*   ಸಿನಿಮಾ ಸ್ಟೈಲ್‌ನಲ್ಲಿ ಮಗು ಕದ್ದಿದ್ದ ಕುಟುಂಬ ಅಂದರ್*   ಮಗಳಿಗೆ ಮಕ್ಕಳಿಲ್ಲ ಅಂತ ಬೇರೆಯವರ ಮಗು ಕದ್ದಿದ್ದ ಶೈಲಜಾ ಕುಟುಂಬ*   ಮೊಬೈಲ್ ಲೊಕೇಶನ್, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕೇಸ್ ಭೇದಿಸಿದ ಪೊಲೀಸರು  

ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾಸನ(ಮಾ.24): ಹಾಸನ ಮಗಳಿಗೆ ಮದ್ವೆಯಾಗಿ ಐದು ವರ್ಷವಾದರೂ ಮಕ್ಕಳಾಗಿರಲಿಲ್ಲ, ಮಗಳ ಮನೆಯಲ್ಲಿ ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ನಿತ್ಯ ಜಗಳ. ಕುಟುಂಬದಲ್ಲಿರಲಿಲ್ಲ ನೆಮ್ಮದಿ. ಮಗಳು ಸಂಕಷ್ಟದ ಬದುಕು ಕಂಡು ಕಂಗಾಲಾದ ತಾಯಿ ಮತ್ತು ಮಕ್ಕಳು. ಮಗಳ ಕುಟುಂಬದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮಾಡಿದ್ದರು ಮಾಸ್ಟರ್ ಪ್ಲಾನ್. ಮಗು ಮಗಳ ಮಡಿಲಿಗೆ ಕೊಟ್ಟರೆ ಆ ಮನೆಯಲ್ಲಿ ಗಲಾಟೆ ತಪ್ಪುತ್ತದೆಯಲ್ಲ ಅಂತ ಅಂದುಕೊಂಡ ತಾಯಿ ಮತ್ತು ಮಕ್ಕಳು ಮಗುವನ್ನು ಮಗಳ ಕೈಗೆ ಕೊಡಲು ಪ್ಲಾನ್ ಮಾಡಿದ್ದರು. ಆ ಪ್ಲಾನ್ ಸಕ್ಸಸ್ ಆಯಿತು. ಮಗುವನ್ನು ಮನೆಗೆ ತೆಗೆದುಕೊಂಡು ಹೋದರು. ಅದು ಮಗುವನ್ನು ಕಳ್ಳತನ ಮಾಡಿ ಮಗು ಹೊತ್ತೊಯ್ದಿದ್ದರು. 

ಇದು‌ ಯಾವುದೋ ಸಿನಿಮಾದ ಕಥೆಯಲ್ಲ. ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದಿದ್ದ ಘಟನೆ. ಎಸ್. ಸಿನಿಮಾ ಸ್ಟೈಲ್‌ನಲ್ಲಿ ಮಗು ಅಪಹರಿಸಿದ್ದ ನಾಲ್ವರನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದು, ಮಗು ಕಳೆದುಕೊಂಡಿದ್ದ ದಂಪತಿಗೆ ಮಗ ವಾಪಸ್ ಕೊಡಿಸಿದ್ದಾರೆ.

ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ

ಬಂಧಿತ ಆರೋಪಿಗಳನ್ನ ಸುಮಾ, ಅರ್ಪಿತಾ, ಯಶವಂತ ಹಾಗೂ ಶೈಲಜಾ ಅಂತ ಗುರುತಿಸಲಾಗಿದೆ. ಅರಕಲಗೂಡು(Arakalagud) ಸರ್ಕಾರಿ ಆಸ್ಪತ್ರೆಯಲ್ಲಿ(Government Hospital) ಮಗು ಕಳವಾಗಿದ್ದ ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ. ನರ್ಸ್ ವೇಷದಲ್ಲಿ ಬಂದು ಮಗು ಕಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಮಗು ಕದ್ದ ಕಾರಣದ ಹಿಂದೆ ಇದೆ ಒಂದು ಮನಕರಗುವ ಸ್ಟೋರಿ. 

ಹೌದು, ಹಾಸನ(Hassan) ಜಿಲ್ಲೆಯ ಅರಕಲಗೂಡು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್ 14 ರಂದು ಆಗ ತಾನೆ ಜನಿಸಿದ್ದ ಮಗು ಕಳ್ಳತನವಾಗಿತ್ತು(Child Theft). ಅಸ್ಸಾಂ(Assam) ಮೂಲದ ಕೂಲಿ ಕಾರ್ಮಿಕ ದಂಪತಿಯ ಗಂಡು ಮಗುವನ್ನ ಹುಟ್ಟಿದ ದಿನದ ರಾತ್ರಿಯೇ ಕಳ್ಳತನ ಮಾಡಲಾಗಿತ್ತು. ಅಸ್ಸಾಂ ಮೂಲದ ಸೂರಜ್ ಅಲಿ ಮತ್ತು ಯಾಸ್ಮಿನ್ ದಂಪತಿ ಮಗುವನ್ನ ನರ್ಸ್ ಸೋಗಿನಲ್ಲಿ ಬಂದ ಐವರ ತಂಡ, ಮಗು ಕದಿಯೋದ್ರಲ್ಲಿ ಯಶಸ್ವಿಯಾಗಿದ್ರು. ಆರೋಪಿಗಳ(Accused) ಚಲನ ವಲನವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಗುವಿನ ತಂದೆಯನ್ನು ಔಷಧಿ ತರೊದಕ್ಕೆ ಕಳಿಸಿ, ಮಗುವಿಗೆ ಡ್ರಾಪ್ಸ್ ಹಾಕಿಸೋ ನೆಪದಲ್ಲಿ ಮಗು ಎಸ್ಕೇಪ್ ಮಾಡಿದ್ರು.‌ ಇದೀಗ ಅರಕಲಗೂಡು ಪೊಲೀಸರು(Police) ಪ್ರಕರಣ ಭೇದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಶೈಲಜಾ, ಯಶ್ವಂತ್, ಅರ್ಪಿತಾ, ಸುಮಾ ನಾಲ್ವರನ್ನು ಬಂಧಿಸಿದ್ದಾರೆ. ಮಗು ರಕ್ಷಿಸಿ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಮಗು ಮರಳಿ ತಾಯಿ ಮಡಿಲಿಗೆ ಸಿಕ್ಕಿದ್ದಕ್ಕೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. 

ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ ಜನ: ಅತಿ ಆಸೆ ಗತಿಗೇಡು ಅನ್ನೋದು ಇದಕ್ಕೆ..!

ಅರಕಲಗೂಡು ತಾಲೂಕಿನ ಕಣಿಯಾರು ಗ್ರಾಮದ ಸುಶ್ಮಿತಾ ಎಂಬಾಕೆಯನ್ನು ಮೈಸೂರಿನ ಯುವಕನೊಬ್ಬನಿಗೆ ಕೊಟ್ಟ ವಿವಾಹ ಮಾಡಲಾಗಿತ್ತು. ಆದರೆ ಮದುವೆ ಆಗಿ ಐದು ವರ್ಷ ಕಳೆದರೂ ಸುಶ್ಮಿತಾಳಿಗೆ ಮಕ್ಕಳು ಆಗಿರಲಿಲ್ಲ, ಇದೇ ವಿಚಾರಕ್ಕೆ ಸುಶ್ಮಿತಾ ಗಂಡನಿಗೆ ಮತ್ತೊಂದು ಮದುವೆ ಮಾಡಲು ಗಂಡನ ಮನೆಯವರು ತಯಾರು ಮಾಡಿದ್ರಂತೆ. ಇದ್ರಿಂದ ಆತಂಕಗೊಂಡು ತಮ್ಮ ಮನೆ ಮಗಳ ಬಾಳು ಹಾಳಾಗುತ್ತೆ ಅಂತಾ ಸುಶ್ಮಿತ ತಾಯಿ ಶೈಲಜಾ, ಹಾಗೂ ಮಗ ಯಶ್ವಂತ್, ಇನ್ನೋರ್ವ ಪುತ್ರಿ ಸುಮ, ಸುಮಳ ಸ್ನೇಹಿತೆ ಅರ್ಪಿತಾ ಮಗುವೊಂದನ್ನ ಕದ್ದು ತಮ್ಮ ಮಗಳ ಮಡಿಲಿಗೆ ಸೇರಿಸೋ ಪ್ಲಾನ್ ಮಾಡಿದ್ರು. ಆಗ ಇವ್ರ ಕಣ್ಣಿಗೆ ಬೀಳೋದೆ ಈ ಅಸ್ಸಾಂ ದಂಪತಿ ಮಗು, ಅಸ್ಸಾಂ ಮೂಲದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಈ ಮಗುವನ್ನ ನಾವು ಕದ್ದರೆ ನಮ್ಮ ಅಕ್ಕನ ಬಾಳು ಸರಿಯಾಗಲಿದೆ ಎಂಬ ಕಾರಣಕ್ಕೆ ಸುಶ್ಮಿತಾ ಮನೆಯವರು ಈ ಕೃತ್ಯ ಎಸಗುತ್ತಾರೆ. ಮೊಬೈಲ್ ಲೊಕೇಶನ್ ಹಾಗೂ ಸಿಸಿಟಿವಿ(CCTV) ದೃಶ್ಯಗಳ ಆಧಾರದ ಮೇಲೆ ಕೇಸ್ ಭೇದಿಸಿದ್ದಾರೆ.

ಮಗು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರಿಗೂ ಜಾಮೀನು(Bail) ಮಂಜೂರಾಗಿದ್ದು, ಎಲ್ಲರೂ ಪಶ್ಚಾತ್ತಾಪದಲ್ಲಿ ಕಣ್ಣೀರಿಡುತ್ತಿದ್ದಾರೆ. ಒಟ್ಟಾರೆ, ಸುಷ್ಮಿತಾಳಿಗೆ ಮಗುವಿಲ್ಲವೆಂದು ಉಂಟಾಗಿರೋ ಗಲಾಟೆ ಸರಿಮಾಡೋದಕ್ಕೆ ಅಂತಾ ಮನೆಮಂದಿಯೆಲ್ಲಾ ಒಂದಾಗಿದ್ದು‌ ಒಳ್ಳೆಯದೇ, ಆದ್ರೆ ಅದಕ್ಕೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ತಪ್ಪು ಮಾರ್ಗ. ಇನ್ನೊಂದು ಮಗುವನ್ನು ಕದ್ದು ತನ್ನ ಮಗಳಿಗೆ ಕೊಡೊ ಆ ಕುಟುಂಬದ ವಿಚಿತ್ರ ಐಡಿಯಾ ನೋಡಿ ಜನರು ಅರೇ... ಇದೆಂತಾ ಪ್ಲಾನ್ ಅಂತ ಮಾತಾಡಿಕೊಳ್ಳುವಂತಾಗಿದೆ.