ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಬಾಲಕ ಕಿಡ್ನಾಪ್, ರಾತ್ರಿ 1 ನಿಮಿಷವೂ ನಿದ್ದೆ ಮಾಡದೆ ಪತ್ತೆ ಹಚ್ಚಿದ ಖಾಕಿ

ಎಲೆಕ್ಟ್ರಾನಿಕ್ ಸಿಟಿ ಸಿನಿಮಾ ಸ್ಟೈಲ್ ನಲ್ಲಿ ಬಾಲಕ ಕಿಡ್ನಾಪ್ ನಡೆದಿದೆ. ಇಲ್ಲಿನ ದೊಡ್ಡತೋಗೂರು ಬಳಿ  ಬರ್ತಡೇ ಪಾರ್ಟಿ ಇದೆ ಎಂದು ಆಸೆ ತೋರಿಸಿ ಬಾಲಕನನ್ನು ಕಿಡ್ನಾಪ್ ಮಾಡಲಾಗಿದೆ.  

film style Boy kidnapped  in bengaluru rescued from  electronic city police gow

ಬೆಂಗಳೂರು (ಜೂ.18): ಎಲೆಕ್ಟ್ರಾನಿಕ್ ಸಿಟಿ ಸಿನಿಮಾ ಸ್ಟೈಲ್ ನಲ್ಲಿ ಬಾಲಕ ಕಿಡ್ನಾಪ್ ನಡೆದಿದೆ. ಇಲ್ಲಿನ ದೊಡ್ಡತೋಗೂರು ಬಳಿ  ಬರ್ತಡೇ ಪಾರ್ಟಿ ಇದೆ ಎಂದು ಆಸೆ ತೋರಿಸಿ ಬಾಲಕನನ್ನು ಕಿಡ್ನಾಪ್ ಮಾಡಲಾಗಿದೆ. ಜೂನ್ 17ರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಮನೆ ಬಳಿಯಿದ್ದ ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಬಾಲಕನಿಗೆ ಕೇಕ್ ಆಸೆ ತೋರಿಸಿ ಮೊಹಮದ್ ಜಶಿಮುದ್ದೀನ್ ಶೇಕ್(24) ಎಂಬಾತ ಕಿಡ್ನಾಪ್ ಮಾಡಿದ್ದಾನೆ.

ನಟ ದರ್ಶನ್ ಕೋಪ ಮತ್ತು ಉಮಾಪತಿ ಗೌಡ ತಾಳ್ಮೆ, ಭವಿಷ್ಯ ನುಡಿದ ಕೋಡಿಶ್ರೀ

ಕಿಡ್ನಾಪ್ ಮಾಡಿದ ಬಳಿಕ ಪೊಲೀಸರ ದಾರಿ ತಪ್ಪಿಸಲು ಕಿಡಿಗೇಡಿಗಳು 14 ಕಿಲೋಮೀಟರ್ ಸುತ್ತಾಡಿದ್ದಾರೆ.  ಹಲವು ಕಡೆ ಆಟೋದಲ್ಲಿ ಸುತ್ತಾಟ ನಡೆಸಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.

ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನನ್ನು ಗಾಡಿಯಲ್ಲಿ ಹಾಕಿಕೊಂಡು ಪೊಲೀಸರಿಗೆ ಕಣ್ಣು ತಪ್ಪಿಸಿ ಓಡಾಟ ಮಾಡಿದ್ದಾರೆ. ಪದೇ ಪದೇ ಲೋಕೇಶನ್ ಬದಲಿಸುತ್ತಿದ್ದ ಅಸಾಮಿಯನ್ನು ಕೊನೆಗೆ ಇಂದು  ಬೆಳಿಗ್ಗೆ ಬಾಲಕ ಸಹಿತ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಪೊಲೀಸ್‌ ಕಸ್ಟಡಿಯಿಂದ ಆಸ್ಪತ್ರೆಗೆ ಶಿಫ್ಟ್!

ಹೀಗಾಗಿ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಕಿಡ್ನಾಪಾ ಆದ  13 ಗಂಟೆಗೆಯಲ್ಲಿ ಬಾಲಕನನ್ನು ರಕ್ಷಿಸಿ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.

ಹಂತಕ ಬಾಲಕನಿಗೆ ಏನಾದರೂ ಮಾಡುತ್ತಾನೋ ಎನ್ನುವ ಆತಂಕದಲ್ಲಿ ಇಡೀ ರಾತ್ರಿ ನಿದ್ದೆ ಮಾಡದೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ಮೊಬೈಲ್ ಲೊಕೇಶನ್ ಸೇರಿ ಹಲವು ದಾಖಲೆಗಳನ್ನು ರಾತ್ರಿಯ ಕಲೆ ಹಾಕಿ ಇನ್ಸ್ ಪೆಕ್ಟರ್   ನವೀನ್, ಪಿಎಸ್ಐ ಸಿದ್ದಪ್ಪ ಸೇರಿ ಹಲವು ಪೊಲೀಸರ ತಂಡ ಬಾಲಕನನ್ನು ರಕ್ಷಿಸಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios