆಶ್ರಮ ಹಾಸ್ಟೆಲ್‌ನ ಹಿಂಭಾಗದಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊರ ಜಿಲ್ಲೆಯಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ್‌, ಅಮರೀಶ್‌ ಹಾಗೂ ಐದನೆ ತರಗತಿಯ ವಿನೋದ್‌ ಮತ್ತು ಮನೋಜ್‌ ಗಾಯಗೊಂಡಿದ್ದಾರೆ. 

ಒಟ್ಟು 50 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಘಟನೆಯ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕಿ ಒಬ್ಬರೆ ಇದ್ದರು. ಘಟನೆಯ ವಿವರವನ್ನು ವಾರ್ಡನ್‌ ಗೆ ತಿಳಿಸಿದಾಗ .ವಾರ್ಡನ್‌ ಅವರ ಪರಿಚಯಸ್ಥರ ವಾಹನದಲ್ಲಿ ನಾಲ್ವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು .ಅದರಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಮರುದಿನ ಮಧ್ಯಾಹ್ನ ತನಕ ಸ್ಥಳೀಯ ಪಂಚಾಯಿತಿ ಸೇರಿದಂತೆ ಯಾರಿಗೂ ಘಟನೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ ತಿಳಿಸಿದ್ದಾರೆ. 

2ನೇ ಮದುವೆ ವೇಳೆ ರಾದ್ಧಾಂತ: ಮೊದಲ ಪತ್ನಿ ಜತೆ ಯೋಧ ಆತ್ಮಹತ್ಯೆ

ರಾಜ್ಯದೆಲ್ಲೆಡೆಯಿಂದ ಬಂದ ಬಡ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರ ಬಗ್ಗೆ ಇಲಾಖೆ ನಿರ್ಲಕ್ಷ ತೋರುತ್ತಿದೆ ರಾತ್ರಿಹೊತ್ತು ನೊಡಿಕೊಳ್ಳಲು ಯಾರೂ ವಾರ್ಡನ್‌ ಇರುವುದಿಲ್ಲ ಎಂದು ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದ್ದಾರೆ. ಗಾಯಗೊಂಡ ಮಕ್ಕಳು ಈಗ ಆರೊಗ್ಯವಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್‌ ತಿಳಿಸಿದ್ದಾರೆ. ಗುರುವಾರ ಸಂಜೆ ಹಾಸ್ಟೆಲ್‌ಗೆ ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾ​ಧ್ಯಕ್ಷ ಗಣೇಶ್‌ ಕುಮಾರ್‌, ಮಾಜಿ ಅಧ್ಯ​ಕ್ಷ​ರಾದ ಸುಧಾ​ಕರ್‌ ಹೆಗ್ಡೆ, ಎಚ್‌.​ಕೆ.​ಸು​ಧಾ​ಕರ್‌, ಸದಸ್ಯರಾದ ಕೃಷ್ಣ ನಾಯ್ಕ, ತಾರನಾಥ್‌ ಬಂಗೇರ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ.

4 ಮಂಗಗಳ ಸಾವು: ಸಾಗರ ತಾಲೂಕಿನ ಯಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೇಮನೆ, ವರದಹಳ್ಳಿ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ನಾಲ್ಕು ಮಂಗಗಳು ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ. ಎರಡು ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದೆರಡು ಮಂಗಗಳ ರಕ್ತವನ್ನು ಪೂನಾ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮಂಗಗಳು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ತಾಲೂಕು ವೈದ್ಯಾಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಆದರೆ ಸ್ಥಳೀಯರು ಮಂಗಗಳ ಕಾಟ ಹೆಚ್ಚಾಗಿರುವುದರಿಂದ ಮಂಗಗಳಿಗೆ ವಿಷ ಹಾಕಿ ಸಾಯಿಸಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

ಒಂದೇ ಭೇಟಿ, 3 ಸಮುದಾಯಗಳ ಒಲವು ಗಳಿಸಲು ಮೋದಿ ಯತ್ನ

ಯಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳು ಸಾವನ್ನಪ್ಪಿರುವ ಪ್ರಕರಣ ನಡೆದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಒಂದುವೇಳೆ ಜ್ವರದ ಲಕ್ಷಣ ಕಂಡುಬಂದಲ್ಲಿ ಅಂಥವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿಗಳು ಡಾ.ಮೋಹನ್‌ ಮಾಹಿತಿ ನೀಡಿದ್ದಾರೆ.