ಚಿಕ್ಕಮಗಳೂರು; ಕೊರೋನಾ ರೋಗಿಗೆ 9 ಲಕ್ಷ ಬಿಲ್ ನೀಡಿ 1 ರೂ. ಡಿಸ್ಕೌಂಟ್!

ಕೊರೋನಾ ಚಿಕಿತ್ಸೆಗೆ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ/ ಚಿಕಿತ್ಸೆ ಫಲಕಾರಿಯಾಗದೆ ಸಾವು/ ಆಸ್ಪತ್ರೆಯ ಬಿಲ್  ನೋಡಿ ಕುಟುಂಬಸ್ಥರು ಕಂಗಾಲು / ಒಂಭತ್ತು ಲಕ್ಷಕ್ಕೆ  ಒಂದು ರೂ. ರಿಯಾಯಿತಿ

man dies dute to covid 19 Family gets rs 9 lakh bill and one rupee discount mah

ಚಿಕ್ಕಮಗಳೂರು(ಸೆ. 20) ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದರೆ ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ಬಿಲ್ ಮಾಡುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಕೊರೋನಾಕ್ಕಿಂತ ಆಸ್ಪತ್ರೆ ಬಿಲ್ ಗೆ ಜನ ಭಯಬೀಳುವಂತೆ ಆಗಿದೆ.. ಕೊನೆಗೆ ಕೊಟ್ಟಿರುವುದು ಒಂದು ರೂಪಾಯಿ ಡಿಸ್ಕೌಂಟ್!

ಇದು ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಕತೆ. ಕೊರೋನಾ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಗೆ  9 ಲಕ್ಷ ರೂಪಾಯಿ ಬಿಲ್ ಮಾಡಲಾಗಿದ್ದಿ ಇದಕ್ಕೆ ಆಸ್ಪತ್ರೆಯು 1 ರೂಪಾಯಿಯ 'ಬೃಹತ್‌' ಮೊತ್ತದ ಡಿಸ್ಕೌಂಟ್‌ ಬೇರೆ ನೀಡಿದೆ. 

ಕೊರೋನಾ ಭೀತಿ ನಡುವೆ ಮಹಾರಾಷ್ಟ್ರಕ್ಕೆ ಬಸ್ 

ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕ್ಕಮಗಳೂರಿನ ಈ ವ್ಯಕ್ತಿಯನ್ನು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದರು.

ವ್ಯಕ್ತಿಯ ಆರೈಕೆಗೆ ಆಸ್ಪತ್ರೆ ನೀಡಿರುವ ಬಿಲ್  9,25,601 ರೂ.  ಒಟ್ಟು ಬಿಲ್ ಮೊತ್ತದಲ್ಲಿ 1 ರೂಪಾಯಿ ವಿನಾಯಿತಿ! ಖಾಸಗಿ ಆಸ್ಪತ್ರೆಯ ಈ ಬಿಲ್‌ ಬಗ್ಗೆ ಸಾರ್ವಜನಿಕರಿಂದಲೂ ಭಾರೀ ಅಸಮಾಧಾನ ವ್ಯಕ್ತವಾಗಿದೆ.  ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆರೋಪಿಸಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

man dies dute to covid 19 Family gets rs 9 lakh bill and one rupee discount mah

Latest Videos
Follow Us:
Download App:
  • android
  • ios