ಬೆಳಗಾವಿ(ನ.07): ಅಕ್ರಮವಾಗಿ ಸೆಮಿ ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ಅವರಿಂದ ಒಂದು ಪಿಸ್ತೂಲ್‌, ಮೂರು ಜೀವಂತ ಗುಂಡು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಓರ್ವ ಸೇರಿದಂತೆ ರಾಜ್ಯದ ಮೂವರನ್ನು ಬಂಧಿಸಲಾಗಿದೆ. 

ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್‌ನಲ್ಲಿ ಖಾನಾಪುರ ಸಿಪಿಐ ಸುರೇಶ ಶಿಂಗಿ ಗಸ್ತು ತಿರುತ್ತಿದ್ದ ಸಂದರ್ಭದಲ್ಲಿ ಒಂದು ಕಾರ್‌ ಹಾಗೂ ಎರಡು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗುಂಪಾಗಿ ನಿಂತಿದ್ದರು. ಪೊಲೀಸ್‌ ವಾಹನ ಕಾಣುತ್ತಿದ್ದಂತೆ ಮೂವರು ಓಡಿ ಹೋಗಿದ್ದಾರೆ. ಅನುಮಾನಗೊಂಡ ಪೊಲೀಸರು ಇನ್ನುಳಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳ​ಕಿಗೆ ಬಂದಿದೆ.

ಕಲಬುರಗಿ: ಹೆಂಡತಿ ಎದುರೇ ಅಳಿಯನಿಂದ ಅತ್ತೆ ಕೊಲೆ..!

ತಪಾಸಣೆ ನಡೆಸಿದಾಗ ದಾಖಲೆ ಪತ್ರಗಳಿಲ್ಲದ ಒಂದು ಸೆಮಿ ಆಟೋಮ್ಯಾಟಿಕ್‌ ನಾಡ ಪಿಸ್ತೂಲ್‌, ಮೂರು ಜೀವಂತ ಗುಂಡು, ನಾಲ್ಕು ಮೊಬೈಲ್‌, 34 ಸಾವಿರ ನಗದು, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.