ರಾಮದುರ್ಗ: ವಿಷಕಾರಿ ಪದಾರ್ಥ ಸೇವಿಸಿ ರೈತ ಆತ್ಮಹತ್ಯೆ
* ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದ ಘಟನೆ
* ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಮೃತ ರೈತ
* ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಮದುರ್ಗ(ಸೆ.12): ಸಾಲಬಾಧೆಯಿಂದಾಗಿ ರೈತನೋರ್ವ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ಪಟ್ಟಣ ಸಮೀಪದ ಮುಳ್ಳೂರ ಗುಡ್ಡದಲ್ಲಿ ಶುಕ್ರವಾರ ಸಂಭವಿಸಿದೆ.
ಸವದತ್ತಿ ತಾಲೂಕಿನ ಶಿರಸಂಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಇನಾಮಗೋವನಕೊಪ್ಪ ಗ್ರಾಮದ ಸಿದ್ದಪ್ಪ ಲಕ್ಷ್ಮಣ ಸುಳ್ಳದ (40) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ರಾಯಚೂರು: ಫೇಸ್‌ಬುಕ್ ಲೈವಲ್ಲಿ ಯುವಕ ಆತ್ಮಹತ್ಯೆ
ಕೂಡು ಕುಟುಂಬದಲ್ಲಿ ಸುಮಾರು 9 ಎಕರೆ ಜಮೀನು ಹೊಂದಿದ ರೈತ, ಶಿರಸಂಗಿ ಸೊಸೈಟಿಯಲ್ಲಿ .50 ಸಾವಿರ., ಶಿರಸಂಗಿ ಕೆ.ವ್ಹಿ.ಜಿ ಬ್ಯಾಂಕಿನಲ್ಲಿ 1.50 ಲಕ್ಷ, ತನ್ನ ಹೆಂಡತಿ ಹೆಸರಿನಲ್ಲಿರುವ ಸಾಲ ಸೇರಿದಂತೆ ವಿವಿಧೆಡೆ ಸುಮಾರು . 6.50 ಲಕ್ಷ ಸಾಲ ಮಾಡಿದ್ದ. ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿದರೂ ಸರಿಯಾಗಿ ನೀರು ದೊರೆಯದೆ ಹಾಗೂ ಅತಿಯಾದ ಮಳೆಯಿಂದಾಗಿ ಜಮೀನಿನಲ್ಲಿರುವ ಹತ್ತಿ, ಗೋವಿನಜೋಳ ಹಾನಿಯಾಗಿದೆ. ಹೀಗಾಗಿ ಮಾಡಿದ ಸಾಲ ತೀರಿಸುವುದು ಹೇಗೆಂದು ತೋಚದೆ ಮುಳ್ಳೂರ ಗುಡ್ಡದಲ್ಲಿ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಹೆಂಡತಿ ಮಹಾದೇವಿ ಸಿದ್ದಪ್ಪ ಸುಳ್ಳದ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾಳೆ.
ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ ಭೇಟಿ ಪರಿಶೀಲಿಸಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.