Ramanagara Crime: ಬೈಕಲ್ಲಿ ಶವ ಸಾಗಣೆ ವೇಳೆ ಅಪಘಾತ: ಬಯಲಾಯ್ತು ಕೊಲೆ ರಹಸ್ಯ..!

*   ಹಣ​ಕಾ​ಸಿನ ವಿಚಾ​ರ​ವಾಗಿ ಗಲಾಟೆ ನಡೆದು ಮಹಿಳೆ ಕೊಲೆ
*   ಮಹಿಳೆಯ ಶವವನ್ನು ಬೈಕಲ್ಲಿ ಒಯ್ಯುತ್ತಿದ್ದ ಆರೋಪಿಗಳು
*   ಬೈಕ್‌ ಸ್ಕಿಡ್‌ ಆಗಿ ಬಿದ್ದ ವೇಳೆ ಅಪಘಾತವೆಂದು ಹೈಡ್ರಾಮ
 

Four Arrested For Woman Murder Case in Ramanagara grg

ರಾಮ​ನ​ಗರ(ಮೇ.12): ಮಹಿ​ಳೆಯ ಶವ(Deadbody) ಸಾಗಿ​ಸು​ತ್ತಿದ್ದ ಬೈಕೊಂದು ಅಪ​ಘಾ​ತ​ಕ್ಕೀ​ಡಾಗಿದ್ದು(Accident), ಈ ವೇಳೆ ಕೊಲೆ ಪ್ರಕ​ರಣ ಬೆಳ​ಕಿಗೆ ಬಂದಿದ್ದು ಆರೋ​ಪಿ​ಗಳು ಸಿಕ್ಕಿ​ಬಿ​ದ್ದಿ​ರುವ ಘಟನೆ ರಾಮ​ನ​ಗ​ರ​ದಲ್ಲಿ(Ramanagara) ನಡೆ​ದಿದೆ.

ಬೆಂಗ​ಳೂರಿನ ರಾಜ​ರಾ​ಜೇ​ಶ್ವರಿ ನಗರ ನಿವಾಸಿ ಶ್ವೇತಾ ಕೊಲೆ​ಯಾ​ದ​ವರು(Murder). ಆರೋ​ಪಿ​ಗ​ಳಾದ(Accused) ​ದುರ್ಗಿ, ರಘು, ವಿನೋದ್‌, ನಾಗ​ರಾಜುನನ್ನು ಪೊಲೀ​ಸರು(Police) ಬಂಧಿ​ಸಿದ್ದು(Arrest), ಮತ್ತೊಬ್ಬ ಆರೋಪಿ ಅಭಿ ಎಂಬಾತನಿಗಾಗಿ ಹುಡು​ಕಾಟ ಮುಂದು​ವ​ರೆ​ದಿ​ದೆ.

Love Tragedy : ಹೆಂಡತಿಯ ಬಾಯ್‌ಫ್ರೆಂಡ್‌ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್

ಏನಿದು ಪ್ರಕ​ರಣ?

ಮೃತ ಶ್ವೇತಾ ಮತ್ತು ದುರ್ಗಿ ಇಬ್ಬರು ಸ್ನೇಹಿತೆಯರು. ಕಳೆದ ಆರು ತಿಂಗಳಿನಿಂದ ಶ್ವೇತಾ, ದುರ್ಗಿಯ ಬೆಂಗಳೂರಿನ ಮನೆಯಲ್ಲಿ ಉಳಿದುಕೊಂಡಿದ್ದಳು. ಕ್ಷಲ್ಲಕ ಕಾರಣಕ್ಕೆ ಜಗಳವಾಗಿ ದುರ್ಗಿ, ಶ್ವೇತಾಗೆ ಬಡಿಗೆ ತೆಗೆದುಕೊಂಡು ಹೊಡೆದಿದ್ದರಿಂದ ಆಕೆ ತೀವ್ರ​ವಾ​ಗಿ ಗಾಯ​ಗೊಂಡು ಮೃತಪಟ್ಟಿದ್ದಾರೆ(Death).

ಈ ವಿಷ​ಯ​ವನ್ನು ದುರ್ಗಿ ಪತಿ ರಘುಗೆ ತಿಳಿ​ಸಿ​ದ್ದಾಳೆ. ರಘು ತನ್ನ ಗೆಳೆಯರಾದ ಅಭಿ, ವಿನೋದ್‌ ಮತ್ತು ನಾಗ​ರಾ​ಜು ಎಂಬ​ವ​ರೊಂದಿಗೆ ಸೇರಿ ಶ್ವೇತಾಳ ಮೃತದೇಹ​ವನ್ನು ಶ್ರೀರಂಗ​ಪ​ಟ್ಟಣ ಬಳಿಯ ನದಿ ಅಥವಾ ಸೇತುವೆ ಕೆಳಗೆ ಎಸೆ​ಯುವ ಉಪಾಯ ಮಾಡಿ​ದ್ದಾನೆ. 

ಯೋಜನೆಯಂತೆ ನಾಗ​ರಾಜು ಮತ್ತು ವಿನೋದ್‌ ಮೃತ ದೇಹ​ವನ್ನು ಮಧ್ಯ​ದಲ್ಲಿ ಇರಿ​ಸಿ​ಕೊಂಡು ಬೆಂಗ​ಳೂ​ರಿ​ನಿಂದ ಹೊರ​ಟಿ​ದ್ದು ರಾಮನಗರ ಬಳಿ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಬಳಿಕ ಪೊಲೀಸರ ಬಳಿ ಅಪಘಾತದಿಂದ ಮಹಿಳೆ ಮೃತಪಟ್ಟಿರುವುದಾಗಿ ನಾಟಕವಾಡಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಶ್ವೇತಾ ಮೃತ​ಪಟ್ಟು 5-6 ಗಂಟೆ ಕಳೆ​ದಿ​ರು​ವು​ದಾಗಿ ಬಹಿ​ರಂಗ ಪಡಿ​ಸಿ​ದಾಗ ಕೊಲೆ ಕೃತ್ಯ ಬೆಳ​ಕಿಗೆ ಬಂದಿ​ದೆ.
 

Latest Videos
Follow Us:
Download App:
  • android
  • ios