*  ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ನಡೆದ ಘಟನೆ*  ಟ್ರ್ಯಾಕ್ಟರ್‌ ಕಸಿದು ಕಿರುಕುಳ ನೀಡಿದ ಮೂವರು ವ್ಯಕ್ತಿಗಳು*  ಪ್ರಾಣಾಪಾಯದಿಂದ ಪಾರಾದ ರೈತ   

ಗೋಕಾಕ(ಆ.29): ಸಾಲಗಾರರ ಕಾಟಕ್ಕೆ ಬೇಸತ್ತು ಫೇಸ್‌ಬುಕ್‌ ಲೈವ್‌ನಲ್ಲಿ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. 

ಲಕ್ಷ್ಮಣ ಈಳಗೇರ (32) ಆತ್ಮಹತ್ಯೆಗೆ ಯತ್ನಿಸಿದ ರೈತನಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೀಟನಾಶಕ ಸೇವಿಸಿದ್ದರಿಂದ ಆತನನ್ನು ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂವರು ವ್ಯಕ್ತಿಗಳು ತನ್ನ ಟ್ರ್ಯಾಕ್ಟರ್‌ ಕಸಿದು ಕಿರುಕುಳ ನೀಡಿದ್ದಾರೆ ಎಂದು ವಿಡಿಯೋದಲ್ಲಿ ಆತ ದೂರಿದ್ದಾನೆ.

ಕೊಪ್ಪಳ: ಶಾಲಾ ಆವರಣದಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

ವಿಷಪ್ರಾಷನ ಮಾಡುವ ಮುಂಚೆ ತನ್ನ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದು, ಮೂವರು ಆರೋಪಿಗಳ ಹೆಸರನ್ನು ಹೇಳಿದ್ದಾನೆ. ಆರೋಪಿಗಳು ತನ್ನ ಟ್ರ್ಯಾಕ್ಟರ್‌ ಕಸಿದುಕೊಂಡಿದ್ದು ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಿದ್ದಾನೆ.