ಶಾರ್ಟ್ ಸೆರ್ಕ್ಯೂಟ್‌ನಿಂದ ಜ್ಯುವೆಲ್ಲರಿ ಶಾಪ್‌ ಹೊತ್ತಿ ಉರಿದು ಅಪಾರ ಪ್ರಮಾಣದ ಚಿನ್ನಾಭರಣ ಸುಟ್ಟುಕರಕಲಾದ ಘಟನೆ ನಿನ್ನೆ ತಡರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ  ಗಣೇಶ ಸರ್ಕಲ್ ಕೆಜೆಪಿ ಜ್ಯುವೆಲ್ಲರಿ ಶಾಪ್‌ನಲ್ಲಿ ನಡೆದಿದೆ.

ಕೊಪ್ಪಳ (ಡಿ.2): ಶಾರ್ಟ್ ಸೆರ್ಕ್ಯೂಟ್‌ನಿಂದ ಜ್ಯುವೆಲ್ಲರಿ ಶಾಪ್‌ ಹೊತ್ತಿ ಉರಿದು ಅಪಾರ ಪ್ರಮಾಣದ ಚಿನ್ನಾಭರಣ ಸುಟ್ಟುಕರಕಲಾದ ಘಟನೆ ನಿನ್ನೆ ತಡರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಗಣೇಶ ಸರ್ಕಲ್ ಕೆಜೆಪಿ ಜ್ಯುವೆಲ್ಲರಿ ಶಾಪ್‌ನಲ್ಲಿ ನಡೆದಿದೆ.

ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ನೋಡು ನೋಡ್ತಿದ್ದಂತೆ ಮೂರು ಅಂತಸ್ತಿನ ಬಿಲ್ಡಿಂಗ್‌ಗೆ ವ್ಯಾಪಿಸಿದ ಬೆಂಕಿ. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ. ಜ್ಯೂವೆಲ್ಲರಿ ಶಾಪ್ ನಲ್ಲಿದ್ದ ಚಿನ್ನಾಭರಣ ಬೆಂಕಿಗಾಹುತಿಯಾಗಿದೆ.

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಮಹಿಳೆ ಉಸಿರುಗಟ್ಟಿ ಸಾವು

ತಡರಾತ್ರಿ ಘಟನೆ ನಡೆದಿದ್ದರಿಂದ ಬಾರೀ ಅನಾಹುತವೊಂದು ತಪ್ಪಿದೆ. ಜನನಿಬಿಡ ಪ್ರದೇಶವಾಗಿರುವ ಗಣೇಶ ವೃತ್ತ ಯಾವಾಗಲೂ ಜನಸಂಚಾರ ಹೆಚ್ಚು ಇರುತ್ತದೆ. ಹಗಲು ವೇಳೆ ನಡೆದಿದ್ದರೆ ಇನ್ನಷ್ಟು ಅನಾಹುತ ಸಂಭವಿಸುತ್ತು.

ಸದ್ಯ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕಕ ವಾಹನಗಳು ದೌಡು ಬೆಂಕಿ ನಂದಿನುವ ಕಾರ್ಯ ನಡೆಸಿವೆ. 

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅಗ್ನಿ ಅವಘಡ; ಬಟ್ಟೆ, ಶೂ ಮಳಿಗೆಗೆ ಹೊತ್ತಿಕೊಂಡ ಬೆಂಕಿ!