Asianet Suvarna News Asianet Suvarna News

10 ವರ್ಷ ಚಿಕ್ಕವನ ಜೊತೆ ವಿವಾಹಪೂರ್ವ ಸಮ್ಮತಿ ಸೆಕ್ಸ್ : ಅತ್ಯಾಚಾರ ಕೇಸ್‌ಗೆ ಮಹತ್ವದ ತೀರ್ಪು

  • ವಿವಾಹ ಪೂರ್ವದಲ್ಲಿ ಪರಸ್ಪರ ಸಮ್ಮತಿಯ ಮೇಲೆ ನಡೆಯುವ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ
  • ಚಾಮರಾಜನಗರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಮಹತ್ವದ ತೀರ್ಪು
Sex on promise of marriage is not   rape Chamarajanagar  Court snr
Author
Bengaluru, First Published Oct 12, 2021, 9:45 AM IST
  • Facebook
  • Twitter
  • Whatsapp

ಚಾಮರಾಜನಗರ (ಅ.12):  ವಿವಾಹ (Marriage) ಪೂರ್ವದಲ್ಲಿ ಪರಸ್ಪರ ಸಮ್ಮತಿಯ ಮೇಲೆ ನಡೆಯುವ ಲೈಂಗಿಕ ಸಂಬಂಧವು (Sexual relationship) ಅತ್ಯಾಚಾರವಲ್ಲ (Rape) ಎಂದು ಚಾಮರಾಜನಗರ (chamarajnagar) ಜಿಲ್ಲಾ ಸೆಷನ್ಸ್‌ ನ್ಯಾಯಾಲಯ (Court) ಮಹತ್ವದ ತೀರ್ಪು ನೀಡಿದೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಯಲ್ಲಿ (Police Station) ಕಾನ್ಸ್‌ಟೇಬಲ್‌ ಆಗಿದ್ದ ನಂದಕುಮಾರ್‌ ವಿರುದ್ಧ ಅದೇ ಠಾಣೆಯ ಮಹಿಳಾ ಕಾನ್ಸ್‌ಟೇಬಲ್‌ ಒಬ್ಬರು ’’ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದಾರೆ’’ ಎಂದು 2018ರ ಜೂನ್‌ 6ರಂದು ಮಲೆಮಹದೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಲಿವ್-ಇನ್ ಸಂಬಂಧ: ಗಂಡನಿಂದ ರಕ್ಷಣೆ ಬೇಕೆಂದ ಮಹಿಳೆಗೆ ಕೋರ್ಟ್ ಹೇಳಿದ್ದಿಷ್ಟು

ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ (Judge) ಸದಾಶಿವ ಎಸ್‌.ಸುಲ್ತಾನಪುರಿ (Sadashiva S Sultanpuri) ಅವರು, ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಪಡೆದಿದ್ದ ಆರೋಪಿಯು ಒಪ್ಪಿಗೆ ಪಡೆಯುವ ವೇಳೆ ಅಪರಾಧಿಕ ಮನಸ್ಥಿತಿಯನ್ನು ಹೊಂದಿರಲಿಲ್ಲ. 

ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

ಆರೋಪಿಯು ಸಂತ್ರಸ್ತೆಗಿಂತ 10 ವರ್ಷ ಚಿಕ್ಕವನಾಗಿದ್ದು, ಸ್ನೇಹಿತರಾಗಿದ್ದರು (Friend). ಅಪರಾಧ ಎಸಗುವ ಉದ್ದೇಶದಿಂದಲೇ ಲೈಂಗಿಕ ಸಂಬಂಧ ಬೆಳೆಸಿಲ್ಲ. ಆರೋಪಿ ಹಾಗೂ ಸಂತ್ರಸ್ತಳ ವೈವಾಹಿಕ ಪೂರ್ವ ಸಂಬಂಧದ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಕು ಉಂಟಾಗಿ ಮದುವೆಯಾಗಲು ಅಡ್ಡಿಯಾದರೆ, ಅದು ಅಪರಾಧಿಕ ಮನಸ್ಥಿತಿಯಲ್ಲ. ಹಾಗಾಗಿ ಆರೋಪಿಯ ವರ್ತನೆ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಪ್ರಕರಣವನ್ನು ವಜಾಗೊಳಿಸಿದ್ದಾರೆ.

 ಆತನೊಬ್ಬ ಹುಡುಗಿಯರ ಹುಚ್ಚ, ಐದು ವರ್ಷದ ಪ್ರೀತಿ, ಫೇಸ್ ಬುಕ್ ಪೋಸ್ಟ್!...

  ರೇಪ್‌ಗೂ ಸಮ್ಮತಿ ಸೆಕ್ಸ್‌ಗೂ ವ್ಯತ್ಯಾಸವಿದೆ: ಸುಪ್ರೀಂಕೋರ್ಟ್‌

ನವದೆಹಲಿ: ಲಿವ್‌ ಇನ್‌ ಸಂಬಂಧ ಹೊಂದಿರುವ ವ್ಯಕ್ತಿ ಒಂದು ವೇಳೆ ತನ್ನ ನಿಯಂತ್ರಣಕ್ಕೂ ಮೀರಿ ನಡೆದ ಸನ್ನಿವೇಶಗಳಿಂದಾಗಿ ತನ್ನ ಪ್ರೇಯಸಿಯನ್ನು ವಿವಾಹ ಆಗಲು ಸಾಧ್ಯವಾಗದೇ ಇದ್ದರೆ, ಅವರಿಬ್ಬರ ಮಧ್ಯೆ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್‌ (Supreme Court) ಹೇಳಿತ್ತು

ಲಿವ್‌ ಇನ್‌ ಸಂಬಂಧ ಹೊಂದಿದ್ದ ಮಹಾರಾಷ್ಟ್ರ ಮೂಲದ ನರ್ಸ್‌ವೊಬ್ಬಳು ದಾಖಲಿಸಿದ್ದ ಎಫ್‌ಐಆರ್‌ (FIR) ಅನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್‌, ‘ನೀವಿಬ್ಬರೂ ಬಹಳ ಸಮಯದಿಂದ ಲಿವ್‌ ಇನ್‌ ಸಂಬಂಧ ಹೊಂದಿದ್ದೀರಿ’ ಎಂದು ಹೇಳಿ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿತ್ತು.

ಅತ್ಯಾಚಾರ ಮತ್ತು ಸಮ್ಮತಿಯ ಸೆಕ್ಸ್‌ ಮಧ್ಯೆ ಸಾಕಷ್ಟುವ್ಯತ್ಯಾಸಗಳಿವೆ. ಇಂತಹ ಪ್ರಕರಣಗಳಲ್ಲಿ ಕೋರ್ಟ್‌ಗಳು ದೂರುದಾರನ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಲಿವ್‌ ಇನ್‌ ಸಂಬಂಧದ ವೇಳೆ ಆತ ಕಾಮದಾಸೆ ತೀರಿಸಿಕೊಳ್ಳಲು ಆರೋಪಿತ ವ್ಯಕ್ತಿ ಸುಳ್ಳು ಭರವಸೆಗಳನ್ನು ನೀಡಿದ್ದನೇ ಅಥವಾ ದುರುದ್ದೇಶದ ಸಂಬಂಧ ಅದಾಗಿತ್ತೇ? ಎನ್ನುವುದು ಮುಖ್ಯವಾಗುತ್ತದೆ ಎಂದು ಕೋರ್ಟ್‌ ಹೇಳಿದೆ.

ಇದೇ ವೇಳೆ, ಆರೋಪಿತ ವ್ಯಕ್ತಿ ಮಹಿಳೆಯನ್ನು ತಪ್ಪುದಾರಿಗೆ ಎಳೆಯುವ ಉದ್ದೇಶದಿಂದ ಭರವಸೆಗಳನ್ನು ನೀಡದೇ ಲೈಂಗಿಕ ಕ್ರಿಯೆಯಲ್ಲಿ ಸಮ್ಮತಿಯಿಂದ ತಡಗಿಕೊಂಡಿದ್ದರೂ ಅದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

Follow Us:
Download App:
  • android
  • ios