Asianet Suvarna News Asianet Suvarna News

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ

ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳ ಸಮೇತ ಶ್ರೀಗಂಧವನ್ನ ವಶಕ್ಕೆ ಪಡೆದಿದ್ರು. ಕಳ್ಳತನ ನಡೆದು ಎರಡು ತಿಂಗಳಗಳ ಬಳಿಕ ಪೊಲೀಸರು ಕಳ್ಳತನವಾಗಿದ್ದ ಶ್ರೀಗಂಧ ಮರದ ತುಂಡು ಸಹಿತ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

Five Arrested For Sandalwood Tree Theft Case in Yadgir grg
Author
First Published Dec 6, 2023, 12:17 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಡಿ.06):  ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ 150 ಕೆ.ಜಿ ಶ್ರೀಗಂಧ ಮರದ ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ್ದರು. ಈ ವಶಕ್ಕೆ ಪಡೆದ ಶ್ರೀಗಂಧ ಮರದ ಕಟ್ಟಿಗೆಗಳನ್ನು ಅರಣ್ಯ ಇಲಾಖೆಯ  ಕಚೇರಿಯಲ್ಲಿ ಶೇಖರಿಸಿಟ್ಟದರು. ಕಚೇರಿಯಲ್ಲಿಟ್ಟಿದ್ದ ಶ್ರೀಗಂಧ ಮರದ ತುಂಡುಗಳು ಮಾಯವಾಗಿದ್ದವು. ಇದು ಹಲವು ಅನುಮಾನಗಳಿಗೀಡು ಮಾಡಿತ್ತು. ಈ ಖತರ್ನಾಕ್ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಾದಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಯಾದಗಿರಿ ಪೋಲಿಸರ ಭರ್ಜರಿ ಬೇಟೆ..!

ಯಾದಗಿರಿ ಅರಣ್ಯ ಇಲಾಖೆಯಲ್ಲಿ ಶೇಖರಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳನ್ನು ಖತರ್ನಾಕ್ ಖದೀಮರು ಕಳ್ಳತನ ಮಾಡಿದ್ರು. ಇದು ಹಲವು ಅನುಮಾನಗಳನ್ನು ಉಂಟು ಮಾಡಿತ್ತು. ಯಾದಗಿರಿ ಅರಣ್ಯಾಧಿಕಾರಿಗಳ ದೂರಿನ ಮೇರೆಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಪ್ರಕರಣವನ್ನು ಬೆನ್ನತ್ತಿದ್ದ ಯಾದಗಿರಿ ಸಿಪಿಐ ಸುನೀಲ ಮೂಲಿಮನಿ, ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದ ತಂಡ ಶ್ರೀಗಂಧ ಮರಗಳನ್ನು ಖದಿಯುತ್ತಿದ್ದ ಖದೀಮರನ್ನು ಹೆಡೆಮುರಿ ಕಟ್ಟಿದೆ. ಶ್ರೀಗಂಧ ಮರ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗ ಜೈಲಿನಲ್ಲಿದ್ದ ಆರೋಪಿ ಅಜೀಜ್ ಆ್ಯಂಡ್ ಟೀಂ ಯಾದಗಿರಿ ಅರಣ್ಯ ಇಲಾಖೆಯಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳನ್ನು ಕಳ್ಳತನ ಮಾಡಿರುವ ಮಾಹಿತಿ ಯಾದಗಿರಿ ಪೋಲಿಸರಿಗೆ ಸಿಕ್ಕಿತ್ತು. 

ಪಡಿತರ ಅಕ್ಕಿ ಅಕ್ರಮ: ಆರೋಪಿಗಳ ಪತ್ತೆಯಾಗದೆ ವರ್ಷಾನುಗಟ್ಟಲೆ ಕೊಳೆಯುತ್ತಿರುವ ಪ್ರಕರಣಗಳು..!

ಈ ಮಾಹಿತಿ ಬೆನ್ನತ್ತಿದ್ದ ಯಾದಗಿರಿ ಪೋಲಿಸರು ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ರು. ಆಗ ಒಬೊಬ್ಬ ಶ್ರೀಗಂಧ ಮರಗಳ್ಳರನ್ನು ಪತ್ತೆ ಹಚ್ಚಿ ವಿಚಾರಣೆ ಮಾಡಿದಾಗ ಈ ಗ್ಯಾಂಗ್ ಅಂತರಾಜ್ಯ ಕಳ್ಳ ಖರಾಮತ್ತು ಬಯಲಾಗಿದೆ.‌ ಇವರು ಪ್ರೊಫೆಸನಲ್ ಕಳ್ಳರು ಹಾಗೂ ಜಪ್ತಿ ಮಾಡಿ ಸರ್ಕಾರಿ ಕಚೇರಿಯಲ್ಲಿಟ್ಟ ಶ್ರೀಗಂಧ ಮರದ ತುಂಡುಗಳನ್ನು ಖದಿಯುವ ಗ್ಯಾಂಗ್ ಅಂತ ಬೆಳಕಿಗೆ ಬಂದಿದೆ. ಈ ಶ್ರೀಗಂಧ ಮರಗಳ್ಳರ ಟೀಂ ನಲ್ಲಿ ಏಳು ಜನರಿದ್ದಾರೆ. ಅದರಲ್ಲಿ ಪೋಲಿಸರು ಐದು ಜನರನ್ನು ಅರೆಸ್ಟ್ ಮಾಡಲಾಗಿದೆ. ಮಲ್ಲೇಶಿ, ಬಸವರಾಜ, ಪಾಲಾಕ್ಷಿ ಹಾಗೂ ಬಾಬಾಜಾನ್ ಸೇರಿದಂತೆ ಐದು ಜನರನ್ನು ಜೈಲಿಗಟ್ಟಲಾಗಿದೆ. ಈ ಆರೋಪಿಗಳ ಬಳಿಯಿದ್ದ ಲಕ್ಷಾಂತರ ರೂ. ಮೌಲ್ಯದ 80 ಕೆ.ಜಿ ಶ್ರೀಗಂಧ ಮರದ ತುಂಡುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು

ಯಾದಗಿರಿಯಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಕಳ್ಳತನ ಮಾಡಿರುವ ಅಜೀಜ್ ಆ್ಯಂಡ್ ಗ್ಯಾಂಗ್ ಹಲವು ಕಡೆ ಈ ರೀತಿಯ ಕಳ್ಳತನ ಮಾಡಿದೆ. ಇವರ ದಂಧೆಯೇ ಈ ಶ್ರೀಗಂಧ ಮರಗಳ್ಳತನ. ಈ ಅಜೀಜ್ ಮತ್ತು ಉಳಿದ ಎಲ್ಲಾ ಆರೋಪಿಗಳು ಸಹ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಅಜೀಜ್ ಮತ್ತು ಟೀಂ ಕೇವಲ ಶ್ರೀಗಂಧದ ಮರಗಳ ತುಂಡುಗಳನ್ನ ಕಳ್ಳತನ ಮಾಡುವ ಕೆಲಸ ಮಾಡುತ್ತೆ. ಯಾವುದೇ ಜಿಲ್ಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಕಚೇರಿಯಲ್ಲಿ ಶೇಖರಿಸಿಟ್ಟಿದ್ದರ ಮಾಹಿತಿಯನ್ನು ಟಿವಿ ಹಾಗೂ ಪೇಪರ್ ಮೂಲಕ ತಿಳಿದುಕೊಳ್ತಾರೆ. ಯಾವುದೇ ರೀತಿಯಲ್ಲಿ ಫ್ಲಾನ್ ಪೇಲ್ ಆಗದ ರೀತಿಯಲ್ಲಿ ಅಂದ್ರೆ 4-5 ದಿ‌ಗಳ ಮುಂಚೆ ಆ ಜಿಲ್ಲೆಗೆ ಬಂದು ಫ್ಲಾನ್ ಮಾಡ್ತಾರೆ. ಎಲ್ಲವನ್ನೂ ಸರ್ಚ್ ಮಾಡ್ತಾರೆ, ಯಾವ ರೀತಿ ಖದಿಯಬಹುದು ಅಂತ ಎಲ್ಲಾ ರೀತಿಯ ಸ್ಕೇಚ್ ಹಾಕ್ತಾರೆ. ನಂತರ ಈ ಟೀಂ ಕಳ್ಳತನಕ್ಕೆ ಇಳಿದು ಎಲ್ಲರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡ್ತದೆ. ಇದೇ ರೀತಿಯಲ್ಲಿ ಯಾದಗಿರಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶ್ರೀಗಂಧದ ಮರಗಳ ತುಂಡುಗಳನ್ನ ಶೇಖರಿಸಿಟ್ಟ ವಿಷಯ ಗೊತ್ತಾಗುತ್ತಿದ್ದ ಹಾಗೆ ಪ್ಲಾನ್ ಮಾಡಿಕೊಂಡು ಬಂದು ಕಳ್ಳತನ ಮಾಡಿದೆ. ಅಷ್ಟೇ ಅಲ್ಲದೇ ಪಕ್ಕದ ರಾಯಚೂರು ಜಿಲ್ಲೆಯಲ್ಲೂ ಈ ಟೀಂ ಸುಮಾರು 600 ಕೆ‌.ಜಿ ಶ್ರೀಗಂಧದ ಮರದ ತುಂಡುಗಳನ್ನ ಕಳ್ಳತನ ಮಾಡಿದೆ. ಆರೋಪಿಗಳನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ರಾಯಚೂರಿನಲ್ಲೂ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. 

ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್‌, ಕೋಟಿ ಕೋಟಿ ಸಂಪತ್ತು ಪತ್ತೆ!

ಇದೇ ಕಾರಣಕ್ಕೆ ರಾಯಚೂರಿನ ಕಳ್ಳತನ ಪ್ರಕರಣದ 35 ಕೆ‌.ಜಿ ಶ್ರೀಗಂಧದ ತುಂಡುಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಶ್ರೀಗಂಧದ ತುಂಡುಗಳನ್ನು ಯಾದಗಿರಿ ತಾಲೂಕಿನ ಬಾಗಲಮಡು ಹಂದರಕಿ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ತಿಂಗಳಗಳ ಹಿಂದೆ ಕಳ್ಳರು ಮರಗಳನ್ನ ಕಟ್ ಮಾಡಿ ತುಂಡುಗಳನ್ನ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ರು. ಆಗ ದಾಳಿ ಮಾಡಿ ಆರೋಪಿಗಳ ಸಹಿತ ಶ್ರೀಗಂಧ ಮರಗಳನ್ನು ವಶಕ್ಕೆ ಪಡೆದಿದ್ರು. ಸರಿಯಾದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳ ಸಮೇತ ಶ್ರೀಗಂಧವನ್ನ ವಶಕ್ಕೆ ಪಡೆದಿದ್ರು. ಕಳ್ಳತನ ನಡೆದು ಎರಡು ತಿಂಗಳಗಳ ಬಳಿಕ ಪೊಲೀಸರು ಕಳ್ಳತನವಾಗಿದ್ದ ಶ್ರೀಗಂಧ ಮರದ ತುಂಡು ಸಹಿತ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಒಟ್ನಲ್ಲಿ ಯಾದಗಿರಿ ಜಿಲ್ಲಾ ಕೇಂದ್ರದ ಅರಣ್ಯ ಕಚೇರಿಯಲ್ಲಿ ಶೇಖರಿಸಿಟ್ಟೊದ್ದ ಶ್ರೀಗಂಧ ಮರದ ತುಂಡುಗಳ ಕಳ್ಳತನ ಭಾರಿ ಚರ್ಚೆಗೀಡು ಮಾಡಿತ್ತು. ತಮ್ಮ ಮನೆ ಕಾಯದವರು ಕಾಡು ಕಾಯ್ತಾರಾ ಎಂಬ ಪ್ರಶ್ನೆಯಾಗಿತ್ತು. ಸದ್ಯ ಪೊಲೀಸರು ಯಾದಗಿರಿ ಅಲ್ಲದೆ ರಾಯಚೂರು ಶ್ರೀಗಂಧ ಮರಗಳ್ಳತನ ಪ್ರಕರಣವನ್ನು ಯಾದಗಿರಿ ಪೋಲಿಸರು ಭರ್ಜರಿ ಬೇಟೆಯಾಡಿದ್ದಾರೆ.

Follow Us:
Download App:
  • android
  • ios