Asianet Suvarna News Asianet Suvarna News

ಕೋರ್ಟ್‌ ಸೀನ್‌ನಲ್ಲಿ ಮದ್ಯಪಾನ; ಕಪಿಲ್ ಶರ್ಮಾ ಶೋ ವಿರುದ್ಧ ಎಫ್‌ಐಆರ್

* ಕಪಿಲ್ ಶರ್ಮಾ ಕಾಮಿಡಿ ಶೋ ವಿರುದ್ಧ ಎಫ್‌ಐಆರ್
* ನ್ಯಾಯಾಲಯದ ಸೆಟ್ ಹಾಕಿಕೊಂಡು ಮದ್ಯಪಾನದ ದೃಶ್ಯ
* ಮಧ್ಯಪ್ರದೇಶದ ನ್ಯಾಯಾಲಯಕ್ಕೆ ದೂರು ನೀಡಿದ ವಕೀಲ

FIR Against Kapil Sharma Show For Showing Actors Drinking in Courtroom Scene mah
Author
Bengaluru, First Published Sep 24, 2021, 9:35 PM IST
  • Facebook
  • Twitter
  • Whatsapp

ಮುಂಬೈ(ಸೆ. 24)  ಕಾಮಿಡಿಯನ್ ಕಪಿಲ್ ಶರ್ಮಾ ಶೋಮೇಲೆ ಎಫ್‌ ಐಆರ್ ದಾಖಲಾಗಿದೆ. ಮಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ನ್ಯಾಯಾಲಯದ ದೃಶ್ಯವನ್ನು ಪ್ರದರ್ಶಿಸುವ ವೇಳೆ ನಟರು ವೇದಿಕೆ ಮೇಲೆ ಮದ್ಯಪಾನ ಮಾಡುತ್ತಿರುವ ದೃಶ್ಯ ತೋರಿಸಿದ್ದು ಈ ಪ್ರಕರಣದ ಹಿನ್ನೆಲೆ.  ನಟರು ನ್ಯಾಯಾಲಯಕ್ಕೆ ಅಗೌರವವನ್ನು ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಶಿವಪುರಿಯ ವಕೀಲ ಸಿಜೆಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅಕ್ಟೋಬರ್ 1ರಂದು ಪ್ರಕರಣ ಕುರಿತಂತೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಖಾಸಗಿ ವಾಹಿನಿಯಲ್ಲಿ ಬರುವ ಕಪಿಲ್ ಶರ್ಮಾ ಶೋ ಬಹಳ ಕಳಪೆಯಾಗಿದ್ದು, ಮಹಿಳೆಯರ ಕುರಿತಂತೆ ಅಸಭ್ಯವಾಗಿ ಟೀಕೆಗಳನ್ನು ಮಾಡುತ್ತಾರೆ ಎಂದು ಆರೋಪಿಸಲಾಗಿದೆ.

ಕಪಿಲ್ ಶರ್ಮಾರ ಲಕ್ಷುರಿಯಸ್ ವ್ಯಾನ್ ಅಬ್ಬಬ್ಬಾ!

ನ್ಯಾಯಾಲಯದ ಸೆಟ್ ಹಾಕಲಾಗಿದ್ದಿ ಈ ವೇಳೆ ನಟರು ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಹೀಗಾಗಿ ನಾನು ನ್ಯಾಯಾಲಯದಲ್ಲಿಮ ದೂರು ದಾಖಲಿಸಿದ್ದೇನೆ ಎಂದು ವಕೀಲರು ತಿಳಿಸಿದ್ದಾರೆ. 2021 ಜನವರಿ 19ರಂದು ಈ ಸಂಚಿಕೆ ಪ್ರಸಾರವಾಗಿದ್ದು ಮತ್ತು ಏಪ್ರಿಲ್ 24ರಂದು ಮರುಪ್ರಸಾರ ಮಾಡಲಾಗಿದೆ. 

ಹಾಸ್ಯನಟ ಕಪಿಲ್ ಶರ್ಮಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ, ಮತ್ತು ಇದರಲ್ಲಿ ಸುಮೋನಾ ಚಕ್ರವರ್ತಿ, ಭಾರತಿ ಸಿಂಗ್, ಕೃಷ್ಣ ಅಭಿಷೇಕ್, ಸುದೇಶ್ ಲೆಹ್ರಿ ಮತ್ತು ಅರ್ಚನಾ ಸಿಂಗ್ ಕಲಾವಿದರಾಗಿದ್ದಾರೆ.

 

Follow Us:
Download App:
  • android
  • ios