ಲಕ್ನೋ(ಸೆ. 20) ಇದೊಂದು ಘೋರಾತಿಘೋರ ಘಟನೆ.. ಐದು ಹೆಣ್ಣು ಮಕ್ಕಳ ತಂದೆ ಮಾಡಿದ ಹೀನ ಕೃತ್ಯ.  ಗರ್ಭಿಣಿ ಹೆಂಡತಿಯ ಹೊಟ್ಟಯನ್ನೇ ಪಾಪಿ ಗಂಡ ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ.  ಈ ಬಾರಿ ಆಕೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೋ? ಹೊಟ್ಟೆಯೊಳಗೆ ಇರುವ ಮಗು ಯಾವುದು ಎಂದು ತಿಳಿದುಕೊಳ್ಳಲು ಇಂಥ ಕೃತ್ಯ ಮಾಡಿದ್ದಾನೆ.

35  ವರ್ಷದ ಪನ್ನಾಲಾಲ್ ಘೋರ ಕೃತ್ಯ ಎಸಗಿದವ. ಬುದ್ದಗೌನ ನ  ನೆಕ್ ಪುರ್‌ದಲ್ಲಿ ಘಟನೆ ನಡೆದಿದೆ.  ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೋನಾ ರೋಗಿಗೆ ಒಂಭತ್ತು ಲಕ್ಷ ರೂ. ಬಿಲ್ ನೀಡಿ ಒಂದು ರೂ. ರಿಯಾಯಿತಿ!

ಮಹಿಳೆಗೆ ಹೀಗೆ ಆಗಿದ್ದು ಗೊತ್ತಾದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಪುತ್ರ ಬೇಕೆಂದು ಪಟ್ಟು ಹಿಡಿದ ಪನ್ನಾಲಾಲ್‌ ಗೆ ಐವರು ಹೆಣ್ಣುಮಕ್ಕಳು.. ಈ ಮಗುವು ಹೆಣ್ಣಾಗಬಹುದು ಎಂಬ ಕಾರಣಕ್ಕೆ ಹೆಂಡತಿಯ ಹೊಟ್ಟೆಯನ್ನೇ ದುರುಲ ಸೀಳಿದ್ದಾನೆ. ಆರು ತಿಂಗಳ ಗರ್ಭಿಣಿ ಮೇಲೆ ಕ್ರೌರ್ಯ ಎಸಗಿದ್ದು ಆರೋಪಿ ಪತಿಯ ಬಂಧನವಾಗಿದೆ. 

ಇದನ್ನೂ ನೋಡಿ | ಉದ್ಯಮಿ ಜತೆ ಪಲ್ಲಂಗದಲ್ಲಿ ಇದ್ದಿದ್ದು ಈಕೆನಾ? ಏನಿದು ಮಂಚದ ರಹಸ್ಯ!

"