Haveri: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರು ದುರ್ಮರಣ
ವೇಗವಾಗಿ ಬಂದ ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ದುರ್ಘಟನೆ ನಡೆದಿದೆ. ಎರಡೂ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಮೃತಪಟ್ಟರೆ, ಒಬ್ಬ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಹಾವೇರಿ (ಏ.29): ರಾಣೆಬೆನ್ನೂರು ನಗರದ ಬಳಿ ದುರ್ಘಟನೆಯೊಂದು ನಡೆದಿದೆ. ವೇಗವಾಗಿ ಬಂದ ಕಾರುಗಳು (Cars) ಮುಖಾಮುಖಿ ಡಿಕ್ಕಿಯಾಗಿ (Accident) ನಾಲ್ವರು ಮೃತಪಟ್ಟ (Death) ದುರ್ಘಟನೆ ನಡೆದಿದೆ. ಎರಡೂ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಮೃತಪಟ್ಟರೆ, ಒಬ್ಬ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ರಾಣೇಬೆನ್ನೂರು ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿ ಈ ಭೀಕರ ದುರಂತ ನಡೆದಿದೆ. ಹೊರ ರಾಜ್ಯದ ಪಾಸಿಂಗ್ ಹೊಂದಿರುವ ಕಾರುಗಳು ಅಪಘಾತ ಸಂಭವಿಸಿದೆ.
ಗುಜರಾತ್ ಮತ್ತು ಕೇರಳ ಪಾಸಿಂಗ್ ಹೊಂದಿರುವ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕಾರುಗಳು ನುಜ್ಜುಗೊಜ್ಜಾಗಿ ಹೋಗಿವೆ. ಗುಜರಾತ್ ಮೂಲದ ಕಾರಿನಲ್ಲಿ ಸಂಚಾರ ಮಾಡುತ್ತಿದ್ದ ಮೂವರು, ಕೇರಳದ ಮೂಲದ ಕಾರ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ರಾಣೇಬೆನ್ನೂರು ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೂ ಮೃತರ ಹೆಸರು, ಯಾವ ಊರು ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳಕ್ಕೆ ರಾಣೆಬೆನ್ನೂರು ಪೊಲೀಸರು, ಹಾಗೂ ಎಸ್‌ಪಿ.ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಾರುಗಳನ್ನು ಪೊಲೀಸರು ತೆರವುಗೊಳಿಸಿದ್ದು, ಮೃತ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಬೆಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ: ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸ್ಪಷ್ಟನೆ
ಟಾಟಾ ಏಸ್ ವಾಹನ ಪಲ್ಟಿ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ (Tata Ace) ವಾಹನ ಪಲ್ಟಿಯಾದ (Flip) ಕಾರಣ ವಾಹನದಲ್ಲಿದ್ದ ಓರ್ವ ಯುವಕ ಸಾವಿಗೀಡಾಗಿ ಐವರು ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ (Uttara Kannda)ಜಿಲ್ಲೆಯ ಮುಂಡಗೋಡದ (Mundgod) ಬಡ್ಡಿಗೇರಿ (Baddigeri) ಬಳಿ ನಡೆದಿದೆ. ಕಬ್ಬಿನ ಗದ್ದೆಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಗೌಳಿವಾಡಾದಿಂದ ಕುಸೂರು ಗ್ರಾಮದ ಕಡೆ ತೆರಳುತ್ತಿದ್ದರು. ಈ ವೇಳೆ ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದೆ.
ಘಟನೆಯಲ್ಲಿ 20 ವರ್ಷದ ಮಳ್ಳು ಗಾವಡೆ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮೂರು ಆ್ಯಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದ್ದು, ಉಳಿದವರಿಗೆ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Raichur: ಮದುವೆಗೆ ತೆರಳುತ್ತಿದ್ದ ವೇಳೆ ಜವರಾಯನ ಅಟ್ಟಹಾಸ: ಮೂವರು ಗೆಳೆಯರ ದುರ್ಮರಣ
ಇತ್ತೀಚೆಗೆ ಕೋಲಾರ ಜಿಲ್ಲೆ ಮುಳಬಾಗಿಲಿನ್ನೂ ಇಂಥದ್ದೊಂಡು ಘಟನೆ ನಡೆದಿತ್ತು. ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದ್ದರಿಂದ 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಸೀಗೇನಹಳ್ಳಿ ಗೇಟ್ ಬಳಿ ಘಟನೆ ನಡೆದಿತ್ತು. ಮುಳಬಾಗಿಲು ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಇದಾಗಿತ್ತು. ನಂಗಲಿಯಿಂದ ಶಾಲೆಗೆ ಮಕ್ಕಳನ್ನು ಕರೆದೊಯ್ತಿದ್ದ ವೇಳೆ ಟಾಟಾ ಸುಮೊ ಪಲ್ಟಿಯಾಗಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಗಾಯಾಳು ಮಕ್ಕಳನ್ನು ಕೋಲಾರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.