Asianet Suvarna News Asianet Suvarna News

Rape Case : ಪತಿ ಅಂದ್ಕೊಂಡು ರಾತ್ರಿಯಿಡಿ ಸೆಕ್ಸ್… ಕರೆಂಟ್ ಬಂದ್ಮೇಲೆ ಶಾಕ್…!

ಮಹಿಳೆ ಪತಿ ಎಂದು ಭಾವಿಸಿ ಪಕ್ಕದ ಮನೆ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಕರೆಂಟ್ ಹಾಕಿದ ಮೇಲೆ ಸತ್ಯ ಗೊತ್ತಾಗಿ ಆರೋಪಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.

different rape case has been registered in mumbai roo
Author
First Published Aug 28, 2024, 3:11 PM IST | Last Updated Aug 28, 2024, 3:27 PM IST

ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ (Kathlalli Karadige Jamunu Thinisoke) ಯಾವತ್ತು ಹೋಗ್ಬಾರದು ಅಂತ ನಮ್ ಭಟ್ರು ಹೇಳಿದಾರೆ. ಮೊಸ್ಟ್ಲಿ ಈ ವಿಷ್ಯ ಗೊತ್ತಿದ್ರೆ ಮಹಿಳೆ ಯಾಮಾರ್ತಿರಲಿಲ್ಲ. ಪತಿ ಅಂದ್ಕೊಂಡು ಮತ್ತ್ಯಾರದ್ದೋ ಜೊತೆ ಶಾರೀರಿಕ ಸಂಬಂಧ (hysical relationship) ಬೆಳೆಸಿ ಕಾಮುಕನ ಕೈಸೆರೆ ಆಗ್ತಿರಲಿಲ್ಲ. ಡಿಫರೆಂಟ್ ರೇಪ್ ಪ್ರಕರಣ (Different Rape Case) ವೊಂದು ಈಗ ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ಮಲಗಿದ್ದ ಮಹಿಳೆ, ಪತಿ ಅಂದ್ಕೊಂಡು ಬೇರೆ ವ್ಯಕ್ತಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ.  ಕರೆಂಟ್ ಹಾಕಿದ್ಮೇಲೆ ಸತ್ಯ ಗೊತ್ತಾಗಿದೆ. ಈಗ ಆರೋಪಿ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದ್ದು, ಆರೋಪಿ ಜೈಲು ಸೇರಿದ್ದಾನೆ. 

ಪಕ್ಕದ ಮನೆ ಕಾಮುಕ, ಮಹಿಳೆಗೆ ಮೋಸ ಮಾಡಿದ ವ್ಯಕ್ತಿ. ಘಟನೆ ಮುಂಬೈನ ಪೊವಾಯಿ (Mumbai Powai) ಎಂಬಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ?

Kolkata Rape Case : ಅದ್ಯಾರಪ್ಪು ಕೊಲ್ಕತ್ತಾ ಅತ್ಯಾಚಾರಿ ಪರ ವಾದಿಸಲು ಮುಂದಾದ ಲಾಯರ್? ಈ ಕೆಲಸಕ್ಕೆ ಒಪ್ಪಿದ್ಹೇಗೆ?

ಪೊವಾಯಿಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಗಾಗಿ ಕಾಯ್ತಿದ್ದಳು. ಆಕೆ ಗಂಡ ರಾತ್ರಿ ತಡವಾಗಿ ಬರ್ತೇನೆ ಎಂದು ಕೆಲಸಕ್ಕೆ ಹೋಗಿದ್ದ. ಹಾಗಾಗಿ ಮಹಿಳೆ ಗೇಟ್ ಗೆ ಬೀಗ ಹಾಕಿರಲಿಲ್ಲ. ಎಲ್ಲ ಕೆಲಸ ಮುಗಿಸಿ, ಲೈಟ್ ಆರಿಸಿ ನಿದ್ರೆಗೆ ಜಾರಿದ್ಲು. ಗೇಟ್ ಓಪನ್ (Gate Open) ಇರೋದನ್ನು ನೋಡಿದ ಪಕ್ಕದ ಮನೆ ವ್ಯಕ್ತಿ, ಮನೆಯೊಳಗೆ ನುಗ್ಗಿದ್ದಾನೆ. ಸದ್ದಿಲ್ಲದೆ ಮಹಿಳೆ ಪಕ್ಕದಲ್ಲಿ ಹೋಗಿ ಮಲಗಿದ್ದಾನೆ. ಪಕ್ಕದ ಮನೆ ಕಾಮುಕನನ್ನು ಪತಿ ಎಂದ್ಕೊಂಡ ಮಹಿಳೆ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. 

ಕರೆಂಟ್ (Current) ತೆಗೆದಿದ್ದರಿಂದ ಮಹಿಳೆಗೆ ಬಂದಿದ್ದು ಪತಿಯಲ್ಲ, ಪಕ್ಕದ ಮನೆ ಪಾಪಿ ಅನ್ನೋದು ಗೊತ್ತೇ ಆಗ್ಲಿಲ್ಲ. ಎಲ್ಲ ಮುಗಿದ್ಮೇಲೆ ಆಕೆ ಗಂಡನಿಗೆ ಊಟ ಬಡಿಸುವ ತಯಾರಿ ನಡೆಸಿದ್ದಾಳೆ. ಅದಕ್ಕಾಗಿ ಹಾಸಿಗೆಯಿಂದ ಎದ್ದು ಕರೆಂಟ್ ಹಾಕಿದ್ದಾಳೆ. ಬೆಡ್ ಮೇಲಿದ್ದ ವ್ಯಕ್ತಿ ನೋಡಿ ಮಹಿಳೆ ದಂಗಾಗಿದ್ದಾಳೆ. ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಶಬ್ಧ ಕೇಳ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬಂದಿದ್ದಾರೆ. ಪತಿ ಕೂಡ ಅದೇ ಟೈಂನಲ್ಲಿ ಮನೆಗೆ ಬಂದಿದ್ದಾನೆ. ಪಕ್ಕದ ಮನೆ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿಗೆ ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ವೃದ್ಧರು ಮಕ್ಕಳೆನ್ನದೆ ಎಲ್ಲರ ಮೇಲೆ ಪಿಶಾಚಿಯಂತೆ ಎರಗ್ತಿದ್ದಾರೆ ಪಾಪಿಗಳು. ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿರುವಾಗ್ಲೇ ಇಂಥ ಅನೇಕ ಘಟನೆಗಳು ಹೊರಗೆ ಬರ್ತಿವೆ. ಭಾರತದಲ್ಲಿ ಪ್ರತಿ ಒಂದು ಗಂಟೆಗೆ 3 ಮಹಿಳೆ ಅತ್ಯಾಚಾರಕ್ಕೆ ಒಳಗಾಗ್ತಿದ್ದಾಳೆ. ಅಂದ್ರೆ 20 ನಿಮಿಷಕ್ಕೆ ಒಬ್ಬರು ಇದಕ್ಕೆ ಬಲಿಯಾಗ್ತಿದ್ದಾರೆ. 

ವಿಚಿತ್ರ ಅಂದ್ರೆ ಭಾರತದಲ್ಲಿ ಶೇಕಡಾ 96 ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ಆಪ್ತರು, ಅಕ್ಕಪಕ್ಕದವರು, ಸಂಬಂಧಿಕರೇ ಮಹಿಳೆ ಮೇಲೆ ಅತ್ಯಾಚಾರವೆಸಗುತ್ತಿದ್ದಾರೆ.  2009ರಲ್ಲಿ 21, 397 ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2022ರಲ್ಲಿ ಈ ಸಂಖ್ಯೆ ಏರಿದೆ. 31,516 ರೇಪ್ ಕೇಸ್ ದಾಖಲಾಗಿದೆ. ರಾಜಸ್ತಾನ ಇದ್ರಲ್ಲಿ ಮುಂದಿದೆ. ರೇಪ್ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆಗೆ ಗುರಿಯಾಗುವವರ ಸಂಖ್ಯೆ ಬಹಳ ಕಡಿಮೆ. 100ರಲ್ಲಿ 27 ಮಂದಿಯನ್ನು ಮಾತ್ರ ಶಿಕ್ಷಿಸಲಾಗ್ತಿದೆ. 

ಜೈಲಲ್ಲಿ ದರ್ಶನ್‌ ಫೋಟೋ ಕ್ಲಿಕಿಸಿದ್ದು ರೌಡಿ ಶೀಟರ್‌ ವೇಲು: ಆತನ ಮೇಲೆ ಹಲ್ಲೆ

ಭಾರತದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಲ್ಲಿದ್ರೂ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಈವರೆಗೆ ಕೇವಲ ಐದು ಮಂದಿಗೆ ಮಾತ್ರ ಈ ಶಿಕ್ಷೆಯನ್ನು ವಿಧಿಸಲಾಗಿದೆ. 1990ರ ರೇಪ್ ಕೇಸ್ ನಲ್ಲಿ 2004ರಲ್ಲಿ ಧನಂಜಯ್  ಚಟರ್ಜಿ (Dhananjay Chatterjee ) ಯನ್ನು ಗಲ್ಲಿಗೇರಿಸಲಾಗಿತ್ತು. ನಿರ್ಭಯಾ ಪ್ರಕರಣ (Nirbhaya case) ದಲ್ಲಿ ನಾಲ್ವರಿಗೆ ಗಲ್ಲಿಗೇರಿಸಲಾಗಿದೆ. 

Latest Videos
Follow Us:
Download App:
  • android
  • ios