Asianet Suvarna News Asianet Suvarna News

8 ತಿಂಗಳ ಸಲುಗೆ, ಶಿಕ್ಷಕಿ ಅಪಹರಿಸಿ ಅತ್ಯಾಚಾರ ಎಸೆಗಿದ ಫೇಸ್‌ಬುಕ್ ಗೆಳೆಯ!

  • ಫೇಸ್‌ಬುಕ್ ಮೂಲಕ ಪರಿಚಯ, ಗೆಳತನಕ್ಕೆ ತಿರುಗಿದ ಸಂಬಂಧ
  • ದೈಹಿಕ ಸಂಪರ್ಕಕ್ಕೆ ಒತ್ತಾಯ, ತಿರಸ್ಕರಿಸಿದ ಶಿಕ್ಷಕಿಯ ಅಪಹರಿಸಿದ ಗೆಳೆಯ
  • ಅತ್ಯಾಚಾರ ಎಸಗಿದ ಗೆಳಯ ಪೊಲೀಸರ ಅತಿಥಿ
Facebook friend kidnap female teacher and raped Ahmedabad polie arrest accused ckm
Author
Bengaluru, First Published Oct 12, 2021, 6:00 PM IST
  • Facebook
  • Twitter
  • Whatsapp

ಅಹಮ್ಮದಾಬಾದ್(ಅ.12): ಸಾಮಾಜಿಕ ಜಾಲತಾಣದಲ್ಲಿ(Social Media) ಪರಿಚಯವಾಗಿ, ಪರಿಯ ಸ್ನೇಹವಾಗಿ ಬಳಿಕ ದುರಂತ ನಡೆದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಈ ಬಾರಿ ಈ ಕೂಪದೊಳಕ್ಕೆ ಸಿಲುಕಿದ್ದು ಶಿಕ್ಷಕಿ(Teacher) ಅನ್ನೋದು ವಿಪರ್ಯಾಸ. 8 ತಿಂಗಳ ಹಿಂದೆ ಫೇಸ್‌ಬುಕ್(Facebook) ಮೂಲಕ ಪರಿಚಯವಾದ ಗೆಳೆಯ ರೂಪೇಶ್ ಪಟೇಲ್ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ಆದರೆ ತಿರಸ್ಕರಿಸಿದ ಶಿಕ್ಷಕಿಯನ್ನು ಅಪಹರಿಸಿ ಅತ್ಯಾಚಾರ ಎಸೆಗಿದ ಘಟನೆ ಅಹಮ್ಮದಾಬಾದ್‌ನಲ್ಲಿ(Ahmedabad) ನಡೆದಿದೆ

10 ವರ್ಷ ಚಿಕ್ಕವನ ಜೊತೆ ವಿವಾಹಪೂರ್ವ ಸಮ್ಮತಿ ಸೆಕ್ಸ್ : ಅತ್ಯಾಚಾರ ಕೇಸ್‌ಗೆ ಮಹತ್ವದ ತೀರ್ಪು

ಗಟೋಲ್ದಿಯಾ ಪ್ರದೇಶದ 40ರ ಹರೆಯದ ಶಿಕ್ಷಕಿಗೆ 8 ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಗೆಳಯನೊಬ್ಬ(Friend) ಪರಿಚಯವಾಗಿದ್ದ. 33 ವರ್ಷದ ಈತನ ಹೆಸರು ರೂಪೇಶ್ ಪಟೇಲ್. ಫೇಸ್‌ಕಬುಕ್ ಮೂಲಕ ಶಿಕ್ಷಕಿಯ ಜೊತೆ ಗೆಳೆತನ ಆರಂಭಗೊಂಡಿದೆ. ಚಾಟಿಂಗ್ ಮೂಲಕ ಆರಂಭಗೊಂಡಿದ್ದ ಇವರ ಗೆಳೆತನ, ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪ್ರತಿ ದಿನ ಕರೆ ಮಾಡಿ ಮಾತನಾಡುವಷ್ಟರ ಮಟ್ಟಿಗೆ ತಲುಪಿದೆ.

ಇಲ್ಲೆ ನೋಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಿದ್ದ ಶಿಕ್ಷಕಿ ದಾರಿ ತಪ್ಪಿದ್ದು. 8 ತಿಂಗಳ ಸಲುಗೆಯಿಂದ ದೈಹಿಕ ಸಂಬಂಧಕ್ಕೆ ರೂಪೇಶ್ ಪಟೇಲ್ ಒತ್ತಾಯಿಸಿದ್ದಾನೆ. ಆತನ ಒತ್ತಾಯ ತಿರಸ್ಕರಿಸಿದ್ದ ಶಿಕ್ಷಕಿಗೆ ಪಾಠ ಕಲಿಸಲು ರೂಪೇಶ್ ಮುಂದಾಗಿದ್ದ. ಹೀಗಾಗಿ ಹೊಂಚು ಹಾಕಿದ್ದ ರೂಪೇಶ್ ಶಿಕ್ಷಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಂಟ್ವಾಳದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ : ನಾಲ್ವರು ಅರೆಸ್ಟ್

ವಸ್ತ್ರಾಲ್ ಬಳಿ ಇರುವ ವಾಣಿಜ್ಯ ಕಟ್ಟದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕಿ ನೀಡಿದ ದೂರಿನ ಆಧಾರದಲ್ಲಿ ಗಟೋಲ್ದಿಯಾ ಪೊಲೀಸರು ರೂಪೇಶ್ ಪಟೇಲ್‌ನನ್ನು ಬಂಧಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಸರಣಿ ಅತ್ಯಾಚಾರ:
ಅಹಮ್ಮದಾಬಾದ್‌ನಲ್ಲಿ ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಲಾಗಿದ್ದರೆ, ಉತ್ತರ ಪ್ರದೇಶದ ಜೇವಾರ ಪ್ರದೇಶದ ಬಳಿ ಮಹಿಳೆಯ ತಲೆಗೆ ಪಿಸ್ತೂಲ್ ಹಿಡಿದು ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ನಾಲ್ವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.

ರೇಪ್‌ ಸಂತ್ರಸ್ತೆಯ ಕನ್ಯತ್ವ ಪರೀಕ್ಷೆಗೆ Two Finger Test, ಮಹಿಳಾ ಅಧಿಕಾರಿಯ ನೋವಿನ ಕತೆ!

ಮಜಾಫರ್‌ನಗರದಲ್ಲಿ ಮತ್ತೊಂದು ಅತ್ಯಾಚಾರ ಘಟನೆ ನಡೆದಿದೆ. 17 ವರ್ಷ ಬಾಲಕಿಯನ್ನು ಅಪಹರಿಸಿ ಗನ್ ಹಿಡಿದು ಕೊಲ್ಲುವುದಾಗಿ ಬೆದರಿಸಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಬಾಲಕಿ ತಂದೆ ದೂರು ನೀಡಿದ್ದಾರೆ. ಮನೆಯಿಂದ ಕಸ ಬಿಸಾಡಲು ಹೊರಗೆ ಹೋದ ವೇಳೆ ಮೂವರು ಕಾಮುಕರು ಆಕೆಯನ್ನು ಅಪಹರಿಸಿ ಪಕ್ಕದ ಕಾಡಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ಇದೀಗ ಈ ಮೂವರಿಗಾಗಗಿ ಪೊಲೀಸರು ಬಲೆ ಬೀಸಿದ್ದಾರೆ.

Follow Us:
Download App:
  • android
  • ios