ಉತ್ತರಾಖಂಡ್‌ನಲ್ಲಿ ಉತ್ತರಪ್ರದೇಶದ ಪೊಲೀಸರು ಮೈನಿಂಗ್ ಮಾಫಿಯಾದ ಆರೋಪಿಯನ್ನು ಬೆನ್ನಟ್ಟುವ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಪಿ ನಾಯಕನ ಪತ್ನಿಯೊಬ್ಬರು ಸಾವಿಗೀಡಾಗಿದ್ದಾರೆ. ಇದರಿಂದ ಉತ್ತರಪ್ರದೇಶದ ಪೊಲೀಸರ ವಿರುದ್ಧ ಉತ್ತರಾಖಂಡ್‌ನಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡ್‌ನಲ್ಲಿ ಉತ್ತರಪ್ರದೇಶದ ಪೊಲೀಸರು ಮೈನಿಂಗ್ ಮಾಫಿಯಾದ ಆರೋಪಿಯನ್ನು ಬೆನ್ನಟ್ಟುವ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಪಿ ನಾಯಕನ ಪತ್ನಿಯೊಬ್ಬರು ಸಾವಿಗೀಡಾಗಿದ್ದಾರೆ. ಇದರಿಂದ ಉತ್ತರಪ್ರದೇಶದ ಪೊಲೀಸರ ವಿರುದ್ಧ ಉತ್ತರಾಖಂಡ್‌ನಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಅವಘಢದಲ್ಲಿ ಉತ್ತರಪ್ರದೇಶ ಪೊಲೀಸರಿಗೂ ಗಾಯಗಳಾಗಿವೆ. ಗಣಿ ಮಾಫಿಯಾದ ಆರೋಪಿಯ ಸಹಚರರು ಹಾಗೂ ಪೊಲೀಸರ ಮಧ್ಯೆ ಪರಸ್ಪರ ಗುಂಡಿನ ಚಕಮಕಿ ನಡೆದಾಗ ಈ ದುರಂತ ನಡೆದಿದೆ.
ಜಾಫರ್ ಎಂಬ ಗಣಿ ಮಾಫಿಯಾದ ಆರೋಪಿಯನ್ನು ಬೆನ್ನಟ್ಟಿ ಹೋದಾಗ ಈ ಅವಘಡ ಸಂಭವಿಸಿದೆ. ಜಾಫರ್ ತಲೆಗೆ ಉತ್ತರಪ್ರದೇಶ (Uttar Pradesh) ಪೊಲೀಸರು 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಈ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮಹಿಳೆಯನ್ನು ಉತ್ತರಾಖಂಡ್‌ನ ಬಿಜೆಪಿ ನಾಯಕ ಗುರ್ತಾಜ್ ಭುಲ್ಲರ್ (Gurtaj Bhullar) ಅವರ ಪತ್ನಿ ಗುರುಪ್ರೀತ್ ಕೌರ್ (Gurpreet Kaur) ಎಂದು ಗುರುತಿಸಲಾಗಿದೆ.
ಜಾಫರ್ (Zafar) ಎಂಬ ಗಣಿಗಾರಿಕೆ ಮಾಫಿಯಾದ ಆರೋಪಿಯನ್ನು ಬಂಧಿಸಲು ಉತ್ತರಪ್ರದೇಶದ ಮೊರಾದಾಬಾದ್ ಪೊಲೀಸ್ ತಂಡವು ಉತ್ತರಾಖಂಡದ ಜಸ್ಪುರ್‌ಗೆ ತಲುಪಿದಾಗ ಅಲ್ಲಿ ಉಂಟಾದ ಘರ್ಷಣೆಯಲ್ಲಿ ಖದೀಮರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಐವರು ಪೊಲೀಸರಿಗೂ ಗಾಯಗಳಾಗಿವೆ. ಅಲ್ಲದೇ ಆರೋಪಿಯೂ ಬಿಜೆಪಿ ನಾಯಕ ಗುರ್ತಾಜ್ ಭುಲ್ಲರ್ ಅವರ ಮನೆಯಲ್ಲಿ ಅಡಗಿದ್ದಾನೆ ಎಂದು ಪೊಲೀಸರು ನಂಬಿದ್ದರು.
ಬಿಜೆಪಿ ನಾಯಕನ ಪತ್ನಿ ಈ ಅವಘಡದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಗ್ರಾಮಸ್ಥರು ಪೊಲೀಸರ ವಿರುದ್ಧ ಸಿಟ್ಟಿಗೆದ್ದಿದ್ದು, ನಾಲ್ವರು ಪೊಲೀಸರನ್ನು ಸೆರೆಯಾಳಾಗಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮೊರದಾಬಾದ್ ಪೊಲೀಸರ ವಿರುದ್ಧ ಉತ್ತರಾಖಂಡ್‌ನಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಪೊಲೀಸ್ ಫೈರಿಂಗ್
ಮಾಫಿಯಾ ಆರೋಪಿಯೂ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ, ತಲೆಗೆ 50 ಸಾವಿರ ಬಹುಮಾನ ಘೋಷಿಸಲ್ಪಟ್ಟಿದ್ದ ಪ್ರಮುಖ ಆರೋಪಿಯಾಗಿದ್ದ. ನಮ್ಮ ಪೊಲೀಸರ ತಂಡ ಆತನಿದ್ದ ಭರತ್‌ಪುರ ಗ್ರಾಮಕ್ಕೆ ಆತನನನ್ನು ಹಿಡಿಯಲು ಹೋದಾಗ ಆತ ಅಲ್ಲಿಂದ ಎಸ್ಕೇಪ್ ಆಗಿದ್ದ. ನಮ್ಮ ಪೊಲೀಸರು ಅಲ್ಲಿಗೆ ತಲುಪಿದಾಗ ಪೊಲೀಸರ ಕೈಯಲ್ಲಿದ್ದ ಶಸ್ತ್ರಾಸತ್ರಗಳನ್ನು ಕಿತ್ತುಕೊಂಡು ಅವರನ್ನು ಸೆರೆಯಾಳಾಗಿ ಇರಿಸಿದ್ದರು. ಈ ಅವಘಡದಲ್ಲಿ ಗಾಯಗೊಂಡ ನಾಲ್ವರು ಪೊಲೀಸರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇಬ್ಬರು ಪೊಲೀಸರು ನಾಪತ್ತೆಯಾಗಿದ್ದಾರೆ ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಮೊರದಾಬಾದ್‌ನ (Moradabad) ಹಿರಿಯ ಪೊಲೀಸ್ ಅಧಿಕಾರಿ ಶಲಭ್ ಮಥುರ್ (Shalabh Mathur) ಹೇಳಿದ್ದಾರೆ.
ಉತ್ತರಪ್ರದೇಶ ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಅವರು ಪೊಲೀಸ್ ಸಮವಸ್ತ್ರದಲ್ಲಿರಲಿಲ್ಲ. ಐಡಿ ಕಾರ್ಡ್ ಕೂಡ ಹೊಂದಿರಲಿಲ್ಲ. ದಾಳಿ ಈ ರೀತಿಯಾಗಿ ಮಾಡುವುದಿಲ್ಲ. ಅವರು ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದರು, ಇದರಿಂದ ಮಹಿಳೆ ಜೀವ ಕಳೆದುಕೊಂಡಿದ್ದಾಳೆ. ಇದು ತಪ್ಪು ಕ್ರಮ ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದೆ ಎಂದು ಕುಮಾನ್ ರೇಂಜ್‌ನ ಡಿಐಜಿ ಎನ್ ಎ ಭರ್ನಿ (Bharney, DIG) ಅವರು ಭರತ್‌ಪುರದಲ್ಲಿ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಪೊಲೀಸ್ ಫೈರಿಂಗ್
ಘಟನೆ ನಡೆದಿರುವ ಉದ್ದಮ್ ಸಿಂಗ್ ನಗರ ಜಿಲ್ಲೆಯ ಭರತ್‌ಪುರಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ನಾವು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಉತ್ತರಪ್ರದೇಶ ಪೊಲೀಸರು ಕನಿಷ್ಠ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಅವರು ಆ ಸ್ಥಳವನ್ನು ಚೆನ್ನಾಗಿ ಬಲ್ಲವರಾಗಿದ್ದರಿಂದ ಇವರಿಗೆ ಸಹಾಯ ಮಾಡುತ್ತಿದ್ದರು. ಗಾಯಗೊಂಡ ಉತ್ತರಪ್ರದೇಶ ಪೊಲೀಸರು ನಮಗೆ ತಿಳಿಸದೇ ಮೊರದಾಬಾದ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉತ್ತರಾಖಂಡ್ ಡಿಐಜಿ ನಿಲೇಶ್ ಆನಂದ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.