ಮುಂಬೈ(ಏ. 18)   ತಮ್ಮಿಂದ ಐದು ನೂರು. ರೂ ದರೋಡೆ ಮಾಡಿದ ಎಂಬ ಕಾರಣಕ್ಕೆ ಇಬ್ಬರು ಸೇರಿ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದಾರೆ.

ಮುಂಬೈನ ವರ್ಸೋವಾದಿಂದ ಘಟನೆ ವರದಿಯಾಗಿದೆ.  ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ ವರ್ಸೋವಾ ಗ್ರಾಮದ ಗೋಮಾ ಲೇನ್‌ನಲ್ಲಿ ಶವ ಪತ್ತೆಯಾಗಿದೆ.

ವ್ಯಕ್ತಿಯೊಬ್ಬನ ಹತ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ. 25 ವರ್ಷದ ವ್ಯಕ್ತಿಯ ಶವ ರಕ್ತ ಸಿಕ್ತವಾಗಿ ಬಿದ್ದುಕೊಂಡಿತ್ತು. ಕುತ್ತಿಗೆ ಸೀಳಲಾಗಿತ್ತು.

ಶಿಕ್ಷಕಿಯ ಕೊಲೆ ಮಾಡಿ ಶವದೊಂದಿಗೆ ಸೆಕ್ಸ್ ನಡೆಸಿದ ಕಾಮಾಂಧ

ಆತನ ಹಚ್ಚೆ ಆಧರಿಸಿ ಶವವನ್ನು ವಿಕ್ರಮ್ ನಿಷಾದ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಬಳಿ ಮಾಹಿತಿ 500 ರೂ. ದರೋಡೆ  ಪ್ರಕರಣದಲ್ಲಿ ಹಿಂದಿನ ದಿನ ದೊಡ್ಡ ವಾಗ್ವಾದ ಆದ ವಿಚಾರ ಗೊತ್ತಾಗಿದೆ. ಹತ್ಯೆಗೀಡಾದವನ ಹೊಟ್ಟೆಯನ್ನು ಮನಸೋ ಇಚ್ಛೆ ಇರಿಯಲಾಗಿದೆ. ಹತ್ತಕ್ಕೂ ಅಧಿಕ ಸಾರಿ ಚಾಕುವಿನಿಂದ ಇರಿಯಲಾಗಿದ್ದು ಭೀಕರತೆಯನ್ನು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಹತ್ಯೆಗೀಡಾದ ವ್ಯಕ್ತಿ ಡ್ರಗ್ಸ್ ಕೊಳ್ಳಲು ಇಬ್ಬರಿಂದ ಹಣ ದರೋಡೆ ಮಾಡಿದ್ದ. 

ತಕ್ಷಣವೇ ಕಾರ್ಯನಿರತಾರದ ಪೊಲೀಸರು ಹತ್ಯೆ ಮಾಡಿದ ಸಂದೀಪ್ ರಾಯ್ (25) ಮತ್ತು ಘಾನ್ಶ್ಯಾಮ್ ದಾಸ್ (50) ಎಂಬುವರನ್ನು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಹತ್ಯೆಯಾಗಿಹೋಗಿದ್ದು ಇಬ್ಬರು ಆರೋಪಿಗಳ ಬಂಧನವಾಗಿದೆ.