ಲಕ್ನೋ( ಸೆ. 17)  ಬಾಯ್ ಫ್ರೆಂಡ್ ಮನೆಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ  18 ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ತಂದೆ ಹತ್ಯೆ ಮಾಡೊದ್ದಾನೆ. ಉತ್ತರ ಪ್ರದೇಶದ ಗಂಜೀರ್ ಪೊಲೀಸ್ ಠಾಣೆಯ ಖಾನ್‌ಪನ್ನಾ ಹಳ್ಳಿಯಲ್ಲಿ ಘಟನೆ ನಡೆದಿದೆ. 

ಮಂಗಳವಾರ ತಡರಾತ್ರಿ ಮನೆಯಿಂದ ಪರಾರಿಯಾದ ಯುವತಿ  ಅದೆ ಹಳ್ಳಿಯಲ್ಲಿ ಅಂಗಡಿ ನಡೆಸುತ್ತಿದ್ದ 20  ವರ್ಷದ ತನ್ನ ಬಾಯ್ ಫ್ರೆಂಡ್ ಮನೆಗೆ ಹೋಗಿದ್ದಾಳೆ. ಈ ವಿಚಾರ ತಂದೆಗೆ ಗೊತ್ತಾಗಿದ್ದು ಮಗಳು ತಾನು ಗೆಳೆಯನ ಮನೆಯಲ್ಲೇ ಇರುತ್ತೇನೆ ಎಂದು  ಪಟ್ಟು ಹಿಡಿದ ಸಂಗತಿಯೂ ಗೊತ್ತಾಗಿದೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಕೊಡೊಲಿಯೊಂದನ್ನು ಕೈಗೆ ತೆಗೆದುಕೊಂಡ ತಂದೆ ಬಾಯ್ ಫ್ರೆಂಡ್ ಮನೆಗೆ ಧಾವಿಸಿದ್ದಾನೆ.  ಕುಟುಂಬದ ಉಳಿದ ಸದಸ್ಯರು ತಂದೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಮಗಳನ್ನು ಮನೆಗೆ ಬರುವಂತೆ ತಂದೆ ಕರೆದಿದ್ದಾನೆ. ಆದರೆ ಒಪ್ಪದ ಆಕೆ ವಾದ ಶುರು ಮಾಡಿದ್ದಾಳೆ. ಆಕ್ರೋಶಗೊಂಡ ತಂದೆ ಕೊಡಲಿಯಿಂದ ಹಲ್ಲೆ ಮಾಡಿದ್ದು ಮಗಳ ಹತ್ಯೆಯಾಗಿದೆ. ಊರಿನ ಮತ್ತು ಕುಟುಂಬಸ್ಥರ ಎದುರಿನಲ್ಲಿಯೇ ಈ ದಾರುಣ ಘಟನೆ ನಡೆದು ಹೋಗಿದೆ.

ಮರ್ಯಾದಾ ಹತ್ಯೆ ಪ್ರಕರಣ ಇದಾಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.  ಕೃತ್ಯಕ್ಕೆ ಬಳಸಿದ್ದ ಕೊಡಲಿಯನ್ನು ವಶಕ್ಕೆ ಪಡೆಯಲಾಗಿದೆ.