ರನ್‌ವೇ ನಲ್ಲಿ ಪಲ್ಟಿಯಾದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಗಾಯಗೊಂಡ ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು ಘಟನೆ ಬಗ್ಗೆ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಿಂದ ಸ್ಪಷ್ಟನೆ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿಯ ಏರ್‌ಕ್ರಾಫ್ಟ್‌ ಅವಘಡ

ಬೆಂಗಳೂರು(ಏ.27): ಬೆಂಗಳೂರಿನ ಜಕ್ಕೂರ್ ಏರೋಡ್ರಮ್‌ನಲ್ಲಿ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾದ ಬಗ್ಗೆ ಸುವರ್ಣ ನ್ಯೂಸ್‌ ಡಾಟ್‌ ಕಾಮ್‌ ಹತ್ತು ದಿನಗಳ ಹಿಂದೆ ವರದಿ ಬಿತ್ತರಿಸಿದ್ದು, ಸದ್ಯ ಈ ವಿಚಾರವಾಗಿ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮತ್ತಷ್ಟು ಸ್ಪಷ್ಟನೆ ನೀಡಿದೆ.

ಹೌದು ವರದಿಯಲ್ಲಿ ತರಬೇತಿಯಲ್ಲಿದ್ದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ವಿಮಾನ ಜಕ್ಕೂರ್ ಏರೋಡ್ರಮ್‌ನಲ್ಲಿ ಲ್ಯಾಂಡಿಂಗ್ ಮಾಡಿತ್ತು. ಆದರೆ ನಿಯಂತ್ರಣ ತಪ್ಪಿದ ಕಾರಣ ವಿಮಾನ ರನ್‌ವೇನಲ್ಲಿ ಪಲ್ಟಿಯಾಗಿದೆ. ಮಹಿಳಾ ಪೈಲೆಟ್ ಚೆರ್ಲಿ ಆ್ಯನ್ ಸ್ಟಿಮ್ಸ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. 

ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ ವೈಮಾನಿಕ ಶಾಲೆ ಸರಿ ಸೆಸ್ಕಾ C-185, VT-ETU ವಿಮಾನವು ಜಕ್ಕೂರು ಏರೋಡ್ರಂ ಆವರಣದಲ್ಲಿರುವ ಖಾಸಗಿ ಸಂಸ್ಥೆಯಾದ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿಯದ್ದಾಗಿದೆ. ಇದು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯದ್ದಲ್ಲ ಎಂದಿದೆ.

ಅಲ್ಲದೇ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿ ಸಂಸ್ಥೆಯು ಸಂಪೂರ್ಣವಾಗಿ ಖಾಸಗಿ ಸಂಸ್ಥೆಯಾಗಿದ್ದು, ಜಕ್ಕೂರು ಏರೋಡ್ರಂ ಆವರಣದಲ್ಲಿ ವಾರ್ಷಿಕ ಗುತ್ತಿಗೆ/ಬಾಡಿಗೆ ಆಧಾರದಲ್ಲಿ ಹ್ಯಾಂಗರ್ ಹೊಂದಿದ್ದು, ವಿಮಾನ ಹಾರಾಟ ಚಟುವಟಿಕೆಗಳನ್ನು ನಡೆಸುತ್ತಾರೆ. ಸದರಿ ಸಂಸ್ಥೆಯ ಹಾರಾಟ ಚಟುವಟಿಕೆಗಳು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ತರಬೇಟಿ ಚಟುವಟಿಕೆಗಳಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದಿದೆ.