Badami: ಕೋವಿಡ್ ನಿಯಮ ಉಲ್ಲಂಘಿಸಿ ಬನಶಂಕರಿ ಜಾತ್ರೆ: 38 ಜನರ ವಿರುದ್ಧ FIR
* ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿದೇವಿ ರಥೋತ್ಸವ
* ಬಾದಾಮಿ ತಹಸೀಲ್ದಾರ್ ದೂರಿನನ್ವಯ ಎಫ್‌ಐಆರ್ ದಾಖಲು
* ಎಫ್‌ಐಆರ್ ಹಿಂಪಡೆಯುವಂತೆ ಆಗ್ರಹ
ಬಾದಾಮಿ(ಜ.19): ಸರ್ಕಾರದ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಸುಪ್ರಸಿದ್ಧ ಬಾದಾಮಿ(Badami)ಬನಶಂಕರಿದೇವಿ ಜಾತ್ರೆಯ ರಥೋತ್ಸವದ(Banashankari Fair) ಹಗ್ಗ ತರುವುದರ ಮೂಲಕ ಹೆಚ್ಚು ಜನರನ್ನು ಸೇರಿಸಿದ ರೋಣ(Ron) ತಾಲೂಕಿನ ಮಾಡಲಗೇರಿ ಗ್ರಾಮದ 26 ಜನರು ಮತ್ತು ಬನಶಂಕರಿ ಟ್ರಸ್ಟ್‌ನ 12 ಜನರು ಸೇರಿದಂತೆ 38 ಜನರ ವಿರುದ್ಧ ಬಾದಾಮಿ ತಹಸೀಲ್ದಾರ್ ಸುಹಾಸ ಇಂಗಳೆ ಅವರ ದೂರಿನನ್ವಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR) ದಾಖಲಿಸಿದ್ದಾರೆ.
ಬನಶಂಕರಿ ರಥೋತ್ಸವಕ್ಕೆ ಹಗ್ಗವನ್ನು ತಂದ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಗುರುನಾಥ ಹಿರೇಸಕ್ಕರಗೌಡ್ರ, ಭೀಮಸಿ ಜೋಗಿ, ಪ್ರಕಾಶ ಭಾವಿ, ವಸಂತ ಭಾವಿ, ಬಿ.ಎಚ್.ಭೀಮನಗೌಡ್ರ, ಶರಣಪ್ಪಗೌಡ ಹಿರೇಸಕ್ಕರಗೌಡ್ರ, ಬಿ.ಸಿ.ರಾಯನಗೌಡ್ರ, ವೀರನಗೌಡ ಪಾಟೀಲ, ಮುತ್ತನಗೌಡ ಹಿರೇಸಕ್ಕರಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ಭೀಮನಗೌಡ ಹಿರೇಕೆಂಚನಗೌಡ್ರ, ಶರಣಪ್ಪಗೌಡ ರಾಯನಗೌಡ್ರ, ಪ್ರವೀಣ ರಾಯನಗೌಡ್ರ, ಶಿವನಗೌಡ ಹಿರೇಸಕ್ಕರಗೌಡ್ರ, ಶಂಕರಗೌಡ ತಿಪ್ಪನಗೌಡ್ರ, ರಾಘವೇಂದ್ರ ಕುರಬನಾಳ, ಮಲ್ಲಪ್ಪ ಹಾದಿಮನಿ, ಮಂಜುನಾಥ ಬಾಲನಗೌಡ್ರ, ಶಂಕ್ರಗೌಡ ರಾಯನಗೌಡ್ರ, ಮಂಜುನಾಥ ರಾಯನಗೌಡ್ರ, ಸಿದ್ದಪ್ಪ ಸಾಳೂಂಕಿ,ಶಂಕರಗೌಡ ಹಿರೇಸಕ್ಕರಗೌಡ್ರ, ಬಸವರಾಜ ಭಾವಿ, ಆರ್.ವಿ.ರಾಯನಗೌಡ್ರ, ಎಸ್.ಆರ್.ಸಕ್ಕರಗೌಡ್ರ ಮತ್ತು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಎಂ.ಎಸ್.ಪೂಜಾರ, ವಿದ್ಯಾನಂದ ಪೂಜಾರ, ಪ್ರಕಾಶ ಪೂಜಾರ, ಮಾಲತೇಶ ಪೂಜಾರ, ಮಹೇಶ ಪೂಜಾರ, ರಮೇಶ ಪೂಜಾರ, ವಿ.ಎಸ್.ಪೂಜಾರ, ಶ್ರೀಕಾಂತ ಪೂಜಾರ, ಡಿ.ಎಸ್.ಸಂಗಮ, ಅನೀಲ ಜ್ಯೋತಿ, ಬಸಣ್ಣ ಸೇರಿದಂತೆ ಒಟ್ಟು 38 ಜನರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ.ನೇತ್ರಾವತಿ ಪಾಟೀಲ ತಿಳಿಸಿದ್ದಾರೆ.
Bagalkot: ಬಾದಾಮಿ ಬನಶಂಕರಿ ಜಾತ್ರೆ ರದ್ದು: ಕಂಗಾಲಾದ ಕಲಾವಿದರು
ಎಫ್‌ಐಆರ್ ಹಿಂಪಡೆಯುವಂತೆ ಆಗ್ರಹ
ಜ.17ರಂದು ನಡೆದ ಬಾದಾಮಿ-ಬನಶಂಕರಿದೇವಿ ಜಾತ್ರೆ ರಥೋತ್ಸವದ ಹಗ್ಗ ತಂದ ರೋಣ ತಾಲೂಕು ಮಾಡಲಗೇರಿ ಗ್ರಾಮದ ಮುಖಂಡರ ಮತ್ತು ಬನಶಂಕರಿ ದೇವರ(Banashankari Devi) ಪೂಜಾರ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ತಾಲೂಕಾಡಳಿತ ಕ್ರಮ ಖಂಡನೀಯ ಎಂದು ಬೇಲೂರ ಗ್ರಾಮದ ಭಕ್ತ, ಸಾಮಾಜಿಕ ಕಾರ್ಯಕರ್ತ ಎಂ.ಡಿ.ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬನಶಂಕರಿದೇವಿ ಜಾತ್ರೆ ಮತ್ತು ರಥೋತ್ಸವ ಐತಿಹಾಸಿಕವಾಗಿದೆ. ರಥೋತ್ಸವ ಎಳೆಯಲು ಹಗ್ಗ ತಂದ ಮಾಡಲಗೇರಿ ಗ್ರಾಮಸ್ಥರ(Villagers) ಮತ್ತು ಪೂಜಾರ ಮನೆತನದವರ (Poojar Family) ಮೇಲೆ ಪ್ರಕರಣ ದಾಖಲಿಸಿರುವ ಕ್ರಮ ಖಂಡನೀಯ. ಇವರು ಯಾವುದೇ ಅಪರಾಧ(Crime) ಮಾಡಿಲ್ಲ. ಇದರಲ್ಲಿ ಅವರ ತಪ್ಪೇನೂ ಇಲ್ಲ. ಅವರು ಯಾರೂ ಅಂದು ಸೇರಿದ ಭಕ್ತರಿಗೆ ಜಾತ್ರೆಗೆ ಬನ್ನಿರಿ ಅಂತಾ ಆಮಂತ್ರಣ ಕೊಟ್ಟಿಲ್ಲ. ಎಲ್ಲಾ ಭಕ್ತರು(Devotees) ಸ್ವಯಂಪ್ರೇರಿತರಾಗಿ ಬಂದು ಭಕ್ತಿ ಪರವಾಗಿ ತಮ್ಮ ತಮ್ಮ ರಥೋತ್ಸವ ಸೇವೆ ಮಾಡಿಕೊಂಡು ಪುನೀತರಾಗಿದ್ದಾರೆ. ಮತ್ತು ಇದರಲ್ಲಿ ದೊಂಬಿ, ಗಲಾಟೆ, ಗದ್ದಲ ಯಾವುದೇ ಇಲ್ಲ. ಎಲ್ಲವೂ ಸಮರ್ಪಣಾ ಮನೋಭಾವನೆ ಮಾತ್ರ ಇದೆ. ಇದಕ್ಕೆ ಸರ್ಕಾರಗಳ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
1910 ಹಾಗೂ 1960ರಲ್ಲಿ ಪ್ಲೇಗು(Plague) ಮತ್ತು ಕಾಲರಾ(Cholera) ಬಂದಾಗಲೂ ಸಹಿತ ಜಾತ್ರೆ ಸರಾಗವಾಗಿ ನಡೆದಿದೆ. ಆಗಿನ ಆಡಳಿತ ನಡೆಸುವ ಸರ್ಕಾರಗಳು ರೋಗ ನಿರೋಧಕ ಚುಚ್ಚು ಮದ್ದುಗಳನ್ನು(Injection) ನೀಡಿ ಜಾತ್ರೆ ನಡೆಸಿ, ಸಹಕರಿಸಿದ್ದರು ಎಂದರು.
ಇದನ್ನು ಅಪರಾಧ ಎನ್ನುವುದಾದರೆ ಆಡಳಿತ ಪಕ್ಷದ ಶಾಸಕರು, ಮಂತ್ರಿಗಳು ಹುಟ್ಟು ಹಬ್ಬ ಮೋಜಿನ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿ ಆದವರ ಮೇಲೆ ಎಷ್ಟು ಕೇಸ್ ದಾಖಲಾಗಿವೆ ಎಂದು ಪ್ರಶ್ನಿಸಿದರು. ಪ್ರಕರಣವನ್ನು ಕೂಡಲೇ ತಾಲೂಕಾಡಳಿತ ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, 2021ರಲ್ಲಿ ಈಗಿನ ಪರಿಸ್ಥಿತಿಗಿಂತ ಭಿನ್ನವಾಗಿತ್ತು. ಸಾವು ನೋವು ಬಹಳ ಇತ್ತು. ಕೊರೋನಾ, ಡೆಲ್ಟಾ(Delta), ಬ್ಲಾಕ್ ಫಂಗಸ್(Black Fungus) ಇದ್ದಾಗಲೂ ಜಾತ್ರೆ ನಡೆದಿದೆ. ಆಗ ಇಲ್ಲದ್ದು ಈಗ ಏಕೆ? ಎಂದು ಪ್ರಶ್ನಿಸಿದ್ದಾರೆ.