ದೆಹಲಿ ವಿಶ್ವವಿದ್ಯಾಲಯದ ಆರ್ಯಭಟ ಕಾಲೇಜಿನಲ್ಲಿ ಓದುತ್ತಿದ್ದ 19 ವರ್ಷದ ಹುಡುಗ ನಿಕಿಲ್ ಚೌಹಾಣ್ ಎನ್ನುವ ವಿದ್ಯಾರ್ಥಿಯ ಕೊಲೆಯಾಗಿದೆ. ಆನಂದ್ ನಿಕೇತನ್‌ನಲ್ಲಿ ಘಟನೆ ನಡೆದಿದ್ದು ಒಂದೇ ದಿನ ದೆಹಲಿಯಲ್ಲಿ ಆದ ಮೂರನೇ ಕೊಲೆ ಪ್ರಕರಣ ಇದಾಗಿದೆ.
ನವದೆಹಲಿ (ಜೂ.18): ದೆಹಲಿಯಲ್ಲಿ ಭಾನುವಾರ ಒಂದೇ ದಿನ ಮೂರು ಕೊಲೆ ಪ್ರಕರಣಗಳು ನಡೆದಿವೆ. ದೆಹಲಿ ವಿಶ್ವವಿದ್ಯಾಲಯದ ಆರ್ಯಭಟ ಕಾಲೇಜಿನ ವಿದ್ಯಾರ್ಥಿಯಾಗಿದ್ದ 19 ವರ್ಷದ ವಿದ್ಯಾರ್ಥಿಯನ್ನು ಆನಂದ್ ನಿಕೇತನ್‌ನಲ್ಲಿ ಚೂರಿ ಇರಿದು ಕೊಲೆ ಮಾಡಲಾಗಿದೆ. ವಿದ್ಯಾರ್ಥಿಯನ್ನು ನಿಖಿಲ್ ಚೌಹಾಣ್ ಎಂದು ಗುರುತಿಸಲಾಗಿದೆ. ಆರ್ಯಭಟ ಕಾಲೇಜಿನಲ್ಲಿ ಓಪನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದ ಆತ, ಭಾನುವಾರ ಕಾಲೇಜಿಗೆ ಹಾಜರಾಗಿದ್ದ ವೇಳೆ ಘಟನೆ ನಡೆದಿದೆ. ತನ್ನ ಗರ್ಲ್‌ಫ್ರೆಂಡ್ ಜೊತೆ ಕೆಟ್ಟದಾಗಿ ವರ್ತಿಸಿದ್ದ ಕಾರಣಕ್ಕೆ ಏಳು ದಿನಗಳ ಹಿಂದೆ ನಿಖಿಲ್ ಚೌಹಾಣ್ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದ. ಇದೇ ಜಿದ್ದು ಇರಿಸಿಕೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಭಾನುವಾರ ಮತ್ತೆ ನಿಖಿಲ್ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ವಿದ್ಯಾರ್ಥಿ ಚೂರಿ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೂವರು ವಿದ್ಯಾರ್ಥಿಗಳನ್ನು ಜೊತೆ ಮಾಡಿಕೊಂಡು ಬಂದಿದ್ದ ಇನ್ನೊಬ್ಬ ವಿದ್ಯಾರ್ಥಿ, ಕಾಲೇಜು ಗೇಟ್ ಎದುರೇ ಮತ್ತೆ ಜಗಳ ತೆಗೆದಿದ್ದಾನೆ.
ಚೂರಿ ಇರಿದ ಬಳಿಕ ನಿಖಿಲ್‌ನನ್ನು ಮೋತಿ ಭಾಗ್‌ನಲ್ಲಿರುವ ಚರಕ್ ಪಾಲಿಕಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆತ ಸಾವು ಕಂಡಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ನಿಖಿಲ್ ರಾಜ್ಯಶಾಸ್ತ್ರದಲ್ಲಿ ಬಿಎ ಆನರ್ಸ್ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ಪಶ್ಚಿಮ ವಿಹಾರ್ ನಿವಾಸಿಯಾಗಿದ್ದರು.
ನೈಋತ್ಯ ದೆಹಲಿಯಲ್ಲಿ ಒಂದೇ ದಿನದಲ್ಲಿ 3 ಕೊಲೆಗಳು: ನಿಖಿಲ್ ಸಾವಿನೊಂದಿಗೆ ನೈಋತ್ಯ ದೆಹಲಿ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಒಟ್ಟು ಮೂರು ಕೊಲೆಗಳು ನಡೆದಿವೆ. ದೆಹಲಿಯ ಆರ್ ಕೆ ಪುರಂ ಪ್ರದೇಶದಲ್ಲಿ ಇಬ್ಬರು ಸಹೋದರಿಯರನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳಲ್ಲಿ ನಿಖಿಲ್ ಹತ್ಯೆ ನಡೆದಿದೆ.
ಸಾಲ ವಾಪಸ್ ಕೊಡ್ಲಿಲ್ಲ ಅಂತ ವ್ಯಕ್ತಿಯ ಇಬ್ಬರು ಸೋದರಿಯರನ್ನು ಗುಂಡಿಕ್ಕಿ ಕೊಂದ ಪಾಪಿಗಳು!
ಭಾನುವಾರ ಮುಂಜಾನೆ ಆರ್‌ಕೆ ಪುರಂನಲ್ಲಿ ಇಬ್ಬರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ದಾಳಿಯ ಹಿಂದಿನ ಉದ್ದೇಶವು ಹಣಕಾಸು ವಿವಾದ ಎಂದು ಹೇಳಿದ್ದಾರೆ.
"ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ
ದಾಳಿಕೋರರು ಪ್ರಾಥಮಿಕವಾಗಿ ಇವರ ಸಹೋದರನನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಆದರೆ ವಿವಾದದ ಸಮಯದಲ್ಲಿ ಆಕಸ್ಮಿಕವಾಗಿ ಮಹಿಳೆಯರ ಮೇಲೆ ಗುಂಡು ಹಾರಿಸಿದ್ದಾರೆ.
