ಕಲಬುರಗಿ(ನ.06): ಅಳಿಯನೇ ಅತ್ತೆಯ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಗೈದಿರುವ ಘಟನೆ ಕಮಲಾಪುರ ತಾಲೂಕಿನ ಭೀಮನಾಳ ಕಮಲಾಪುರ ಮಧ್ಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚಿಂದಿ ಬಸವಣ್ಣ ದೇವಾಲಯದ ಬಳಿ ನಡೆದಿದೆ. 

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ವಾಗಲಗಾಂವ ಗ್ರಾಮದ ಲುಗಜಾಬಾಯಿ ಗೋವಿಂದ ಬಿರಾದಾರ (40) ಮೃತ ಮಹಿಳೆಯಾಗಿದ್ದು, ಇವರ ಅಳಿಯ ಭೀಮನಾಳ ಗ್ರಾಮದ ರಾಮ ಪ್ರಭು ಹುಡಗೆ ಕೊಲೆ ಮಾಡಿದ ಆರೋಪಿ. ಲುಗಜಾಬಾಯಿ ಮಗಳು ರೇಣುಕಾಳನ್ನು ಭೀಮನಾಳ ಗ್ರಾಮದ ರಾಮ ಪ್ರಭು ಹುಡಗೆ ಎಂಬಾತನಿಗೆ 3 ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದರು. 

ಶಿವಮೊಗ್ಗ;  ಅಪ್ಪನೊಂದಿಗೆ ಕಾಮದಾಟದಲ್ಲಿದ್ದ ಪತ್ನಿ, ಹೆಂಡತಿ ಹತ್ಯೆ ಮಾಡಿದ ಗಂಡ!

ಮದುವೆಯಾದಾಗಿನಿಂದ ಮಗಳಿಗೆ ರಾಮ ಕಿರುಕುಳ ಕೊಡುತ್ತಿದ್ದ. ಹೀಗಾಗಿ ಕೆಲ ದಿನಗಳ ಹಿಂದೆ ರೇಣುಕಾಳನ್ನು ತವರಿಗೆ ಕರೆದ್ಯೊಯ್ದಿದ್ದರು. ಸ್ಥಳೀಯರ ರಾಜಿ ಸಂಧಾನದ ಮೇರೆಗೆ ಮತ್ತೆ ಗಂಡನ ಮನೆಗೆ ತಂದು ಬಿಟ್ಟಿದ್ದರು. ಜೊತೆಗೆ ತಾಯಿ ಲುಗಜಾಬಾಯಿ ಸಹ ಉಳಿದುಕೊಂಡಿದ್ದರು. ಅಳಿಯ ರಾಮ ಮತ್ತೆ ಜಗಳ ಮಾಡಿ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಲುಗಜಾಬಾಯಿ ಮಗಳು ರೇಣುಕಾ ಸೇರಿ ದೂರು ದಾಖಲಿಸಲು ಕಮಲಾಪುರ ಪೊಲೀಸ್‌ ಠಾಣೆಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ತಡೆದು ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಕೆಳಗೆ ಬಿದ್ದ ತಕ್ಷಣ ಮತ್ತೆ ಕಲ್ಲು ಎತ್ತಿ ತಲೆಯ ಮೇಲೆ ಹಾಕಿದ್ದಾನೆ. ರೇಣುಕಾಗೆ ಈಗಾಗಲೇ 2 ವರ್ಷದ ಮಗುವಿದ್ದು, 5 ತಿಂಗಳ ಗರ್ಭಿಣಿ ಇದ್ದಾಳೆ.