Asianet Suvarna News Asianet Suvarna News

ಅರ್ಜೆಂಟ್‌ಲ್ಲಿ ರಿಸರ್ವ್ ಬದಲು ರಿವರ್ಸ್ ಬ್ಯಾಂಕ್ ಎಂದು ಮುದ್ರಣ, 26 ಕೋಟಿ ರೂ ವಶಪಡಿಸಿದ ಪೊಲೀಸರೇ ದಂಗು!

ಖೋಟಾ ನೋಟು ಮುದ್ರಿಸುತ್ತಿದ್ದ ಕಳ್ಳರಿಗೆ ಒಂದೇ ದಿನ ಕೋಟ್ಯಾಧೀಶರಾಗುವ ಕನಸು. ತರಾತುರಿಯಲ್ಲಿ ಖೋಟಾ ನೋಟು ಮುದ್ರಿಸಿದ್ದಾರೆ. ಆದರೆ ಈ ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಬದಲು ರಿವರ್ಸ್ ಬ್ಯಾಂಕ್ ಎಂದು ಮುದ್ರಿಸಿದ್ದಾರೆ. ಇದೇ ನೋಟನ್ನು ಮಾರುಕಟ್ಟಯಲ್ಲಿ ಚಲಾವಣೆ ಮಾಡಿಸಲು ಹೊರಟ ಕಳ್ಳರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ನೋಟು ವಶಪಡಿಸಿಕೊಂಡ ಪೊಲೀಸರಿಗೆ ಅಚ್ಚರಿಯೊಂದು ಕಾದಿದೆ.

Fake currency notes with face value of Rs 26 crore were seized printed Reverse Bank of India instead of Reserve in Surat ckm
Author
First Published Oct 4, 2022, 7:39 PM IST

ಸೂರತ್(ಅ.04): ಖೋಟಾ ನೋಟು ಹಾವಳಿ ಭಾರತದಲ್ಲಿ ಅತೀ ದೊಡ್ಡ ಸಾವಲು. ಇದನ್ನು ಮಟ್ಟ ಹಾಕಲು ಪೊಲೀಸರು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇನ್ನು ಖೋಟಾ ನೋಟು ಹಾಗೂ ಅಸಲಿ ನೋಟಿಗೆ ಕೂದಲೆಳೆಯುವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಇಲ್ಲೊಂದು ಖದೀಮರ ಗ್ಯಾಂಗ್ 2,000 ರೂಪಾಯಿ ಮುಖಬೆಲೆಯ ಕಳ್ಳ ನೋಟು ಮುದ್ರಿಸಿದ್ದಾರೆ. ತರಾತುರಿಯಲ್ಲಿ ಖದೀಮರು ರಿಸರ್ವ್ ಬ್ಯಾಂಕ್ ಬದಲು ರಿವರ್ಸ್ ಬ್ಯಾಂಕ್ ಎಂದು ಮುದ್ರಿಸಿದ್ದಾರೆ. ಮೊದಲೇ ಇದು ಖೋಟಾ ನೋಟು, ಮುದ್ರಿಸಿರುವ ಸ್ಪೆಲ್ಲಿಂಗ್ ಕೂಡ ತಪ್ಪು. ಆದರೆ ಕಳ್ಳರಿಗೆ ಇದ್ಯಾವುದು ಗಮನಕ್ಕೆ ಬಂದೇ ಇಲ್ಲ. ಬರೋಬ್ಬರಿ 26 ಕೋಟಿ ರೂಪಾಯಿ ಖೋಟಾ ನೋಟು ಮುದ್ರಿಸಿ ಆ್ಯಂಬುಲೆನ್ಸ್ ಮೂಲಕ ಸಾಗಿಸಲು ಯತ್ನಿಸಿದ್ದಾರೆ. ಆದರೆ ಈ ಮಾಹಿತಿ ಪಡೆದ ಪೊಲೀಸರು ಖದೀಮರ ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ಖೋಟಾ ನೋಟು ಹಾಗೂ ಅಸಲಿ ನೋಟಿನಲ್ಲಿರುವ ವ್ಯತ್ಯಾಸ ಪರಿಶೀಲಿಸಿದಾಗ ಪೊಲೀಸರಿಗೆ ರಿಸರ್ವ್ ಬ್ಯಾಂಕ್ ಸ್ಪೆಲ್ಲಿಂಗ್ ತಪ್ಪಾಗಿ ಮುದ್ರಿಸಿರುವುದು ಬೆಳಕಿಗೆ ಬಂದಿದೆ. ಈ ಖದೀಮರ ಗ್ಯಾಂಗ್ ಇದೀಗ ಗುಜರಾತ್‌ನ ಸೂರತ್ ಪೊಲೀಸರ ಅತಿಥಿಗಳಾಗಿದ್ದಾರೆ.

ಸೂರತ್‌ನಲ್ಲಿನ ಈ ಖದೀಮರ ಗ್ಯಾಂಗ್ ಖೋಟಾ ನೋಟು ಮುದ್ರಿಸಿ ಒಂದೇ ದಿನದಲ್ಲಿ ಕೋಟ್ಯಾಧೀಶರಾಗುವ ಕನಸು ಕಂಡಿತ್ತು. ಇದಕ್ಕಾಗಿ ರಹಸ್ಯವಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಸೂರತ್‌ನ ಆಸ್ಪತ್ರೆಯ ಆ್ಯಂಬುಲೆನ್ಸ್ ಪಡೆದ ಈ ಖದೀಮರು, 1,290 ಬಂಡಲ್ ನೋಟುಗಳನ್ನು ಮುದ್ರಿಸಿದ್ದಾರೆ. 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಪೆಟ್ಟಿಯಲ್ಲಿ ಇಡಲಾಗಿತ್ತು. ಬಳಿಕ ಆ್ಯಂಬುಲೆನ್ಸ್‌ಗೆ ತುಂಬಿಸಿ, ಸೈರನ್ ಮಾಡುತ್ತಾ ಸೂರತ್‌ನಲ್ಲಿ ಸಾಗಾಟ ಮಾಡಲು ಮುಂದಾಗಿತ್ತು. 

ಚಿಕ್ಕೋಡಿ: ಖೋಟಾ ನೋಟು ಜಾಲ ಪತ್ತೆ: ಮುಗ್ದ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್

ಆ್ಯಂಬುಲೆನ್ಸ್ ಸೈರನ್ ಮಾಡುತ್ತಾ ವೇಗವಾಗಿ ಸಾಗುತ್ತಿತ್ತು. ಆದರೆ ಈ ಕುರಿತು ಸಣ್ಣ ಸುಳಿವು ಪಡೆದ ಸೂರತ್ ಪೊಲೀಸರು ಎಲ್ಲಾ ಚೆಕ್‌ಪೋಸ್ಚ್‌ಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ಆ್ಯಂಬುಲೆನ್ಸ್ ತೆಡದ ಪೊಲೀಸರು ಕಂತು ಕಂತುಗಳಲ್ಲಿಟ್ಟ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳನ್ನು ಪರಿಶೀಲಿಸಿದ ಪೊಲೀಸರೇ ದಂಗಾಗಿದ್ದಾರೆ. ನೋಟುಗಳಲ್ಲಿನ ರಿಸರ್ವ್ ಬ್ಯಾಂಕ್ ಮಾತ್ರವಲ್ಲ ಹಲವು ಅಕ್ಷರಗಳು ತಪ್ಪಾಗಿದೆ. 

ಖದೀಮರ ಗ್ಯಾಂಗನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಈ ಗ್ಯಾಂಗ್ ಈ ಹಿಂದೆಯೋ ಖೋಟಾ ನೋಟು ಮುದ್ರಿಸಿ ಹಂಚಿರುವ ಸಾಧ್ಯತೆಗಳನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಜಾಲ ಪತ್ತೆ ಹಚ್ಚಲು ವಿಚಾರಣೆ ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ.

ಗುಜರಾತ್: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವಿದ್ಯಾರ್ಥಿ ಬಂಧನ: ಪಾಕ್ ಕೈವಾಡ ಶಂಕೆ
 

Follow Us:
Download App:
  • android
  • ios