ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಅಂಕಲ್‌ಗೆ ಚಪ್ಪಲಿ ಏಟು : ಬಾಲಕಿ ಧೈರ್ಯಕ್ಕೆ ಸಾರ್ವಜನಿಕರೂ ಸಾಥ್
ಇವನು ಅಂಕಲ್, ಅವಳು ಪಿಯು ಕಾಲೇಜಿಗೆ ಹೋಗುವ ಅಪ್ರಾಪ್ತ ಬಾಲಕಿ. ಆದರೆ, ನೀನು ನನ್ನನ್ನೇ ಮದುವೆ ಆಗಬೇಕು ಎಂದು ಬೀದಿ ಬೀದಿಗಳಲ್ಲಿ ಪೀಡಿಸುತ್ತಿದ್ದ ಕಾಮುಕ ಅಂಕಲ್‌ಗೆ ಇಂದು ನೊಂದ ಬಾಲಕಿ ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಥಳಿಸಿದ್ದಾಳೆ.
ಬೆಂಗಳೂರು (ಮಾ.02): ಇವನು ಅಂಕಲ್, ಅವಳು ಪಿಯು ಕಾಲೇಜಿಗೆ ಹೋಗುವ ಅಪ್ರಾಪ್ತ ಬಾಲಕಿ. ಆದರೆ, ನೀನು ನನ್ನನ್ನೇ ಮದುವೆ ಆಗಬೇಕು ಎಂದು ಬೀದಿ ಬೀದಿಗಳಲ್ಲಿ ಪೀಡಿಸುತ್ತಿದ್ದ ಕಾಮುಕ ಅಂಕಲ್‌ಗೆ ಇಂದು ನೊಂದ ಬಾಲಕಿ ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಥಳಿಸಿದ್ದಾಳೆ.
ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ. ಯಶವಂತಪುರ ಹೋಳಿಗೆ ಮನೆ ಹೋಟೆಲ್‌ನ ಬಳಿಯಲ್ಲಿ ಈ ಘಟನೆಯು ನಡೆದಿದೆ. ಬೆಳ್ಳಕೆರೆ ನಿವಾಸಿ ರವೀಂದ್ರ ಎಂಬುವರು ಚಪ್ಪಲಿಯಿಂದ ಗೂಸ ತಿಂದ ವ್ಯಕ್ತಿ ಆಗಿದ್ದಾರೆ. ಇನ್ನು ಈಗತಾನೇ ಪಿಯು ಕಾಲೇಜು ಮೆಟ್ಟಿಲು ಹತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸುಮಾರು 40 ವರ್ಷದ ವಯಸ್ಸಿನ ಅಂಕಲ್ ಆಗಿರುವ ರವೀಂದ್ರ ಹಲವು ದಿನಗಳಿಂದ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದಾರೆ.
Vijayapura: ಅತ್ಯಾಚಾರಕ್ಕೆ ಯತ್ನ ಆರೋಪ: ಯುವಕರಿಬ್ಬರ ತಲೆ ಬೋಳ್ಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ
ಮನೆ ಬಿಟ್ಟು ಕಾಲೇಜುಗಳಿಗೆ ಹಾಗೂ ಇತರೆ ಕಾರ್ಯಕ್ಕೆ ರಸ್ತೆಯಲ್ಲಿ ಹೋಗುವಾಗಲೂ ಬಂದು ಪೀಡಿಸುತ್ತಿದ್ದರಿಂದ ಬಾಲಕಿ ಬೇಸತ್ತು ಹೋಗಿದ್ದಳು. ಈ ಬಗ್ಗೆ ಎಷ್ಟೇ ನಿರಾಕರಣೆ ಮಾಡಿ ಬುದ್ಧಿ ಹೇಳಿದ್ದರೂ ತನ್ನ ಚಾಳಿಯನ್ನು ಮುಂದುವರೆಸಿದ್ದನು. ಇಂದು ಅವನಿಗೆ ಸರಿಯಾಗಿ ಬುದ್ಧಿ ಕಲಿಸಲು ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿಯೇ ಚಪ್ಪಲಿ ಏಟು ಕೊಟ್ಟಿದ್ದಾಳೆ.
ಬಾಲಕಿಗೆ ಸಾಥ್ ನೀಡಿದ ಸಾರ್ವಜನಿಕರು: ಅಪ್ರಾಪ್ತ ಕಾಲೇಜು ಹುಡುಗಿಯು ಕಾಮುಕ ಅಂಕಲ್‌ಗೆ ಯಶವಂತಪುರದಲ್ಲಿ ರಸ್ತೆಯ ಮಧ್ಯದಲ್ಲಿಯೇ ಚಪ್ಪಲಿ ಏಟು ಕೊಡುತ್ತಿದ್ದಂತೆ ಸಾರ್ವಜನಿಕರೂ ಕೂಡ ಬಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬಾಲಕಿ ತನಗಾದ ಕಿರುಕುಳ ಬಗ್ಗೆ ನೋವು ತೋಡಿಕೊಂಡಿದ್ದಾಳೆ. ಈ ವೇಳೆ ಸಾರ್ವಜನಿಕರೂ ಕೂಡ ಬಾಲಕಿಗೆ ಸಾಥ್ ನೀಡಿದ್ದು, ಅಂಕಲ್‌ನನ್ನು ಹಿಡಿದುಕೊಂಡು ಬಾಲಕಿಯಿಂದ ಪುನಃ ಚಪ್ಪಲಿಯಿಂದ ಸೇವೆ ಮಾಡಿಸಿದ್ದಾರೆ. ಇನ್ನು ಬಾಲಕಿಯ ಮೇಲೆ ಹಲ್ಲೆಗೆ ಮುಂದಾಗಿದ್ದ ರವೀಂದ್ರನನ್ನು ತಡೆದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಾಮುಕನನ್ನು ವಶಕ್ಕೆ ಪಡೆದ ಪೊಲೀಸರು: ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಂತೆ ಯಶವಂತಪುರದ ಘಟನಾ ಸ್ಥಳಕ್ಕೆ ಬಂದ ಯಶವಂತಪುರ ಪೊಲೀಸರು, ರವೀಂದ್ರನನ್ನು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕಿಗೆ ಮದುವೆ ಆಗು ಎಂದು ಹಿಂದೆಬಿದ್ದಿದ್ದ ವಿಷಯವನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇನ್ನು ತಮ್ಮ ವಾಸದ ಸ್ಥಳದಲ್ಲಿ ಕಾಮುಕನ ಕಾಟ ತಾಳಲಾರದೇ ತಮ್ಮ ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಆದರೆ, ಮನೆಯ ಪೋಷಕರು ಅವನಿಗೆ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೂ, ತನ್ನ ಕೆಟ್ಟ ಚಾಳಿ ಮುಂದುವರೆಸಿ ಕಿರುಕುಳ ನೀಡುತ್ತಿದ್ದವನಿಗೆ ಇಂದು ತಕ್ಕ ಶಾಸ್ತಿ ಆಗಿದೆ.
ಡೆಲಿವರಿ ಬಾಯ್‌ಗೆ ಚಪ್ಪಲಿಯಿಂದ ಹೊಡೆದ ಮಹಿಳೆ: ಕಳೆದ ತಿಂಗಳು ತಾವು ಮಾಡಿದ ಆನ್‌ಲೈನ್ ಆರ್ಡರ್‌ನಲ್ಲಿ ಎರಡು ವಸ್ತುಗಳನ್ನು ತಂದಿಲ್ಲವೆಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿರುವ ದಂಪತಿ, ಬ್ಲಿಂಕಿಟ್ ಆಪ್ ಡೆಲಿವರಿ ಬಾಯ್‌ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಬ್ಲಿಂಕಿಟ್ ಆಪ್ ಮೂಲಕ ಆರೋಪಿಗಳಾದ ಶ್ರೀನಿ ಮತ್ತು ಆಕೆಯ ಪತಿ ಎಂಟು ಐಟಂಗಳನ್ನು ಒಳಗೊಂಡ ದಿನಸಿ ವಸ್ತುಗಳನ್ನು ಆರ್ಡರ್ ಆನ್‌ಲೈನ್ ಪೇಮೆಂಟ್ ಮಾಡದೇ ಕ್ಯಾಶ್ ಆನ್ ಡೆಲಿವರಿ ಮೋಡ್ ಮೂಲಕ ಆರ್ಡರ್ ಮಾಡಿದ್ದಾರೆ. ಅದರಂತೆ ಡೆಲಿವರಿ ಬಾಯ್ ವಿರೇಶ್ ಬೆಳಗ್ಗೆ 8 ಗಂಟೆ ಸುಮಾರಿಗೆ ಗೊಲ್ಲಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‌ರೈಸ್ ಅಪಾರ್ಟ್‌ಮೆಂಟ್ ಬಂದಿದ್ದರು.
ಆರ್ಡರ್ ಮಾಡಿದ ವಸ್ತುಗಳಿಲ್ಲವೆಂದು ಡೆಲಿವರಿ ಬಾಯ್‌ಗೆ ಚಪ್ಪಲಿಯಿಂದ ಹಲ್ಲೆ: ಹಿಂದಿ ಭಾಷಿಕ ಮಹಿಳೆ ರಂಪಾಟ
ಮನೆಯೊಳಗೆ ವಸ್ತು ತೆಗೆದುಕೊಂಡು ಹೋಗಿ ಮೋಸ: ಇನ್ನು ಆರ್ಡರ್ ಮಾಡಿದ ವಸ್ತುಗಳನ್ನು ಮನೆಯೊಳಗೆ ತೆದುಕೊಂಡು ಹೋಗಿ ಬಾಗಿಲು ಮುಚ್ಚಿಕೊಂಡು ನಂತರ ಹೊರಗೆ ಬಂದು ಎರಡು ವಸ್ತುಗಳು ಇಲ್ಲವೆಂದು ಆರೋಪ ಮಾಡಿದ್ದಾರೆ. ಆದರೆ, ಡೆಲಿವರಿ ಬಾಯ್ ನಾನು ಎಂಟೂ ವಸ್ತುಗಳನ್ನು ತಲುಪಿಸಿದ್ದು, ಹಣವನ್ನು ಕೊಡುವಂತೆ ಕೇಳಿದ್ದಾನೆ. ಇನ್ನು ಆರ್ಡರ್ ಮಾಡಿದ ವಸ್ತುಗಳಿಗೆ ಹಣ ಕೊಡದೇ ಕ್ಯಾತೆ ತೆಗೆದಿದ್ದರು. ಇದನ್ನ ಪ್ರಶ್ನಿಸಿದ್ದಕ್ಕೆ ಡೆಲಿವರಿ ಬಾಯ್ ವೀರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಉತ್ತರ ಭಾರತ ಮೂಲದ ಮಹಿಳೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಡೆಲಿವರಿ ಬಾಯ್ ರಿಂದ ಗಂಭೀರ ಆರೋಪ ಮಾಡಿದ್ದಾರೆ.