ಬೆಂಗಳೂರು: 50 ಲಕ್ಷ ಮೌಲ್ಯದ 1037 ಮೊಬೈಲ್ ಎಗರಿಸಿದ್ದವರು ಅರೆಸ್ಟ್
ಗೋರಿಪಾಳ್ಯದ ಮೊಹಮದ್ ಪಾಷ ಅಲಿಯಾಸ್ ಆರೀಫ್ ಪಾಷ ಹಾಗೂ ಆತನ ಸಹಚರರಾದ ಮೊಹಮದ್ ಉಮರ್, ಐಯಾನ್ ಅಲಿಯಾಸ್ ಅಲೀಂ ಪಾಷ ಮತ್ತು ಮೊಹಮದ್ ಸಲೀಂ ಬಂಧಿತರಾಗಿದ್ದು, ಆರೋಪಿಗಳಿಂದ ₹50 ಲಕ್ಷ ಮೌಲ್ಯದ 1037 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು(ಅ.28): ರಾಜಧಾನಿಯಲ್ಲಿ ತನ್ನ ಸಹಚರರ ಮೂಲಕ ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿಸಿ ಬಳಿಕ ಹೊರ ರಾಜ್ಯಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡದ ನಾಯಕ ಸೇರಿದಂತೆ ನಾಲ್ವರು ಬನ್ನೇರುಘಟ್ಟ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗೋರಿಪಾಳ್ಯದ ಮೊಹಮದ್ ಪಾಷ ಅಲಿಯಾಸ್ ಆರೀಫ್ ಪಾಷ ಹಾಗೂ ಆತನ ಸಹಚರರಾದ ಮೊಹಮದ್ ಉಮರ್, ಐಯಾನ್ ಅಲಿಯಾಸ್ ಅಲೀಂ ಪಾಷ ಮತ್ತು ಮೊಹಮದ್ ಸಲೀಂ ಬಂಧಿತರಾಗಿದ್ದು, ಆರೋಪಿಗಳಿಂದ ₹50 ಲಕ್ಷ ಮೌಲ್ಯದ 1037 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜಿನ ಸಮೀಪ ಕದ್ದ ಮೊಬೈಲ್ ಮಾರಾಟಕ್ಕೆ ಆರೀಫ್ ಪಾಷ ಹಾಗೂ ಆತನ ಸಹಚರ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ಸಿ.ಕೃಷ್ಣಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದೂ ದೇವರನ್ನ ನಿಂದಿಸಿದವನ ಬಣ್ಣ ಬಯಲು ಮಾಡಿದ್ದ ಯುವಕ ಆತ್ಮಹತ್ಯೆ: ಡೆತ್ ನೋಟ್ ಬಯಲು ಮಾಡ್ತು ಸಾವಿನ ಸೀಕ್ರೆಟ್..!
ಸಹಚರರಿಂದ 2-3 ಸಾವಿರಕ್ಕೆ ಖರೀದಿ:
ಆರೀಫ್ ಪಾಷ ವೃತ್ತಿಪರ ಮೊಬೈಲ್ ಕಳ್ಳ, ಆತನ ಮೇಲೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಮೊಬೈಲ್ ಕಳವು ಪ್ರಕರಣ ಸಂಬಂಧ ಆತನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಜಾಮೀನು ಪಡೆದು ಹೊರಬಂದ ನಂತರ ಮತ್ತೆ ಆತ ದಂಧೆ ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಜಯನಗರ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ನಗರದ ಜನಸಂದಣಿ ಪ್ರದೇಶ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ದುಬಾರಿ ಮೊಬೈಲ್‌ಗಳನ್ನು ಪಾಷ ಗ್ಯಾಂಗ್ ದೋಚುತ್ತಿತ್ತು. ಇದಕ್ಕಾಗಿ ಗೋರಿಪಾಳ್ಯದ ಮೊಹಮದ್ ಇಲಿಯಾಸ್, ಮುಸ್ತಾಕ್, ಉಸ್ಮಾನ್, ಆರೀಫ್, ಸಲ್ಮಾನ್, ಸಾಹೀಲ್, ಮಜರ್, ಅಪ್ಸರ್ ಹಾಗೂ ನಾಜೀರ್ ತಂಡವನ್ನು ಪಾಷ ಕಟ್ಟಿದ್ದ. ಆರೀಫ್ ಬಂಧನ ಬಳಿಕ ತಪ್ಪಿಸಿಕೊಂಡಿರುವ ಆತನ ಸಹಚರರ ಪತ್ತೆಗೆ ತನಿಖೆ ಮುಂದುವರೆದಿದೆ.
ಕೋಲಾರ: ಮಾಲೂರಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಕೊಲೆ..!
ಕದ್ದ ಮೊಬೈಲ್‌ಗಳಿಗೆ ತಲಾ ಒಂದಕ್ಕೆ ತನ್ನ ಸಹಚರರಿಗೆ ₹2-3 ಸಾವಿರ ನೀಡಿ ಪಾಷ ಖರೀದಿಸುತ್ತಿದ್ದ. ಬಳಿಕ ಆ ಮೊಬೈಲ್‌ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ಕೇರಳ ಮತ್ತು ತಮಿಳುನಾಡಿನ ಮೊಬೈಲ್ ಮಾರಾಟ ದಂಧೆಕೋರರಿಗೆ 6ರಿಂದ 8 ಸಾವಿರ ರು.ಗಳಿಗೆ ಪಾಷ ವಿಲೇವಾರಿ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕದ್ದ ಮೊಬೈಲ್‌ಗಳು ಬಸ್‌ಗಳಲ್ಲಿ ಸಾಗಣೆ
ಕದ್ದ ಮೊಬೈಲ್‌ಗಳನ್ನು ಬಾಕ್ಸ್‌ಗಳಲ್ಲಿ ತುಂಬಿ ಹೊರ ರಾಜ್ಯಗಳಿಗೆ ಬಸ್‌ಗಳ ಮೂಲಕ ಪಾಷ ಕಳುಹಿಸುತ್ತಿದ್ದ. ಎಲೆಕ್ಟ್ರಿಕಲ್ ಬಿಡಿ ಭಾಗಗಳೆಂದು ಆತ ಪಾರ್ಸಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.