ಮಹಾರಾಷ್ಟ್ರದ ಪ್ರಸಿದ್ಧ ದೇಗುಲ ಶನಿ ಶಿಂಗ್ನಾಪುರದ ಮಾಜಿ ಟ್ರಸ್ಟಿ, ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿದೆ. ದೇಗುಲದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೇ ಘಟನೆ ನಡೆದಿದೆ.

ಮುಂಬೈ: ಮಹಾರಾಷ್ಟ್ರದ ಪ್ರಸಿದ್ಧ ದೇಗುಲ ಶನಿ ಶಿಂಗ್ನಾಪುರದ ಮಾಜಿ ಟ್ರಸ್ಟಿ, ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿದೆ.

ದೇಗುಲದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೇ ಘಟನೆ ನಡೆದಿದೆ. ನಿತಿನ್ ಶೇಟ್‌ ( 43) ಆತ್ಮಹತ್ಯೆ ಮಾಡಿಕೊಂಡವರು. ವಸ್ತಿಯಲ್ಲಿರುವ ಅವರ ನಿವಾಸದಲ್ಲಿ ಶವ ಪತ್ತೆಯಾಗಿದೆ.

ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಶನಿ ಶಿಂಗ್ನಾಪುರ ದೇವಸ್ಥಾನದಲ್ಲಿ ನಕಲಿ ಆ್ಯಪ್‌ಗಳ ಮೂಲಕ ದೇಣಿಗೆ ಸಂಗ್ರಹಿಸಿದ ಆರೋಪ ಮತ್ತು ದೇಗುಲದ ದೈನಂದಿನ ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆ ಸಾವು ಪ್ರಕರಣಕ್ಕೆ ಹೊಸ ತಿರುವು

ಪೀಣ್ಯ ದಾಸರಹಳ್ಳಿ : ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆಯ ಆತ್ಮಹ* ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆ ಮಹಿಳೆ ನೇಣಿ* ಬಲಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.ಗುರುವಾರ ಅಂಚೆಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೃತ ಮಹಿಳೆ ಸ್ಪಂದನಾ ಕಾಲೇಜಿಗೆ ಹೋಗುತ್ತಿದ್ದಾಗಲೇ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಇದಕ್ಕೆ ಪೋಷಕರ ವಿರೋಧ ಇತ್ತು. ಹಲವು ದಿನಗಳಿಂದ ಅಭಿಷೇಕ್‌ಗೆ ಅಪರಿಚಿತ ಯುವತಿಯೊಬ್ಬಳು ಕರೆ ಮಾಡುತ್ತಿದ್ದಳು. ಹೀಗಾಗಿ ಅಭಿಷೇಕ್ ಕೂಡ ಆ ಯುವತಿ ಜೊತೆಗೆ ಅನೈತಿ* ಸಂಬಂಧ ಹೊಂದಿದ್ದಾನೆ ಎಂದು ಸ್ಪಂದನಾಗೆ ಶಂಕೆ ವ್ಯಕ್ತವಾಗಿತ್ತು.

ಜೊತೆಗೆ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಹಲವು ಬಾರಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಇನ್ಮುಂದೆ ಆಕೆಯ ಜೊತೆಗೆ ಮಾತಾಡುವುದಿಲ್ಲ ಎಂದು ಅಭಿಷೇಕ್ ಹೇಳಿದ್ದ. ಆದರೆ ಮೊನ್ನೆ ಭೀಮನ ಅಮಾವಾಸ್ಯೆ ದಿನ ಸ್ಪಂದನಾ ಪತಿ ಅಭಿಷೇಕ್‌ಗೆ ಪೂಜೆ ಮಾಡುವ ವೇಳೆಯೇ ಆ ಯುವತಿಯಿಂದ ಮತ್ತೆ ಕರೆ ಬಂದಿತ್ತು. ಇದರಿಂದ ನೊಂದ ಸ್ಪಂದನಾ ಕೋಣೆಗೆ ಹೋಗಿ ಆತ್ಮಹ*ಗೆ ಶರಣಾಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.