* ಬೆಂಗಳೂರಲ್ಲಿ ವಿದೇಶಿ ಪ್ರಜೆ ಹತ್ಯೆ * ಚಿತ್ತಾಪುರ ಯುಕವನ ಪ್ರಾಣ ತೆಗೆದ ಗಾಂಜಾ* ಮೈಸೂರಲ್ಲಿ ಕ್ಷುಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಕೊಲೆ
ಬೆಂಗಳೂರು(ಡಿ.13): ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಿದೇಶಿ ಪ್ರಜೆಗಳ(Foreign Citizens) ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಆಫ್ರಿಕಾ(Africa) ದೇಶದ ವಿಕ್ಟರ್ (40) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಸ್ನೇಹಿತ ಆಫ್ರಿಕಾ ಪ್ರಜೆಯನ್ನು ಪೊಲೀಸರು(Police) ವಶಕ್ಕೆ(Arrest) ಪಡೆದಿದ್ದಾರೆ. ಕಮ್ಮನಹಳ್ಳಿ ಸಮೀಪದ ಕುಳ್ಳಪ್ಪ ಸರ್ಕಲ್‌ನಲ್ಲಿ ರಾತ್ರಿ 10 ಗಂಟೆಗೆ ಸುಮಾರಿಗೆ ಈ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ವಿಕ್ಟರ್ ಹಾಗೂ ಆರೋಪಿ ಆಫ್ರಿಕಾ ಮೂಲದವರಾಗಿದ್ದು, ಕಮ್ಮನಹಳ್ಳಿ ಸಮೀಪ ಅವರು ನೆಲೆಸಿದ್ದರು. ಇಬ್ಬರು ಕೂಡಾ ಆತ್ಮೀಯ ಸ್ನೇಹಿತರಾಗಿದ್ದರು. ಕುಳ್ಳಪ್ಪ ಸರ್ಕಲ್‌ನಲ್ಲಿ ನಡೆದುಕೊಂಡು ಹೋಗುವಾಗ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ವಿಕ್ಟರ್‌ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ(Death) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Crime News: ಮಹಿಳೆ ಜತೆ ಜೆಡಿಎಸ್ ಮುಖಂಡ ಸರಸ ಸಲ್ಲಾಪ, ಒಂದೇ ಕೋಣೆಯಲ್ಲಿ ಎರಡೂ ಹೆಣ
ಕ್ಷುಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಕೊಲೆ
ಮೈಸೂರು(Mysuru): ಕ್ಷುಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಕೊತ್ತೆಗಾಲ ಗ್ರಾಮದ ರವಿ ಹಾಗೂ ಕೃಷ್ಣ ಅವರೆ ಕೊಲೆಯಾದವರು.
ಶನಿವಾರ ಸಂಜೆ ಕೆಲಸ ಮುಗಿಸಿದ ಬಳಿಕ ವರ್ತುಲ ರಸ್ತೆ ಸಮೀಪದ ಬಾರ್‌ಗೆ ತೆರಳಿದ ಇಬ್ಬರು ಕಂಠಪೂರ್ತಿ ಕುಡಿದಿದ್ದಾರೆ. ಈ ವೇಏಳೆ ಇವರಿಗೆ ಪರಿಚಯವಿದ್ದ ಮತ್ತಿಬ್ಬರು ಜತೆಗೂಡಿದ್ದು, ಎಲ್ಲರೂ ಒಟ್ಟಿಗೆ ಮದ್ಯ(Alcohol) ಸೇವಿಸಿದ್ದಾರೆ.
ಈ ವೇಳೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರು ಸೇರಿಕೊಂಡು ಸಮೀಪದಲ್ಲೇ ಇದ್ದ ರಾಡಿನಿಂದ ರವಿ ಹಾಗೂ ಕೃಷ್ಣ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಗೊಳಗಾದ ರವಿ ಹಾಗೂ ಕೃಷ್ಣ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ವೇಳೆ ಬಾರ್ ನಲ್ಲಿದ್ದ ಕೆಲವರು ಕೂಡಲೇ ಹಲ್ಲೆ ಮಾಡಿದವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು, ಶವಗಳನ್ನು(Deadbody) ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ(Mortuary) ಸಾಗಿಸಿದ್ದಾರೆ. ಆದರೆ ಆರೋಪಿಗಳ ಹೆಸರು ಮತ್ತು ಇತರೆ ಮಾಹಿತಿಯನು ಪೊಲೀಸರು ಬಹಿರಂಗಪಡಿಸಿಲ್ಲ. ಭಾನುವಾರ ಬೆಳಗ್ಗೆ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಪ್ರಕರಣ ಕುರಿತು ಸರಸ್ವತಿಪುರಂ ಠಾಣೆ ಪೊಲೀಸರು ತನಿಖೆ ಮುಂದುವರಿದಿದೆ.
ಚಿತ್ತಾಪುರ ಯುಕವನ ಪ್ರಾಣ ತೆಗೆದ ಗಾಂಜಾ!
ಚಿತ್ತಾಪುರ(Chittapur): ಪಟ್ಟಣದಲ್ಲಿ ನಡೆದ 20 ವರ್ಷದ ಯುವಕ ಅಬ್ದುಲ್ ರಶೀದ್ ಕೊಲೆಗೆ ಗಾಂಜಾ(Marijuana) ವ್ಯವಹಾರ ಕಾರಣವೇ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಗಾಂಜಾ ಸೇದುವ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ.
Girl friend murder: ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನೇ ಕೊಂದ ಪಾಪಿ
ಪಟ್ಟಣದ ನಿವಾಸಿ ಶೇಖ ಸಲಿಂ ಎನ್ನುವವನು ಗಾಂಜಾ ಸೇದುತ್ತಿದ್ದು ಅಲ್ಲದೇ ಮಾರಾಟವನ್ನು ಮಾಡುತ್ತಿದ್ದ ಎನ್ನಲಾಗಿದ್ದು ಶನಿವಾರ ರಾತ್ರಿ ಅಬ್ದುಲ್ ರಶೀದ ಎನ್ನುವವನು ತನ್ನ ಗೆಳೆಯರೊಂದಿಗೆ ಶೇಖಂ ಸಲಿಂ ಹತ್ತಿರ ಹೊದಾಗ ಇಬ್ಬರ ಮಧ್ಯೆ ಗಾಂಜಾ ವಿಷಯದಲ್ಲಿ ಗಲಾಟೆ ನಡೆದಿದ್ದು ಗಲಾಟೆ ವಿಕೊಪಕ್ಕೆ ಹೊಗಿ ಶೇಖ ಸಲಿಂ ತನ್ನಲ್ಲಿದ್ದ ಚಾಕುವಿನಿಂದ ಅಬ್ದುಲ್ ರಶೀದ್‌ಗೆ ಚುಚ್ಚಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಯುವಕನ ಬರ್ಬರ ಕೊಲೆ
ಕಲಬುರಗಿ(Kalaburagi): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಯುವಕನ ಹತ್ಯೆಗೈದ ಘಟನೆ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಮೊಹಮ್ಮದ್ ರಶೀದ್ (26) ಕೊಲೆಯಾದ ಯುವಕನಾಗಿದ್ದು, ಸದರಿ ಘಟನೆಯಲ್ಲಿ ಪೊಲೀಸರು ರೌಡಿ ಲಂಗ್ಡಾ ಸಲೀಂನನ್ನು ಬಂಧಿಸಿದ್ದಾರೆ.
