ತುಮಕೂರು(ಜೂ.  02)  ಹುಡುಗಿ ಮೊಬೈಲ್ ನಂಬರ್ ವೈರಲ್ ಮಾಡಿ ಪೊಲೀಸರಿಂದ ತನಿಖೆಗೆ ಗುರಿಯಾಗಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿದ್ಧಾನೆ. 

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಘಟನೆ ನಡೆದಿದೆ. ವರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಮೊಬೈಲ್ ಅಂಗಡಿ ಬಾಡಿಗೆ ವಿಚಾರಕ್ಕೆ ಮನಸ್ತಾಪ ಪ್ರಾರಂಭವಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ದೊಡ್ಡಗುಣಿ ಗ್ರಾಮದಲ್ಲಿ ಮೊಬೈಲ್ ಅಂಗಡಿಗೆ ಬಾಡಿಗೆಗೆ ಪಡೆದಿದ್ದ ಯುವಕನಿಂದ ಮಾಲೀಕರು ಏಕಾಏಕಿ ಅಂಗಡಿ ವಾಪಸ್ ಪಡೆದಿದ್ದರು.

ಡಾಕ್ಟರ್ ಅಲ್ಲ, ಮಕ್ಕಳ ಕಳ್ಳಿ...  ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ತನಿಖೆ

ಇದರಿಂದ ಕುಪಿತಗೊಂಡ ವರುಣ್ ಅಂಗಡಿ ಮಾಲೀಕರ ಮಗಳ  ಪೋನ್ ನಂಬರ್ ವೈರಲ್ ಮಾಡಿದ್ದ ಎನ್ನಲಾಗಿದೆ. 'ಈ ನಂಬರ್ ಗೆ ಕಾಲ್ ಮಾಡಿ  ಆಂಟಿ ಬರ್ತಾಳೆ ' ಅಂತ ಪ್ರಚಾರ ಮಾಡಿದ್ದ.

ಸಾಮಾಜಿಕ ಜಾಲತಾಣಗಳಲ್ಲಿಯೂ ನಂಬರ್ ವೈರಲ್ ಆಗಿತ್ತು. ನಂತರ ಗುಬ್ಬಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ವರುಣ್ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಥಳಿಸಿದ್ದಾರೆ ಎಂಬ ಮಾತು ಬಂದಿತ್ತು. ಮನೆಯವರಿಗೂ ವಿಚಾರ ಗೊತ್ತಾಗಿದೆ ಎಂದು ಭಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.