Asianet Suvarna News Asianet Suvarna News

Fraud| ಒಂದೇ ಸೈಟ್‌ ಹಲವರಿಗೆ ಮಾರಾಟ, ಡಿ ಗ್ರೂಪ್‌ ಅಧ್ಯಕ್ಷನ ವಿರುದ್ಧ FIR

*  ಮಾರಿದ ಸೈಟನ್ನೇ ಸರ್ವೇ ನಂಬರ್‌ ಬದಲಿಸಿ ಹಲವರಿಗೆ ಮಾರಾಟ
*  ಉದ್ಯಾನ, ಸಿಎ ಸೈಟನ್ನೂ ಮಾರಿದ
*  ವಂಚನೆ ಬಗ್ಗೆ ಕೇಳಿದರೆ ಹಣ ನೀಡೋದಾಗಿ ಸತಾಯಿಸುತ್ತಿದ್ದ
 

FIR against D Group President on Fraud Case in Bengaluru grg
Author
Bengaluru, First Published Nov 16, 2021, 10:04 AM IST

ಬೆಂಗಳೂರು(ನ.16): ನಕಲಿ ದಾಖಲೆ(Fake Documents) ಸೃಷ್ಟಿಸಿ ಒಂದೇ ನಿವೇಶನವನ್ನು(Site) ಮೂರು-ನಾಲ್ಕು ಮಂದಿಗೆ ಮಾರಾಟ ಮಾಡಿ ವಂಚನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ‘ಡಿ’ ಗ್ರೂಪ್‌ ನೌಕರರ ಸಂಘದ ಅಧ್ಯಕ್ಷ(President of the Group Employees Union) ನಟರಾಜ್‌(Nataraj) ವಿರುದ್ಧ ಈವರೆಗೆ 50 ಪ್ರಕರಣ ದಾಖಲಾಗಿದ್ದು, ಇದರಲ್ಲಿ 8 ಎಫ್‌ಐಆರ್‌ ದಾಖಲಿಸಲಾಗಿದೆ.

ಈತನಿಂದ ವಂಚನೆಗೆ(Fraud) ಒಳಗಾಗಿ ಹಣ ಕಳೆದುಕೊಂಡವರು ಠಾಣೆಗಳಿಗೆ ಬಂದು ದೂರು ನೀಡುತ್ತಲ್ಲೇ ಇದ್ದಾರೆ. ಹೀಗಾಗಿ ಈಗಾಗಲೇ ದಾಖಲಾಗಿರುವ 8 ಎಫ್‌ಐಆರ್‌ಗಳಿಗೆ(FIR) ಉಳಿದ ದೂರುಗಳನ್ನು ಸೇರಿಸಿಕೊಳ್ಳಲಾಗುವುದು. ದೂರುಗಳು(Complaint) ಬರುತ್ತಿರುವುದನ್ನು ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಈ ವಂಚಕನ ವಿರುದ್ಧ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌(Police) ಅಧಿಕಾರಿಗಳು ತಿಳಿಸಿದ್ದಾರೆ.

‘ಡಿ’ ಗ್ರೂಪ್‌ ನೌಕರರ ಸಂಘದ ಸೆಂಟ್ರಲ್‌ ಅಸೋಷಿಯೇಷನ್‌ ಸೊಸೈಟಿಯಿಂದ ಶ್ರೀಗಂಧಕಾವಲ್‌ ಮತ್ತು ಗಿಡದಕೊನೇನಹಳ್ಳಿ 1994ರಲ್ಲೇ ಲೇಔಟ್‌ ನಿರ್ಮಾಣ ಮಾಡಲಾಗಿತ್ತು. ಸಂಘದ ಅಧ್ಯಕ್ಷ ನಟರಾಜ್‌ ಆರಂಭದಲ್ಲಿ ಸಂಘದ ಸದಸ್ಯರಿಗೆ ಈ ಲೇಔಟ್‌ನಲ್ಲಿ ನಿವೇಶನ ತೋರಿಸಿ, ಹಣ ಪಡೆದು ಕ್ರಯ ಮಾಡಿಕೊಟ್ಟಿದ್ದಾನೆ. ಬಳಿಕ ಬೇರೆಯವರಿಗೆ ಖಾಲಿ ನಿವೇಶನ ತೋರಿಸಿ, ನಿವೇಶನ ಸಂಖ್ಯೆ ಹಾಗೂ ಸರ್ವೇ ನಂಬರ್‌ ಬದಲಿಸಿ ನಕಲಿ ದಾಖಲೆ ಕೊಟ್ಟು ಮತ್ತೆ ಮಾರಾಟ ಮಾಡಿದ್ದಾನೆ. ಅಲ್ಲದೆ, ಲೇಔಟ್‌(Layout) ನಿರ್ಮಾಣದ ವೇಳೆ ಉದ್ಯಾನಕ್ಕೆ(Park) ಮೀಸಲಾದ ಜಾಗ ಹಾಗೂ ಸಿಎ ನಿವೇಶಗಳಿಗೂ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾನೆ.

Aadhaar: ನಿಮ್ಮ ಮಾಹಿತಿ ಕಳುವಾಗಬಾರದೆಂದರೆ ತಪ್ಪದೇ ಈ ಕ್ರಮ ಅನುಸರಿಸಿ!

ಈ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಹೋದಾಗ ಅಸಲಿ ಮಾಲೀಕರು ಬಂದು ಅಡ್ಡಿಪಡಿಸುತ್ತಿದ್ದರು. ಈ ಬಗ್ಗೆ ನಟರಾಜ್‌ನನ್ನು ಪ್ರಶ್ನಿಸಿದರೆ ಬದಲಿ ನಿವೇಶನ ನೀಡುವುದಾಗಿ ಕೆಲವರಿಂದ ಮತ್ತೆ ಹಣ ಪಡೆದಿದ್ದಾನೆ. ಬಳಿಕ ನಿವೇಶನವನ್ನೂ ನೀಡದೆ, ಹಣವನ್ನೂ ಹಿಂದಿರುಗಿಸದೇ ಸತಾಯಿಸುತ್ತಿದ್ದ. ಈತನಿಗೆ ಹಣ(Money) ಕೊಟ್ಟು ಕಳೆದುಕೊಂಡ ಸಂಘದ ಸದಸ್ಯರು ಈತನ ವಂಚನೆ ಬಗ್ಗೆ ಸಹಕಾರ ನಿಬಂಧಕರಿಗೆ ದೂರು ಕೊಟ್ಟಿದ್ದರು. ಹೀಗಾಗಿ ಸಂಘವನ್ನು ಸೂಪರ್‌ಸೀಡ್‌ ಮಾಡಲಾಗಿದೆ. ಇದಾದ ಬಳಿಕವೂ ವಂಚಕ ನಟರಾಜ್‌ ನಿವೇಶನ ನೀಡುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ.

ವಂಚಕ ನಟರಾಜ್‌ನನ್ನು ಇತ್ತೀಚೆಗೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನದ ವಿಚಾರ ತಿಳಿದು ಹಲವರು ದೂರು ನೀಡಲು ಪೊಲೀಸ್‌ ಠಾಣೆಗೆ(Police Station) ಬರುತ್ತಿದ್ದಾರೆ. ಇನ್ನು ಈತನ ವಂಚನೆ ಸಾಥ್‌ ನೀಡಿದ್ದಾರೆ ಎನ್ನಲಾದ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಗೋವಿಂದರಾಜು ಸೇರಿದಂತೆ ಹಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Digital Wallet ಬಳಕೆದಾರರೇ ಎಚ್ಚರ : ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!

ಉದ್ಯೋಗ ಕೊಡಿಸುವುದಾಗಿ 2 ಲಕ್ಷ ವಂಚನೆ

(Hubballi) ಹುಬ್ಬಳ್ಳಿ: ಆನ್‌ಲೈನ್‌ ಮೂಲಕ ನೌಕರಿ ಕೊಡಿಸುವುದಾಗಿ ಹೇಳಿ ಸುಮಾರು ಎರಡು ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಪ್ರಕರಣ ಸೈಬರ್‌ ಕ್ರೈಂ(Cyber Crime) ಠಾಣೆಯಲ್ಲಿ ದಾಖಲಿಸಿದ್ದಾರೆ. ಹಳೇ ಹುಬ್ಬಳ್ಳಿ ಆನಂದನಗರ ನಿವಾಸಿ ಅಬ್ದುಲ್‌ ರೆಹಮಾನ್‌ ಯಾದವಾಡ ಎಂಬುವರೇ ಮೋಸ ಹೋದವರು. ನೌಕರಿ ಹುಡುಕಲು ಆನ್‌ಲೈನ್‌ ವೆಬ್‌ಸೈಟ್‌ವೊಂದರಲ್ಲಿ ಅಬ್ದುಲ್‌ ತಮ್ಮ ಹೆಸರು ನೋಂದಣಿ ಮಾಡಿದ್ದರು. ನ. 13ರಂದು ಆದಿತ್ಯ ಶರ್ಮಾ ಎಂಬ ಅಪರಿಚಿತ ಕರೆ ಮಾಡಿ, ನೌಕರಿ(Job) ಕೊಡಿಸುವುದಾಗಿ ಅಬ್ದುಲ್‌ ಅವರನ್ನು ನಂಬಿಸಿದ್ದಾರೆ. ಅದರಂತೆ ಮೊಬೈಲ್‌ಗೆ ಲಿಂಕ್‌ ಒಂದನ್ನು ಕಳಿಸಿ, ಅದರಲ್ಲಿ ಸಂಪೂರ್ಣ ಮಾಹಿತಿ ಬರೆದು ಕಳಿಸುವಂತೆ ಸೂಚಿಸಿದ್ದಾನೆ. 

ಮೊದಲು ಬ್ಯಾಂಕ್‌ ಖಾತೆಗೆ 10 ನೋಂದಣಿ(Registration) ಶುಲ್ಕ ಎಂದು ಹಣವನ್ನು ಹಾಕಿಸಿಕೊಂಡಿದ್ದಾರೆ. ಬಳಿಕ ಅಬ್ದುಲ್‌ ಅವರ ಮೊಬೈಲ್‌ಗೆ ಬಂದ ಓಟಿಪಿ(OTP) ಪಡೆದು, ಅವರ ಖಾತೆಯಿಂದ 99,999 ವರ್ಗಾವಣೆ ಮಾಡಿಕೊಂಡಿದ್ದಾರೆ. ಅದರಿಂದ ಆತಂಕಗೊಂಡ ಅಬ್ದುಲ್‌ ವೆಬ್‌ಸೈಟ್‌ನಲ್ಲಿ(Website) ನೀಡಲಾದ ದೂರವಾಣಿಗೆ ಕರೆ ಮಾಡಿ, ವಿಚಾರಿಸಿದ್ದಾರೆ. ಆಗ ಸಮೀಕ್ಷಾ ಎಂಬ ಮಹಿಳೆ ಮಾತನಾಡಿ, ಒಂದು ಲಿಂಕ್‌ ಕಳುಹಿಸಿ ರಿಫಂಡ್‌ ಆಫ್ಷನ್‌ ಕ್ಲಿಕ್‌ ಮಾಡುವಂತೆ ಸೂಚಿಸಿ ಮತ್ತೇ ಅಬ್ದುಲ್‌ ಅವರ ಖಾತೆಯಿಂದ 99,999 ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
 

Follow Us:
Download App:
  • android
  • ios