*  ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಬಳಿ ನಡೆದ ಘಟನೆ*  ಬೆಂಗಳೂರಿಗೆ ದುಡಿಯಲು ಹೋಗುವುದಾಗಿ ಹಠ ಹಿಡಿದಿದ್ದ ಬಾಲಕ*  ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ 

ಕೊಪ್ಪಳ(ಆ.26): ದುಡಿಯಲು ಬೆಂಗಳೂರಿಗೆ ತೆರಳುವುದಾಗಿ ಹಠ ಹಿಡಿದ ವಿದ್ಯಾರ್ಥಿಯೊಬ್ಬ ಕುಟುಂಬದ ಸದಸ್ಯರೊಡನೆ ಜಗಳವಾಡಿ ಶಾಲಾ ಆವರಣದಲ್ಲಿ ನೇಣಿಗೆ ಶರಣಾದ ಘಟನೆ ಕಾರಟಗಿ ತಾಲೂಕಿನ ಹಗೇದಾಳ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಳ್ಳೂರು-ಹಗೇದಾಳದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ರಮೇಶ ಭೋಗಾಪುರ(16) ತನ್ನ ಶಾಲೆಯ ಆವರಣದಲ್ಲೇ ಮಂಗಳವಾರ ತಡರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.

ಸಾಲಗಾರರ ಕಾಟಕ್ಕೆ ಹೆದರಿ ಸ್ನಾತಕೋತ್ತರ ಪದವೀಧರ ರೈತ ಆತ್ಮಹತ್ಯೆ

ಬೆಂಗಳೂರಿಗೆ ದುಡಿಯಲು ಹೋಗುವುದಾಗಿ ಹಠ ಹಿಡಿದಿದ್ದ ಬಾಲಕ, ಮನೆಯವರು ಒಪ್ಪದ ಕಾರಣ, ಮಂಗಳವಾರ ಸಂಜೆ ತನ್ನ ಮನೆಯಲ್ಲಿ ಹಿರಿಯರೊಂದಿಗೆ ಜಗಳವಾಡಿದ್ದ. ಪಾಲಕರು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.