ಅಕ್ರಮ ಸಂಬಂಧ: ಗಾಂಜಾ ಕೇಸಲ್ಲಿ ಪ್ರಿಯತಮೆ ಪತಿಯ ಸಿಲುಕಿಸಲು ಯತ್ನಿಸಿ ತಾನೇ ಸಿಕ್ಕಿಬಿದ್ದ!
ಪ್ರಕರಣದಲ್ಲಿ ನಾಲ್ವರು ಬಂಧಿಯಾಗಿದ್ದಾರೆ. ಮೂಡಿಗೆರೆ ಮೂಲದ ಕಾಫಿ ಬೆಳೆಗಾರ ಮಹಮ್ಮದ್, ಆಟೋ ಚಾಲಕ ಹೈದರ ಆಲಿ, ಸಜಾದ್, ಮುಬಾರಕ್ ಬಂಧಿತರು. ಬಕಾರ್ ಅಲಿ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಒಂದು ಕೆ.ಜಿ. ನೂರಮೂವತ್ತು ಗ್ರಾಂ ಗಾಂಜಾ, ಒಂದು ಥಾರ್ ಜೀಪು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಸಕಲೇಶಪುರ(ಅ.13): ತನ್ನ ಪ್ರಿಯತಮೆಯ ಜತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನದಲ್ಲಿ ವಿಫಲವಾಗಿ ಪ್ರಿಯಕರ ಸಕಲೇಶಪುರ ಪೋಲಿಸರ ವಶವಾಗಿದ್ದಾನೆ.
ಪ್ರಕರಣದಲ್ಲಿ ನಾಲ್ವರು ಬಂಧಿಯಾಗಿದ್ದಾರೆ. ಮೂಡಿಗೆರೆ ಮೂಲದ ಕಾಫಿ ಬೆಳೆಗಾರ ಮಹಮ್ಮದ್, ಆಟೋ ಚಾಲಕ ಹೈದರ ಆಲಿ, ಸಜಾದ್, ಮುಬಾರಕ್ ಬಂಧಿತರು. ಬಕಾರ್ ಅಲಿ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಒಂದು ಕೆ.ಜಿ. ನೂರಮೂವತ್ತು ಗ್ರಾಂ ಗಾಂಜಾ, ಒಂದು ಥಾರ್ ಜೀಪು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಬಾಲಕನನ್ನೇ ಕೊಂದ ಕಿರಾತಕ!
ಘಟನೆ ಹಿನ್ನೆಲೆ:
ಅಸ್ಸಾಂ ಮೂಲದ ಬಕಾರ್ ಆಲಿ ಹಾಗೂ ಸೋಹಿತ್ ಉನ್ನೀಸ ವಿವಾಹವಾಗಿದ್ದು ಮೂಡಿಗೆರೆ ತೋಟ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇದೇ ತೋಟದಲ್ಲಿ ಕಾರ್ಮಿಕನಾಗಿದ್ದ ಮುಕ್ತಾರ್ ಆಲಿ ಹಾಗೂ ಸೋಹಿತ್ ಉನ್ನಿಸ್ ನಡುವೆ ಅಕ್ರಮ ಸಂಬಂಧ ಏರ್ಪಟಿತ್ತು. ವಿಚಾರ ಬೆಳಕಿಗೆ ಬಂದ ನಂತರ ಪತಿ ಬಕಾರ್ ಆಲಿ ಸಿಟ್ಟಿಗೆದ್ದಿದ್ದ. ರಾಜಿ ಪಂಚಾಯತಿ ನಡೆದು ಸೋಹಿತ್ ಉನ್ನಿಸ್ ಳನ್ನು ಮುಕ್ತಾರ ಅಲಿ ಮದುವೆಯಾಗಿದ್ದ.
ಮದುವೆ ನಂತರ ಪತ್ನಿಯನ್ನು ತೋಟದ ಮನೆಯಲ್ಲೆ ಬಿಟ್ಟು ಮುಕ್ತರ್ ಆಲಿ ಸಕಲೇಶಪುರ ತಾಲೂಕಿನ ಕಾಫಿ ತೋಟ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮೂಡಿಗೆರೆಗೆ ಹೋಗಿ ಬರುತ್ತಿದ್ದ. ಈ ಮಧ್ಯೆ ಸೋಹಿತ್ ಉನ್ನಿಸ ತಾನು ಕೆಲಸ ಮಾಡುತ್ತಿದ್ದ ಕಾಫಿ ತೋಟದ ಮಾಲೀಕ ಉಸಾಮ ಮಹಮ್ಮದ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದರಿಂದ ಸಿಟ್ಟಿಗೆದ್ದು ಮುಕ್ತಾರ ಆಲಿ ಪತ್ನಿಗೆ ಹಿಂಸೆ ನೀಡುತ್ತಿದ್ದ. ಈ ವಿಚಾರವನ್ನು ಮಹಿಳೆ ತೋಟದ ಮಾಲೀಕ ಉಸಾಮ ಮಹಮ್ಮದ್‌ಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡಿದ್ದ ಮಹಮ್ಮದ್ ಮುಕ್ತಾರ್ ಆಲಿಯನ್ನು ಪೋಲಿಸ್ ಪ್ರಕರಣದಲ್ಲಿ ಸಿಲುಕಿಸಿ ವಾಪಸ್ಸು ಅಸ್ಸಾಂಗೆ ಕಳುಹಿಸುವ ಯೋಜನೆ ರೂಪಿಸಿದ್ದ.
ಮೈದುನನ ಜೊತೆ ಅತ್ತಿಗೆ ಜೂಟ್; ಆತ ಗಂಡನಿಗಿಂತ ಹ್ಯಾಂಡ್‌ಸಮ್, ನನಗೆ ಗುಡ್ ಲುಕ್ಕಿಂಗ್ ಮಗು ಬೇಕೆಂದ ಮಹಿಳೆ
ಇದಕ್ಕಾಗಿ ತನ್ನ ಸ್ನೇಹಿತರಾದ ಆಟೋ ಚಾಲಕ ಸಜ್ಜಾದ್, ಮುಬಾರಕ್, ಹೈದರ್ ಅಲಿ ಹಾಗೂ ಸೋಹಿತ್ ಉನ್ನಿಸ್ ಮೊದಲ ಪತಿ ಬಕಾರ್ ಆಲಿ ಸಹಕಾರ ಪಡೆದು ಗಾಂಜಾ ಪ್ರಕರಣದಲ್ಲಿ ಮುಕ್ತಾರ್ ಆಲಿಯನ್ನು ಸಿಲುಕಿಸಲು ಯೋಜನೆ ರೂಪಿಸಿದ್ದ. ಯೋಜನೆಯಂತೆ ಗಾಂಜಾ ಖರೀದಿಸಿ ಸಕಲೇಶಪುರಕ್ಕೆ ಬಂದು ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪದ ಹೋಟೆಲ್‌ನಲ್ಲಿ ಕುಳಿತಿದ್ದ ಮುಕ್ತಾರ್ ಆಲಿಯನ್ನು ಬಲವಂತವಾಗಿ ಜೀಪಿನಲ್ಲಿ ಕುಳ್ಳಿರಿಸಿ ಮೂಡಿಗೆರೆ ಪೊಲೀಸ್ ಠಾಣೆಗೆ ಕರೆದೊಯ್ಯತ್ತಿದ್ದ.
ಈ ವಿಚಾರ ಸಾರ್ವಜನಿಕರಿಂದ ಸಕಲೇಶಪುರ ಪಟ್ಟಣ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಜಗದೀಶ್ ಅವರ ಗಮನಕ್ಕೆ ಬಂದಿದ್ದು, ತಕ್ಷಣವೇ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಮೂಡಿಗೆರೆಗೆ ತೆರಳುತ್ತಿದ್ದ ಆಟೋ ಹಾಗೂ ಥಾರ್ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬಕಾರ್ ಆಲಿ ತಪ್ಪಿಸಿಕೊಂಡಿದ್ದಾನೆ. ಪೋಲಿಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.