Asianet Suvarna News Asianet Suvarna News

ತುಮಕೂರು: ತಂದೆಯಿಂದಲೇ ನಿರಂತರ ಅತ್ಯಾಚಾರ, ಗರ್ಭ ಧರಿಸಿದ 14 ವರ್ಷದ ಮಗಳು..!

ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. 

Father Rape on Daughter in Tumakuru grg
Author
First Published Sep 4, 2024, 9:34 AM IST | Last Updated Sep 4, 2024, 9:34 AM IST

ತುಮಕೂರು(ಸೆ.04): ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ ಪರಿಣಾಮ ಮಗಳು ಗರ್ಭ ಧರಿಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

14 ವರ್ಷದ ಮಗಳ ಮೇಲೆ ಕಾಮುಕ ತಂದೆ ಕ್ರೌರ್ಯ ಮೆರೆದಿದ್ದಾನೆ. ಉತ್ತರ ಪ್ರದೇಶ ಮೂಲದವರು ಎನ್ನಲಾದ ಕುಟುಂಬವೊಂದು ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿತ್ತು. 

Rape Case : ಪತಿ ಅಂದ್ಕೊಂಡು ರಾತ್ರಿಯಿಡಿ ಸೆಕ್ಸ್… ಕರೆಂಟ್ ಬಂದ್ಮೇಲೆ ಶಾಕ್…!

ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. ತಂದೆಯ ಹೇಯ ಕೃತ್ಯಕ್ಕೆ ಬಾಲಕಿ ಇದೀಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios