ಬೆಂಗಳೂರು(ಸೆ. 17)  ಬೆಂಗಳೂರಿನಲ್ಲಿ ಆಸ್ತಿಗಾಗಿ ಮಾವನಿಗೆ ಕಿರುಕುಳ ನೀಡಿದ  ಆರೋಪದ ಮೇಲೆ ಮಹಿಳಾ  ಮಾಜಿ ಕಾರ್ಪೋರೇಟರ್ ಒಬ್ಬರ ಮೇಲೆ ದೂರು ದಾಖಲಾಗಿದೆ.

ವಾರ್ಡ್ ನಂ 32ರ ಕಾರ್ಪೊರೇಟರ್ ಆಗಿದ್ದ ನೇತ್ರ ನಾರಾಯಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ನೇತ್ರಾ ನಾರಾಯಣ್ ರ ಮಾವ ಜಯರಾಮಯ್ಯ ದೂರು ನೀಡಿದ್ದಾರೆ.  ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಹಲವು ತಿಂಗಳಿಂದ ಜಗಳ ನಡೆಯುತ್ತಿತ್ತು ಇದೇ ವಿಚಾರವಾಗಿ ಕೆಲಸಗಾರರ ಗುಂಪು ಕಟ್ಟಿಕೊಂಡು ಬಂದು ಕಿರಿಕಿರಿ ನೀಡಿದ ಆರೋಪವನ್ನು ಮಾವ ಮಾಡಿದ್ದಾರೆ.

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಚ್ಚಿ ಹಾಕಿದ ತಂದೆ

ವೃದ್ಧ ಜಯರಾಮಯ್ಯ ವಾಸವಿದ್ಧ ಮನೆ ಬಳಿ ಬಂದು ಬೆದರಿಕೆ ಹಾಕಿದ ಆರೋಪ ನೇತ್ರಾ ಅವರ ಮೇಲಿದೆ ತನ್ನ ಖಾಸಗಿ ತನಕ್ಕೆ ಧಕ್ಕೆಯುಂಟು ಮಾಡುತಿದ್ದಾಗಿ ಜಯರಾಮಯ್ಯು ದೂರು ನೀಡಿದ್ದಾರೆ. 

ದೂರು ಸಂಬಂಧ ಎನ್ ಸಿ ಆರ್ ಮಾಡಿಕೊಳ್ಳಲಾಗಿತ್ತು. ಇದೀಗ ಕೊರ್ಟ್ ಅನುಮತಿ ಪಡೆದು ಎಫ್ ಐ ಆರ್ ದಾಖಲಿಸಲಾಘಿದೆ.  ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಳೆದ ಜೂನ್ 20  ರಂದೇ ಜಯರಾಮಯ್ಯ ದೂರು ನೀಡಿದ್ದರು. ಈ ವೇಳೆ ಪ್ರತಿದೂರನ್ನು ನೇತ್ರಾ ನೀಡಿದ್ದರು.