Asianet Suvarna News Asianet Suvarna News

ಸಾಲಬಾಧೆ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ

ಸಿದ್ದಮಲ್ಲಪ್ಪ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇದಕ್ಕಾಗಿ ಸಿದ್ದಮಾಮಲ್ಲಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮಕ್ಕಳನ್ನು ಬಾವಿಗೆ ಎಸೆದು ನಂತರ ತಾವು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ. 

Father Committed Suicide With His Two Children in Kalaburagi grg
Author
First Published Jan 7, 2023, 8:00 PM IST

ಆಳಂದ(ಜ.07):  ಪಟ್ಟಣದ ಪ್ರವಾಸಿ ಮಂದಿರ ಬಳಿ ಇರುವ ಬಾವಿಗೆ ತನ್ನೆರಡು ಮಕ್ಕಳನ್ನ ಎಸೆದ ತಂದೆಯೊಬ್ಬ ನಂತರ ತಾನೂ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ನೇಕಾರ ಕಾಲೋನಿ ನಿವಾಸಿ ಸಿದ್ದಮಾಮಲ್ಲಪ್ಪ ಅಕ್ಕ (35) ಎಂಬುವರೆ ತನ್ನೆರಡು ಮಕ್ಕಳಾದ ಮನೀಶ್‌ (11) ಮತ್ತು ಶ್ರೇಯಾ (10) ಅವರ ಕೈಕಾಲು ಕಟ್ಟಿಬಾವಿಗೆ ಎಸೆದು ನಂತರ ತಾನೂ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮಾರ್ಕೆಟ್‌ ಏರಿಯಾದಲ್ಲಿ ಸಿದ್ದಮಾಮಲ್ಲಪ್ಪ ಕಿರಾಣಿ ಅಂಗಡಿ ನಡೆಸುತ್ತಿದ್ದರು.

ನೇತಾಜಿ ಶಾಲೆಯಲ್ಲಿ ಮನೀಶ್‌ 5ನೇ ತರಗತಿ, ಶ್ರೇಯಾ 4ನೇ ತರಗತಿಯಲ್ಲಿ ಓದುತ್ತಿದ್ದರು. ಎಂದಿನಂತೆ ಸಿದ್ದಮಾಮಲ್ಲಪ್ಪ ಗುರುವಾರ ಸಾಯಂಕಾಲ ಮಕ್ಕಳನ್ನು ಬೈಕ್ನಲ್ಲಿ ಶಾಲೆಯಿಂದ ಮನೆಗೆ ಕರೆತರುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿರುವ ಬಾವಿಯ ಬಳಿ ಬೈಕ್‌ ನಿಲ್ಲಿಸಿ ಎರಡೂ ಮಕ್ಕಳ ಕೈಕಾಲು ಕಟ್ಟಿಬಾವಿಗೆ ಎಸೆದು ನಂತರ ತಾನೂ ಬಾವಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

KALABURAGI: ಹಾಡಹಗಲೇ ಬರ್ಬರ ಹತ್ಯೆ: ದೃಶ್ಯ ನೋಡಿದರೆ ಎದೆ ಝಲ್‌ ಎನ್ನುತ್ತೆ..!

ಸಿದ್ದಮಲ್ಲಪ್ಪ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇದಕ್ಕಾಗಿ ಸಿದ್ದಮಾಮಲ್ಲಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮಕ್ಕಳನ್ನು ಬಾವಿಗೆ ಎಸೆದು ನಂತರ ತಾವು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಆಳಂದ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾವಿಯಿಂದ ಎರಡೂ ಮಕ್ಕಳ ಶವಗಳನ್ನು ಹೊರ ತೆಗೆದಿದ್ದು, ಸಿದ್ದಮಾಮಲ್ಲಪ್ಪ ಅವರ ಶವಕ್ಕಾಗಿ ಶೋಧ ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios