ಊಟದಲ್ಲಿ ಇಲಿ ಪಾಷಾಣ ಹಾಕಿ ಹೆಂಡತಿ, ಮಕ್ಕಳನ್ನು ಕೊಂದ ಪಾಪಿ ತಂದೆ: ತಾನೂ ಆತ್ಮಹತ್ಯೆಗೆ ಯತ್ನ

ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Father killed his wife and children by rat poison in meal He also tried to commit suicide sat

ಬೆಂಗಳೂರು (ಮಾ.02): ತಾನು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು, ತನ್ನ ಹೆಂಡತಿ ಮಕ್ಕಳನ್ನು ಯಾರೂ ನೋಡಿಕೊಳ್ಳಲು ಆಗುವುದಿಲ್ಲ. ಅವರಿಗೆ ಕಷ್ಟವನ್ನು ಕೊಡುವುದು ಬೇಡವೆಂದು ಹೆಂಡರಿ ಹಾಗೂ ತನ್ನ ಇಬ್ಬರು ಪುಟಾಣಿ ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ಕೊಂದ ಪಾಪಿ ತಂದೆ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಜ್ಯ ರಾಜಧಾನಿ ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಹೆಂಡತಿ ಮಕ್ಕಳಿಗೆ ವಿಷವುಣಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ನಾಗೇಂದ್ರ ಎಂಬಾತನಿಂದ ಈ ಕೃತ್ಯ ನಡೆದಿದೆ. ವಿಜಯ (28), ನಿಷಾ(7), ದೀಕ್ಷಾ (5) ಮೃತ ದುರ್ದೈವಿಗಳು. ಊಟದಲ್ಲಿ ತಿಗಣೆ ಔಷಧಿ, ಇಲಿ ಔಷಧಿ ಬೆರೆಸಿದ್ದಾನೆ. ವಿಷ ಬರೆಸಿದ ಊಟವನ್ನು ತಿಂದ ಹೆಂಡತಿ ಮಕ್ಕಳು ಮನೆಯಲ್ಲಿಯೇ ಒದ್ದಾಡಿ ಸಾವನ್ನಪ್ಪಿದ್ದಾರೆ. ಇನ್ನು ಮನೆಯಲ್ಲಿ ಅವರು ಸಾವನ್ನಪ್ಪಿದ ನಂತರ ಕ್ಯಾನ್ಸರ್‌ ಪೀಡಿತ ಗಂಡ ನಾಗೇಂದ್ರ ಮೊದಲು ಚಾಕುವಿನಿಂದ ಕೈ ಕೊಯ್ದುಕೊಂಡು, ನಂತರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಅಂಕಲ್‌ಗೆ ಚಪ್ಪಲಿ ಏಟು : ಬಾಲಕಿ ಧೈರ್ಯಕ್ಕೆ ಸಾರ್ವಜನಿಕರೂ ಸಾಥ್‌

ಭಾಮೈದನಿಂದ ನಾಗೇಂದ್ರನ ರಕ್ಷಣೆ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ ಮಾಡುತ್ತಿದ್ದ ದೃಶ್ಯವನ್ನು ನೋಡಿದ ಆತನ ಭಾವಮೈದ (ಪತ್ನಿಯ ಸಹೋದರ) ಮನೆಯ ಕೋಣೆಯ ಬಾಗಿಲನ್ನು ಮುರಿದು ರಕ್ಷಣೆ ಮಾಡಿದ್ದಾರೆ. ಕೈ ಕೊಯ್ದು ಕೊಂಡ ಹಿನ್ನಲೆ ತೀವ್ತ ರಕ್ತ ಸ್ರಾವ ಉಂಟಾಗಿದ್ದು, ನೇಣು ಬಿಗಿದುಕೊಳ್ಳುವ ಮುನ್ನವೇ ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚಾಕುವಿನಿಂದ ಕೈ ಕೊಯ್ದು ಕೊಂಡ ನಾಗೇಂದ್ರಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ವಿಷಹಾರ ಸೇವಿಸಿ ಸಾವನ್ನಪ್ಪಿದ್ದ ಮೃತದೇಹಗಳನ್ನು ನೋಡಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಗಿಂದಾಗ್ಗೆ ಕೌಟುಂಬಿಕ ಕಲಹ: ಇನ್ನು ನಾಗೇಂದ್ರ ಕೆಲವು ವರ್ಷಗಳಿಂದ ತೀವ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ವೇಳೆ ಪತ್ನಿಯೇ ಕೆಲಸಕ್ಕೆ‌ ಹೋಗಿ ಇಡೀ ಸಂಸಾರವನ್ನು ನಿಭಾಯಿಸುತ್ತಿದ್ದರು. ಈ ಮಧ್ಯೆ ಪತಿ ಪತ್ನಿಯ ಮಧ್ಯೆ ಆಗಿಂದಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ತನ್ನ ಆರೋಗ್ಯ ಕಾಪಾಡಿಕೊಳ್ಳಲು ಆಗದೇ ಸಾವಿನ ದವಡೆಯಲ್ಲಿದ್ದ ನಾಗೇಂದ್ರ ಪತ್ನಿ, ಮಕ್ಕಳನ್ನು ಪೋಷಣೆ ಮಾಡಲಾಗದೇ ಪರದಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅವರಿಗೆ ವಿಷವುಣಿಸಿ ಕೊಲೆ ಮಾಡಿದ್ದಾಗಿ ನಾಗೇಂದ್ರ ಹೇಳಿದ್ದಾನೆ. ಈಗ ಸದ್ಯ ನಾಗೇಂದ್ರ ಆಸ್ಪತ್ರೆಯಲ್ಲಿದ್ದು ಪೊಲೀಸರಿಂದ‌ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು    ತನಿಖೆ‌ ಆರಂಭಿಸಿದ್ದಾರೆ. 

ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐಗೆ ಆಟೋ ಡಿಕ್ಕಿ: ಮೆದುಳು ನಿಷ್ಟ್ರಿಯಗೊಂಡು ಸಾವು

ಕುಡಿತದ ಚಟದಿಂದ ಕ್ಯಾನ್ಸರ್‌ ಉಲ್ಬಣ: ಕೊಲೆ ಆರೋಪಿ ನಾಗೇಂದ್ರ ಹಾಗೂ ವಿಜಯಾಗೆ 2014ರಲ್ಲಿ ಮದುವೆಯಾಗಿತ್ತು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಇದರಿಂದ ಅವನಿಗೆ ಕ್ಯಾನ್ಸರ್‌ ರೋಗ ಬಂದಿದೆ. ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ವಿಜಾ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕುಟುಂಬಕ್ಕೆ ಕೊಂಚ ಆರ್ಥಿಕ ಸಹಾಯ ಮಾಡುತ್ತಿದ್ದ ತಾಯಿ ಮನೆ ಇರುವ ಕೋನಣಕುಂಟೆ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಇಬ್ಬರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಈಗ ಯಾವುದೇ ಅನ್ಯಾಯವನ್ನೂ ಮಾಡದ ಹೆಂಡತಿ, ಮಕ್ಕಳು ಶವವಾಗಿ ಮಲಗಿದ್ದಾರೆ.

Latest Videos
Follow Us:
Download App:
  • android
  • ios