*   ರಾಷ್ಟ್ರೀಯ ಹೆದ್ದಾರಿ 150(ಎ) ಗುರುಗುಂಟಾ-ತಿಂಥಣಿ ಸೇತುವೆ ಬಳಿ ನಡೆದ ಘಟನೆ*   ಕಾರುಗಳ ಮುಖಾಮುಖಿ ಡಿಕ್ಕಿ ಮೂವರ ದಾರುಣ ಸಾವು*   ಈ ಕುರಿತು ಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಲಿಂಗಸಗೂರು(ಏ.21): ರಾಷ್ಟ್ರೀಯ ಹೆದ್ದಾರಿ 150(ಎ) ಗುರುಗುಂಟಾ-ತಿಂಥಣಿ ಸೇತುವೆ ಮಧ್ಯೆ ಮೌನೇಶ್ವರ ಗುಡಿ ಹತ್ತಿರದ ಘಟ್ಟ ಪ್ರದೇಶದಲ್ಲಿ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ(Collision) ಸಂಭವಿಸಿ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನ​ಪ್ಪಿದ(Death) ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.

ಯಾದಗಿರಿ(Yadgir) ಜಿಲ್ಲೆಯ ವಡಗೇರಾ ಗ್ರಾಮಕ್ಕೆ ಮದುವೆಗೆ ತೆರಳುತ್ತಿದ್ದಾಗ ಪೈದೊಡ್ಡಿ ಕ್ರಾಸ್‌ ಬಳಿಯ ಮೌನೇಶ್ವರ ಗುಡಿಯ ಘಟ್ಟ ಪ್ರದೇಶದಲ್ಲಿ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಉಂಟಾಗಿ ಅಮರೇಶ(30), ದೇವರಾಜ(35), ಗೋವಿಂದ(34) ಸ್ಥಳದಲ್ಲಿಯೇ ಮೃತಪಟ್ಟಿದ್ದು ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. 

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್‌ ಅಧಿಕಾರಿ ಸಾವು

ಗಾಯಾಳುಗಳನ್ನು ಲಿಂಗಸಗೂರು(Lingsugur) ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಟ್ಟಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡಿದ್ದಾರೆ.