Asianet Suvarna News Asianet Suvarna News

ಹಣ ಸಂಪಾದನೆಗೆ ಡ್ರಗ್ಸ್‌ ದಂಧೆ ಶುರು: ವಿದೇಶಿ ಪೆಡ್ಲರ್‌ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ| ನೈಜೀರಿಯಾ ಮೂಲದ ನೊನ್ಸೋ ಜೋಚಿನ್‌ ಬಂಧಿತ ಆರೋಪಿ| ವೃತ್ತಿಪರ ಡ್ರಗ್ಸ್‌ ಪೆಡ್ಲರ್‌ ಆಗಿದ್ದ ಜೋಚಿನ್‌ ಮತ್ತೆ ತನ್ನ ದಂಧೆ ಶುರು ಮಾಡಲು ತಯಾರಿ ನಡೆಸಿದ್ದ| ಆರೋಪಿ ವಿರುದ್ಧ ಪಿಟ್‌ ಎನ್‌ ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲು| 

Foreign Pedler Arrested in Bengaluru for Drug Mafia Case grg
Author
Bengaluru, First Published May 5, 2021, 7:24 AM IST

ಬೆಂಗಳೂರು(ಮೇ.05): ರಾಜಧಾನಿಯಲ್ಲಿ ಡ್ರಗ್ಸ್‌ ದಂಧೆಯಲ್ಲಿ ನಿರತನಾಗಿದ್ದ ವಿದೇಶಿ ಪ್ರಜೆಯೊಬ್ಬನ್ನು ಗೂಂಡಾ ಕಾಯ್ದೆ ಮಾದರಿಯ ಪಿಟ್‌ ಎನ್‌ಡಿಪಿಎಸ್‌ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ನೊನ್ಸೋ ಜೋಚಿನ್‌ ಬಂಧಿತ. ಆರೋಪಿ ಕೆಲ ದಿನಗಳ ಹಿಂದಷ್ಟೆ ಜೈಲಿನಿಂದ ಹೊರ ಬಂದಿದ್ದ. ವೃತ್ತಿಪರ ಡ್ರಗ್ಸ್‌ ಪೆಡ್ಲರ್‌ ಆಗಿದ್ದ ಜೋಚಿನ್‌ ಮತ್ತೆ ತನ್ನ ದಂಧೆ ಶುರು ಮಾಡಲು ತಯಾರಿ ನಡೆಸಿದ್ದ. ಈ ಬಗ್ಗೆ ಮಾಹಿತಿ ಪಡೆದು ಆರೋಪಿಯನ್ನು ಸಿಸಿಬಿ ಇನ್‌ಸ್ಪೆಕ್ಟರ್‌ ಲಕ್ಷ್ಮೀಕಾಂತಯ್ಯ ನೇತೃತ್ವದ ತಂಡ ಬಂಧಿಸಿದೆ.

ಡ್ರಗ್ಸ್ ಕೊಳ್ಳಲು 500 ರೂ. ದೋಚಿದವ ಭಯಾನಕವಾಗಿ ಕೊಲೆಯಾದ!

2013ರಲ್ಲಿ ವ್ಯಾಪಾರಿ ವೀಸಾದಡಿ ಭಾರತಕ್ಕೆ ಬಂದ ಜೋಚಿನ್‌, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದ. ನಂತರ ಮಣಿಪುರ ಮೂಲದ ಯುವತಿ ಜತೆ ವಿವಾಹವಾದ ಮೇಲೆ ಬಾಣಸವಾಡಿ ಸಮೀಪದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದ. ವೀಸಾದ ಅವಧಿ ಮುಗಿದ ಬಳಿಕ ಜೋಚಿನ್‌, ಸುಲಭವಾಗಿ ಹಣ ಸಂಪಾದನೆಗೆ ನಗರದಲ್ಲಿ ಡ್ರಗ್ಸ್‌ ದಂಧೆ ಶುರು ಮಾಡಿದ್ದ. 2017ರಲ್ಲಿ ಆತನನ್ನು ಮೊದಲ ಬಾರಿಗೆ ಪೊಲೀಸರು ಬಂಧಿಸಿದ್ದರು. ಡ್ರಗ್ಸ್‌ ದಂಧೆಯೇ ಆತನ ವೃತ್ತಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಚಿನ್‌ ವಿರುದ್ಧ ಪಿಟ್‌ ಎನ್‌ ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯಡಿ ಆರೋಪಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios