Asianet Suvarna News Asianet Suvarna News

ನಟ ದರ್ಶನ್ ಕೋಪ ಮತ್ತು ಉಮಾಪತಿ ಗೌಡ ತಾಳ್ಮೆ, ಭವಿಷ್ಯ ನುಡಿದ ಕೋಡಿಶ್ರೀ

ಕೊಲೆ ಆರೋಪಿಯಾಗಿರುವ ನಟ ದರ್ಶನ್ ಬಗ್ಗೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ.

Kodi Mutt Swamiji Prediction about actor darshan and Producer Umapathy Srinivas Gowda gow
Author
First Published Jun 18, 2024, 7:31 PM IST

ಚಿಕ್ಕಬಳ್ಳಾಪುರ (ಜೂ.18): ಕೊಲೆ ಆರೋಪಿಯಾಗಿರುವ ನಟ ದರ್ಶನ್ ಬಗ್ಗೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೋಡಿಮಠ ಶ್ರೀಗಳ ಭವಿಷ್ಯ ನುಡಿದಿದ್ದಾರೆ. ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಗ್ಗೆ ಮಾತನಾಡಿ, ಉಮಾಪತಿಯೇ ಹೇಳಿದ್ದಾರೆ, ನಾನು ಕೋಡಿಮಠಕ್ಕೆ ಹೋದಾಗ ಕೋಪ ಕಡಿಮೆ ಮಾಡಿಕೊಳ್ಳಬೇಕು. ತಂದೆ ತಾಯಿ ಮಾತು ಕೇಳಬೇಕು ಎಂದಿದ್ದರು. ಅದರಂತೆ ನಾನು ನಡೆದುಕೊಂಡಿದ್ದೇನೆ ಈಗ ಒಳ್ಳೆಯ ಸ್ಥಾನಮಾನದಲ್ಲಿ ಇದ್ದೇನೆ. ದರ್ಶನ್ ವಿರುದ್ಧ ಗಲಾಟೆ ನಡೆದಾಗ ನಾನು ಕೋಪ ಮಾಡಿಕೊಳ್ಳಲಿಲ್ಲ ಅಂತಿದ್ದ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಗಡಗಳು ಸಂಭವಿಸುತ್ತವೆ.  ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು. ದರ್ಶನ್, ಉಮಾಪತಿ ಗಲಾಟೆ ವಿಚಾರವಾಗಿ ಮಾರ್ಮಿಕವಾಗಿ  ನುಡಿದ ಕೊಡಿ ಶ್ರೀಗಳು.

ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಪೊಲೀಸ್‌ ಕಸ್ಟಡಿಯಿಂದ ಆಸ್ಪತ್ರೆಗೆ ಶಿಫ್ಟ್!

ಮೋದಿ  ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ: ರಾಜ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಹೇಳಿಕೆ ನೀಡುತ್ತೇನೆ.  ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ. ಈಗ ದೇಶದಲ್ಲಿ ಇರುವುದು ಕ್ರೋಧಿ ನಾಮ ಸಂವತ್ಸರ. ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ವಾಯು ಕಂಟಕಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಜಲಾವೃಷ್ಟಿ ಹೆಚ್ಚಾಗುವ ಸಾಧ್ಯತೆ ಇದೆ. ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ ಎಂದಿದ್ದಾರೆ.

ದರ್ಶನ್ ಮನೆ ತೆರವು ಬಗ್ಗೆ ಡಿಕೆಶಿ ಮಾತು, ನೀನು ಸ್ಟೇ ತಂದಿದ್ರು ಮಾಡ್ತಿವಿ, ನಾನು ಸ್ಟೇ ತಂದಿದ್ರೂ ಮಾಡೇ ಮಾಡ್ತಿವಿ

Latest Videos
Follow Us:
Download App:
  • android
  • ios